Breaking News

ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಗುಳಿಕ್ಕಾನ ಅಧ್ಯಯನ ಭೇಟಿ

Advt_Headding_Middle
Advt_Headding_Middle

ಮಲೆನಾಡು ಜನಹಿತ ರಕ್ಷಣಾ ವೇದಿಕೆಯವರು ಜೂ.17 ರಂದು ಕಲ್ಮಕಾರಿನ ಗುಳಿಕ್ಕಾನಕ್ಕೆ ಅಧ್ಯಯನಕ್ಕಾಗಿ
ಭೇಟಿ  ನೀಡಿದರು.

ಕಳೆದ ಮೂರು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಗುಳಿಕ್ಕಾನ ಭಾಗದ ಗುಡ್ಡವೊಂದು ಕುಸಿದು ಜಾರಿ ಕುಳಿತಿತ್ತು. ಇದರಿಂದ ಕಳೆದ ಮೂರು ವರ್ಷಗಳಿಂದ ಮಳೆಗಾಲ ಇಲ್ಲಿನ 10 ಮನೆಯವರಿಗೆ ತಾತ್ಕಾಲಿಕ ನಿರಾಶ್ರಿತರ ಕೇಂದ್ರ ತೆರೆಯಲಾಗುತಿತ್ತು.

ಜೂ.17 ರಂದು ಭೇಟಿ ನೀಡಿದ್ದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಇಲ್ಲಿನವರ ತೊಂದರೆಗಳನ್ನು ಅಧ್ಯಯನ ಮಾಡಿದ್ದು ಸರ್ಕಾರದಿಂದ ಪುನರ್ವಸತಿ ಕಲ್ಪಿಸುವ ಸಲುವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದಲ್ಲದೆ, ಸದ್ಯದಲ್ಲೇ ವೇದಿಕೆ ವತಿಯಿಂದ ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಒತ್ತಾಯಿಸುವುದಾಗಿ ತಿಳಿಸಿದ್ದಾರೆ .

ಈ ವೇಳೆ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಸದಸ್ಯರಾದ ಜಯಪ್ರಕಾಶ್ ಕೂಜುಗೋಡು, ರವೀಂದ್ರ ಕುಮಾರ್ ರುದ್ರಪಾ‍ದ, ಸತೀಶ್ ಟಿ.ಎನ್ , ಭರತ್ ಕನ್ನಡ್ಕ, ಭಾನುಪ್ರಕಾಶ್, ಶೇಖರಪ್ಪ ಬೆಂಡೋಡಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.