ದುಗಲಡ್ಕ ದನ ಸಾಗಾಟ ಪ್ರಕರಣ : ಎಸ್.ಡಿ.ಪಿ.ಐ ಹೇಳಿಕೆಗೆ ಭಜರಂಗದಳ ಖಂಡನೆ

Advt_Headding_Middle
Advt_Headding_Middle

 

ದುಗಲಡ್ಕದಲ್ಲಿ ನಿನ್ನೆ ಸಂಜೆ ದನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸ್.ಡಿ.ಪಿ.ಐ. ನೀಡಿರುವ ಹೇಳಿಕೆ ಖಂಡನೀಯ ಎಂದು ಭಜರಂಗದಳ ನಗರ ಸಹ ಸಂಚಾಲಕ ಅರವಿಂದ್ ಹೇಳಿದ್ದಾರೆ.

“ಎಸ್.ಡಿ.ಪಿ.ಐ. ಅಧ್ಯಕ್ಷರು ನೀಡಿದ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ದನ ಸಾಗಾಟ ನಡೆಸುವಾಗ ಅದರದೇ ಆದ ನಿಯಮಗಳಿರುತ್ತದೆ. ಅದನ್ನು ಪಾಲಿಸದೇ ದನ ಸಾಗಾಟ ಮಾಡುವುದು ಸರಿಯಲ್ಲ. ಹಾಗೆ ಕಂಡು ಬಂದರೆ ಅದನ್ನು ಹಿಡಿಯಬೇಕಾಗುತ್ತದೆ. ಎಸ್.ಡಿ.ಪಿ.ಐ. ಅಧ್ಯಕ್ಷರ ಯಾರ ಪರ ಇದ್ದಾರೆ ಅನ್ನುವುದನ್ನು ಅವರು ಸ್ಪಷ್ಟಪಡಿಸಬೇಕು. ಅಕ್ರಮ ಗೋ ಸಾಗಾಟಕ್ಕೆ ಬೆಂಬಲ ಇದೆಯೋ ಎನ್ನುವುದನ್ನು ತಿಳಿಸಬೇಕು ಎಂದು ಅರವಿಂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ಸುದ್ದಿ ಪತ್ರಿಕಾ ಕಚೇರಿ ಬಂದು ಅವರು ಹೇಳಿಕೆ ನೀಡಿದ್ದಾರೆ. ಅವರ ಜತೆಯಲ್ಲಿ ಸಂಜೀವ ಮಡಪ್ಪಾಡಿ ಇದ್ದರು. ಅವರು ಸುದ್ದಿಯೊಂದಿಗೆ ಮಾತನಾಡಿರುವ ವಿಡಿಯೋ ವನ್ನು ಇಲ್ಲಿ ಹಾಕಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.