ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ : ವಿದ್ಯಾರ್ಥಿಗಳ ಪ್ರಯಾಣಕ್ಕೆ ಬಸ್ ವ್ಯವಸ್ಥೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಇಲ್ಲಿದೆ ಬಸ್ ಸಂಚಾರದ ಫುಲ್ ಡಿಟೇಲ್ಸ್

ಸರಕಾರದ ಆದೇಶದಂತೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ನಡೆಯುವ ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳ ಪ್ರಯಾಣದ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸುಳ್ಯ, ಸುಬ್ರಹ್ಮಣ್ಯ, ಬೆಳ್ಳಾರೆ ವಲಯಗಳಲ್ಲಿ ಬಸ್ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಿದೆ.

advertisement

ಕೊಲ್ಲಮೊಗ್ರದಿಂದ ಬೆಳಿಗ್ಗೆ 7.30ಕ್ಕೆ ಹೊರಡುವ ಬಸ್ ಹರಿಹರಪಲ್ಲತ್ತಡ್ಕ ಗುತ್ತಿಗಾರು ಮಾರ್ಗವಾಗಿ ಸುಬ್ರಹ್ಮಣ್ಯ ತಲುಪಲಿದೆ. ಸುಬ್ರಹ್ಮಣ್ಯದಿಂದ ಬೆಳಿಗ್ಗೆ 8 ಗಂಟೆಗೆ ಹೊರಡುವ ಬಸ್ ಪಂಜ, ನಿಂತಿಕಲ್ಲು, ಕಾಣಿಯೂರು ಮಾರ್ಗವಾಗಿ ಪುತ್ತೂರು ತಲುಪಲಿದೆ. ಸುಬ್ರಹ್ಮಣ್ಯದಿಂದ ಬೆಳಿಗ್ಗೆ 7.45 ಕ್ಕೆ ಹೊರಡುವ ಬಸ್ ಪಂಜ ನಿಂತಿಕಲ್ಲು, ಬೆಳ್ಳಾರೆ ಮಾರ್ಗವಾಗಿ ಪುತ್ತೂರು ತಲುಪಲಿದೆ. ಸುಬ್ರಹನ್ಯದಿಂದ ಬೆಳಿಗ್ಗೆ 8 ಕ್ಕೆ ಕಡಬ ಉಪ್ಪಿನಂಗಡಿ ಮಾರ್ಗವಾಗಿ ತೆರಳುವ ಬಸ್ ಪುತ್ತೂರು ತಲುಪಲಿದೆ. ಸುಬ್ರಹ್ಮಣ್ಯದಿಂದ ಬೆ. 7.45 ಕ್ಕೆ ಕೆಂಜಾಳ, ಗುಂಡ್ಯ, ಶಿರಾಡಿ, ಉದನೆ ಮಾರ್ಗವಾಗಿ ಸಂಚರಿಸುವ ಬಸ್ ನೆಲ್ಯಾಡಿ ತಲುಪಲಿದೆ. ಸುಳ್ಯದಿಂದ ಬೆಳಿಗ್ಗೆ 7.3೦ಕ್ಕೆ ಹೊರಡುವ ಬಸ್ ಬೆಳ್ಳಾರೆ,ನಿಂತಿಕಲ್ಲು ಪಂಜ ಮಾರ್ಗವಾಗಿ ಸುಬ್ರಹ್ಮಣ್ಯ ತಲುಪಲಿದೆ. ಬೆಳಿಗ್ಗೆ 7.15 ಕ್ಕೆ ಕೊಯನಾಡಿನಿಂದ ಹೊರಡುವ ಬಸ್ ಕಲ್ಲುಗುಂಡಿ, ಅರಂತೋಡು ಮಾರ್ಗವಾಗಿ ಸುಳ್ಯ ತಲುಪಲಿದೆ. ಬೆಳಿಗ್ಗೆ 7 ಕ್ಕೆ ಕಡಬದಿಂದ ಹೊರಡುವ ಬಸ್ ಎಡಮಂಗಲ, ನಿಂತಿಕಲ್ಲು, ಬೆಳ್ಳಾರೆ ಮಾರ್ಗವಾಗಿ ಸುಳ್ಯ ತಲುಪಲಿದೆ.

advertisement

ಸುಳ್ಯದಿಂದ ಬೆಳಿಗ್ಗೆ 7.3೦ಕ್ಕೆ ನಡುಗಲ್ಲು ಗುತ್ತಿಗಾರು ಮಾರ್ಗವಾಗಿ ತೆರಳುವ ಬಸ್ ಸುಬ್ರಹ್ಮಣ್ಯ ತಲುಪಲಿದೆ. ಮಂಡೆಕೋಲಿನಿಂದ ಬೆಳಿಗ್ಗೆ 8.15 ಕ್ಕೆ ಹೊರಡುವ ಬಸ್ ಅಜ್ಜಾವರ ಮಾರ್ಗವಾಗಿ ಸುಳ್ಯ ತಲುಪಲಿದೆ. ಅಪರಾಹ್ನ 2 ಗಂಟೆಗೆ ಸುಬ್ರಹ್ಮಣ್ಯದಿಂದ ಹೊರಡುವ ಬಸ್ ಗುತ್ತಿಗಾರು ಹರಿಹರ ಪಲ್ಲತ್ತಡ್ಕ ಮಾರ್ಗವಾಗಿ ಕೊಲ್ಲಮೊಗ್ರ ತಲುಪಲಿದೆ.
ಪರೀಕ್ಷಾ ಸಮಯ ಮುಗಿದ ನಂತರ ವಿದ್ಯಾರ್ಥಿಗಳು ಮನೆಗೆ ಹಿಂತಿರುಗಲು ಅನುಕೂಲವಾಗುವಂತೆ ಬಸ್‌ಗಳನ್ನು ನಿಯೋಜಿಸಲು ಎಲ್ಲಾ ಸಂಚಾರ ನಿಯಂತ್ರಣ ಕೇಂದ್ರದ ಸಂಚಾರ ನಿಯಂತ್ರಕರಿಗೆ ಸೂಚಿಸಲಾಗಿದೆ. ಹೆಚ್ಚಿನ ಮಾಡಿತಿಗಾಗಿ ಸುಳ್ಯದ ಘಟಕ ವ್ಯವಸ್ಥಾಪಕರನ್ನು ( 7625097356) ಅಥವಾ ಸುಳ್ಯ ಬಸ್ ನಿಲ್ದಾಣವನ್ನು (08257 – 230684) ಸಂಪರ್ಕಿಸಬಹುದು.

ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟ ಪಿ.ಯು.ಸಿ. ಇಂಗ್ಲಿಷ್ ಪರೀಕ್ಷೆ ಜೂ.18 ರಂದು ನಡೆಯಲಿದ್ದು, ಎಸ್.ಎಸ್.ಎಲ್.ಸಿ.‌ ಪರೀಕ್ಷೆ ಜೂ.25 ರಿಂದ ಆರಂಭ ವಾಗಲಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾಲೂಕಿನ ಎಲ್ಲ ಪ್ರದೇಶಗಳ ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ. ಈ ಬಸ್ ವ್ಯವಸ್ಥೆ ಕಲ್ಪಿಸಿದೆ.

Advt_NewsUnder_1
Advt_NewsUnder_1

About The Author

Related posts

2 Comments

  1. Joylin Maria

    I want old news paper. I searched for it in whole the website it was decembers paper please provide it for me I want only the image.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.