ಜಾಲ್ಸೂರು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Advt_Headding_Middle
Advt_Headding_Middle
Advt_Headding_Middle

ವ್ಯಕ್ತಿಯೋರ್ವರು ತಮ್ಮ ಮನೆಯ ಸಮೀಪದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ. 16ರಂದು ಅಪರಾಹ್ನ ಜಾಲ್ಸೂರು ಗ್ರಾಮದ ಮಹಾಬಲಡ್ಕ ಎಂಬಲ್ಲಿ ಸಂಭವಿಸಿದೆ.


ಜಾಲ್ಸೂರು ಗ್ರಾಮದ ಮಹಾಬಲಡ್ಕ ನಿವಾಸಿಯಾಗಿರುವ ಜಾನಪ್ಪ ನಾಯ್ಕ ಎಂಬವರು ಅಪರಾಹ್ನ ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಸಮೀಪವಿರುವ ಅಂಬಟೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮೊಮ್ಮಗ ಮನೆಗೆ ಬಂದು ಕರೆದಾಗ ಯಾರೂ ಮಾತನಾಡದ್ದರಿಂದ ಹೊರಗೆ ಹುಡುಕಾಡಿದಾಗ ಮನೆಯ ಸಮೀಪವಿರುವ ಅಂಬಟೆ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂತು. ತಕ್ಷಣ ಆ ಹುಡುಗ ಸಮೀಪದಲ್ಲಿರುವ ತನ್ನ ಮನೆಗೆ ಬಂದು ತಾಯಿಗೆ ವಿಷಯ ತಿಳಿಸಿದರು. ಬಳಿಕ ವಿಷಯ ಅಕ್ಕಪಕ್ಕದವರಿಗೆ ತಿಳಿದು ಪೊಲೀಸರಿಗೆ ವಿಷಯ ತಿಳಿಸಲಾಯಿತು. ಪೊಲೀಸರು ಬಂದ ಬಳಿಕ ಮೃತದೇಹವನ್ನು ಕೆಳಗಿಳಿಸಿ, ಸುಳ್ಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆಯವರಿಗೆ ಹಸ್ತಾಂತರಿಸಲಾಯಿತು.ಜಾಹೀರಾತು
ಮೃತ ಜಾನಪ್ಪ ನಾಯ್ಕ ಅವರಿಗೆ 59 ವರ್ಷ ವಯಸ್ಸಾಗಿದ್ದು , ಅವರ ಪತ್ನಿ ಈ ಮೊದಲೇ ಅಗಲಿದ್ದರು. ಮೃತರು ಪುತ್ರರಾದ ಗೋಪಾಲ, ಉಮನಾಥ, ಪ್ರವೀಣ, ಓರ್ವ ಪುತ್ರಿ ಸವಿತ, ಸಹೋದರ ಐತ್ತಪ್ಪ ನಾಯ್ಕ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.