ಕನಕಮಜಲು: ಯುವಕ ಮಂಡಲದ ವತಿಯಿಂದ ಉಚಿತ ಹಲಸಿನ ಹಣ್ಣು ವಿತರಣೆ

Advt_Headding_Middle
Advt_Headding_Middle

 

ಕನಕಮಜಲಿನ ಯುವಜನ ವಿಕಾಸ ಕೇಂದ್ರ ಯುವಕ ಮಂಡಲ ಕನಕಮಜಲು ಇದರ ವತಿಯಿಂದ ರಾಜ್ಯ ಹೆದ್ದಾರಿ ಬದಿಯಲ್ಲಿ ಉಚಿತ ಹಲಸಿನಹಣ್ಣು ವಿತರಣಾ ಕಾರ್ಯ ಜೂ.20ರಂದು ನಡೆಯಿತು.

ಗ್ರಾಮಾಂತರ ಭಾಗಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಿರುವ ಹಲಸಿನ ಹಣ್ಣು ಮಳೆಗಾಲ ಆರಂಭವಾದಂತೆ ಒಂದೇ ಬಾರಿಗೆ ಹಣ್ಣಾಗಿ ಕೊಳೆತು ಹಾಳಾಗಿ ಹೋಗುತ್ತಿದೆ. ಇದನ್ನು ಮನಗಂಡ ಕನಕಮಜಲು ಯುವಕ ಮಂಡಲದವರು ಹಲಸಿನ ಹಣ್ಣುಗಳನ್ನು ಸಂಗ್ರಹಿಸಿ ಕನಕಮಜಲಿನ ಆನೆಗುಂಡಿ ಎಂಬಲ್ಲಿ ಮತ್ತು ಕನಕಮಜಲು ಗ್ರಾಮ ಪಂಚಾಯತಿ ಎದುರು ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಮತ್ತು ಅಗತ್ಯವಿರುವ ಇತರರಿಗೆ ಉಚಿತವಾಗಿ ಹಂಚುತ್ತಿದ್ದಾರೆ.
ಈ ಸಂದರ್ಭದಲ್ಲಿ ಕನಕಮಜಲು ಗ್ರಾ. ಪಂ. ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ, ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ ಕಾರ್ಯದರ್ಶಿ ಬಾಲಚಂದ್ರ ನೆಡಿಲು, ಹಾಗೂ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.