Breaking News

ಮರ್ಕಂಜದ ಪುರದಲ್ಲಿ ಕಾಡಾನೆ ಹಾವಳಿ, ಕೃಷಿಗೆ ಹಾನಿ

Advt_Headding_Middle
Advt_Headding_Middle

ಮರ್ಕಂಜ ಗ್ರಾಮದ ಪುರ ಭವಾನಿಶಂಕರ ಗೌಡ ಎಂಬವರ ತೋಟಕ್ಕೆ ಜೂನ್.17ರಂದು ರಾತ್ರಿ ಕಾಡಾನೆ ದಾಳಿ ನಡೆಸಿದ ಘಟನೆ ವರದಿಯಾಗಿದೆ.

ಸುಮಾರು 2 ಎಕರೆಗಿಂತಲೂ ಹೆಚ್ಚು ಕೃಷಿಗೆ ಹಾನಿಯಾಗಿದ್ದು 1೦೦ಕ್ಕಿಂತಲೂ ಹೆಚ್ಚು ಬಾಳೆ, ತೆಂಗು, ಕಂಗುಗಳು ಸರ್ವನಾಶವಾಗಿವೆ. ಈಗಾಗಲೇ ಪೂರ್ತಿ ಅಡಿಕೆ ತೋಟ ಹಳದಿ ರೋಗಕ್ಕೆ ತುತ್ತಾಗಿ ಇದಕ್ಕೂ ಸರಕಾರದಿಂದ ಯಾವುದೇ ಪರಿಹಾರ ಲಭಿಸದೆ ರೈತ ಕುಟುಂಬ ತತ್ತರಿಸಿದ್ದು , ಬಾಳೆ ಕೃಷಿಯನ್ನೇ ನೆಚ್ಚಿಕೊಂಡಿತ್ತು.

ಪ್ರತಿವರ್ಷವೂ ಆನೆ, ಕಾಡುಹಂದಿ, ಕಡವೆ, ಕಾಡೆಮ್ಮೆಗಳು ಕೃಷಿಯನ್ನು ಹಾಳುಗೆಡವುತ್ತಿದ್ದು , ಬೆಳೆದ ಫಸಲುಗಳು ಕೈಗೆ ಬಂದದ್ದು ಬಾಯಿಗಿಲ್ಲದಂತಾಗಿದೆ. ಇದರ ಜೊತೆಗೆ ಹುಲಿಯ ಕಾಟವೂ ಹೆಚ್ಚಾಗಿದ್ದು ಹಲವು ಮನೆಗಳಿಂದ ದನ, ನಾಯಿ, ಕೋಳಿಗಳನ್ನು ಹೊತ್ತೊಯ್ಯುತ್ತಿದೆ. ಮನೆಗಳಲ್ಲಿ ವೃದ್ಧರು, ಚಿಕ್ಕ ಮಕ್ಕಳಿರುವುದರಿಂದ ಎಲ್ಲರೂ ಭಯಭೀತರಾಗಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಇತ್ತ ಗಮನಹರಿಸಿ ಸೂಕ್ತ ಪರಿಹಾರವನ್ನು ಒದಗಿಸಿಕೊಡಬೇಕೆಂದು ಊರವರು ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.