ಗುರುoಪು -ನಾಗಪಟ್ಟಣ ರಸ್ತೆ ಕಾಂಕ್ರಿಟೀಕರಣದಲ್ಲಿ ಬಿರುಕು ನ.ಪಂ. ಸದಸ್ಯರಿಂದ ತನಿಖೆಗೆ ಒತ್ತಾಯ

Advt_Headding_Middle
Advt_Headding_Middle

ಗುರುoಪು ನಾಗಪಟ್ಟಣ ರಸ್ತೆ ಕಾಂಕ್ರಿಟೀಕರಣ ಕೆಲಸವು ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು ಇದೀಗ ಕಾಮಗಾರಿ ಸಂಪೂರ್ಣಗೊಂಡಿದೆ. ಆಲೆಟ್ಟಿ ಗ್ರಾಮ ಪಂಚಯತ್ ನ ಮಾಜಿ ಅದ್ಯಕ್ಷರಾದ ಮುತ್ತಪ್ಪ ಪೂಜಾರಿ ಕೆಲಸ ನಡೆಯುತ್ತಿರುವ ಸಂದರ್ಭದಲ್ಲಿ ಕಳಪೆ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರನ್ನು ತರಾಟೆಗೆತ್ತಿಕೊಂಡಿದ್ದರು.

ಸಮರ್ಪಕ ರೀತಿಯಲ್ಲಿ ಕಾಮಗಾರಿ ಮಾಡುವುದಾಗಿ ಗುತ್ತಿಗೆದಾರರು ಉತ್ತರಿಸಿದ್ದರು. ಇದೀಗ ರಸ್ತೆ ಕಾಂಕ್ರಿಟೀಕರಣ ಪೂರ್ಣಗೊಂಡಿದೆ ಇನ್ನೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಮುನ್ನವೇ ಕಾಂಕ್ರೀಟಿಕರಣಗೊಂಡಲ್ಲಿ ಬಿರುಕು ಕಾಣಿಸಿಕೊಂಡಿದೆ.

https://youtu.be/6hiQ7Kiukkw

ಇದನ್ನು ಪರಿಶೀಲಿಸಲು ಜೂ.18 ರಂದು ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡ , ಉಮ್ಮರ್ , ರಿಯಾಜ್ ಕಟ್ಟೆಕಾರ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆಯು ಮೂರು ಕಡೆಗಳಲ್ಲಿ ಬಿರುಕು ಬಿಟ್ಟಿರುವುದು ಕಂಡು ಬಂದಿದೆ . ಈ ಕುರಿತು ಶೀಘ್ರವಾಗಿ ತನಿಖೆ ನಡೆಸುವಂತೆ ವೆಂಕಪ್ಪ ಗೌಡ ರವರು ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.