ಸುಳ್ಯದಲ್ಲಿ ಮೂರನೇ ಕೊರೊನಾ ಪ್ರಕರಣ ಹಿನ್ನೆಲೆ : ಸೋಂಕಿತ ವ್ಯಕ್ತಿ ಮಂಗಳೂರು ಕೋವಿಡ್ ಆಸ್ಪತ್ರೆಗೆ ಶಿಪ್ಟ್

Advt_Headding_Middle
Advt_Headding_Middle

 

ಯಾರಿಗೆಲ್ಲಾ ಕ್ವಾರಂಟೇನ್? – ಸಿದ್ಧಗೊಳ್ಳುತ್ತಿದೆ ಸಂಪರ್ಕಿತರ ಪಟ್ಟಿ

ವಾರದ ಹಿಂದೆ ಮಹಾರಾಷ್ಟ್ರ ದಿಂದ ಬಂದು ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಅಜ್ಜಾವರ ಗ್ರಾಮದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ.


ಆ ಮೂಲಕ ತಾಲೂಕಿನಲ್ಲಿ ಕೊರೋನಾ ಪ್ರಕರಣ ಮೂರಕ್ಕೆ ಏರಿಕೆಯಾಗಿದ್ದು, ಅಜ್ಜಾವರ ಗ್ರಾಮದಲ್ಲಿ ಇದು ಎರಡನೇ ಪ್ರಕರಣವಾಗಿದೆ.

ಅಜ್ಜಾವರ ಗ್ರಾಮದ ೬೦ ವರ್ಷ ವಯಸ್ಸಿನವರಾದ ಇವರು ಮಹಾರಾಷ್ಟ್ರದಿಂದ ಬಂದು ಶಾಲೆಯೊಂದರಲ್ಲಿ ಸಾಂಸ್ಥಿಕ ಕ್ವಾರಂಟೇನ್ ನಲ್ಲಿದ್ದರು. ಸೋಮವಾರ ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊರೋನಾ ಸೋಂಕು ದೃಢಪಟ್ಟಿದೆ. ಅವರನ್ನು ಇದೀಗ ಮಂಗಳೂರು ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಈ ವ್ಯಕ್ತಿಗೆ ಆಹಾರ ಕೊಂಡೊಯ್ದವರೂ ಸೇರಿದಂತೆ ಅವರ ಪ್ರಾಥಮಿಕ ಸಂಪರ್ಕಿತರ ಹಾಗೂ ದ್ವಿತೀಯ ಸಂಪರ್ಕಿತರ ಪಟ್ಟಿ ಇನ್ನಷ್ಟೇ ತಯಾರಾಗಬೇಕಾಗಿದ್ದು, ಯಾರೆಲ್ಲಾ ಕ್ವಾರಂಟೇನ್ ಗೆ ಒಳಗಾಗಲಿದ್ದಾರೆ ಎಂದು ತಿಳಿಯಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.