ಐವರ್ನಾಡು : ಕಣಿಲೆಗುಂಡಿ ರಸ್ತೆ ಕೆಸರುಮಯ – ವಾಹನ ಸವಾರರ ಪರದಾಟ

Advt_Headding_Middle
Advt_Headding_Middle

 

ಸಂಪರ್ಕ ಕಡಿತದ ಭೀತಿ

ಐವರ್ನಾಡು ಗ್ರಾಮದ ಸಿ.ಕೂಪ್ ನಿಂದ ದೇವರಕಾನ ಸಂಪರ್ಕ ರಸ್ತೆಯು ಕಣಿಲೆಗುಂಡಿ ಎಂಬಲ್ಲಿ ರಸ್ತೆ ಕೆಸರುಮಯವಾಗಿದ್ದು ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.

ಮತ್ತು ಇನ್ನಷ್ಟು ಮಳೆ ಬಂದರೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.
ಈ ರಸ್ತೆಯು ದೇವರಕಾನ ಕಡೆಗೆ ಹೋಗುವ ಜನರಿಗೆ ಅತೀ ಹತ್ತಿರದ ರಸ್ತೆಯಾಗಿದ್ದು ಹೆಚ್ಚಿನ ಜನರು ಈ ರಸ್ತೆಯನ್ನು ಅವಲಂಭಿಸಿದ್ದಾರೆ.
ಈ ಭಾಗದಲ್ಲಿ ಅನೇಕ ಮನೆಗಳಿದ್ದು ಎಲ್ಲಾ ಮನೆಗಳಿಗೆ ಸಂಪರ್ಕ ರಸ್ತೆಯಾಗಿದೆ.
ದಿನಂಪ್ರತಿ ಪೇಟೆಗೆ ಬರುವ ವಾಹನ ಸವಾರಿಗೆ ಮತ್ತು ಪಾದಚಾರಿಗಳಿಗೆ,ದ್ವಿಚಕ್ರ ವಾಹನದವರಿಗೆ ತುಂಬಾ ಕಷ್ಟಕರವಾಗಿದ್ದು ,ದ್ವಿಚಕ್ರ ವಾಹನದವರು ಇದರಲ್ಲಿ ಭಾರೀ ಜಾಗ್ರತೆಯಿಂದ ಬಂದರೂ ಜಾರಿ ಬೀಳುವುದಂತು ಗ್ಯಾರಂಟಿ.ಬಿದ್ದವರೂ ಇದ್ದಾರೆ.

ಇತ್ತೀಚೆಗೆ ಇಲ್ಲಿ ರಸ್ತೆ ಅಗಲೀಕರಣ ಕೆಲಸ ನಡೆದಿದ್ದು ರಸ್ತೆ ಮಣ್ಣು ಹಾಕಿ ಅಗಲ ಮಾಡಲಾಗಿತ್ತು.
ಇತ್ತೀಚೆಗೆ ಸುರಿದ ಮಳೆಗೆ ರಸ್ತೆ ಕೆಸರುಮಯವಾಗಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ.
ಈ ಭಾಗದ ಜನಪ್ರತಿನಿಧಿಗಳು ಕೂಡಲೆ ಸ್ಪಂದಿಸಿ ರಸ್ತೆ ದುರಸ್ಥಿಪಡಿಸಿ ಜನರಿಗೆ ವಾಹನ ಸಂಚಾರ ಮಾಡಲು ಅನುವುಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.