ಅಮರ ಸಂಘಟನಾ ಸಮಿತಿ ವತಿಯಿಂದ ಅಮರ ಮ್ಯಾರಥಾನ್ ಮತ್ತು ವಿಶ್ವ ಯೋಗ ದಿನಾಚರಣೆ ಮತ್ತು ಅಮರ ರತ್ನ ಪುರಸ್ಕಾರ ಕಾರ್ಯಕ್ರಮ

Advt_Headding_Middle
Advt_Headding_Middle

ಅಮರ ಸಂಘಟನಾ ಸಮಿತಿ ಅಮರ ಮುಡ್ನೂರು ಮತ್ತು ಪಡ್ನೂರು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಆರೋಗ್ಯಕ್ಕಾಗಿ ಓಟ ಮೂರನೇ ವರ್ಷದ ಅಮರ ಮ್ಯಾರಥಾನ್ ಮತ್ತು ವಿಶ್ವ ಯೋಗ ದಿನಾಚರಣೆ ಮತ್ತು ಅಮರ ರತ್ನ ಪುರಸ್ಕಾರ ಕಾರ್ಯಕ್ರಮ ಅಮರ ಮುಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪ್ರಸಾದ್ ದೊಡ್ಡಿಹಿತ್ಲು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಡಾ|ಪ್ರಿಯಾಂಕ ನಾಟಿಕೇರಿ ಉಪಸ್ಥಿತರಿದ್ದರು. ಹೆಸರಾಂತ ಯೋಗ ಗುರುಗಳಾದ ಅಮರ ರತ್ನ ಪುರಸ್ಕಾರಕ್ಕೆ ಭಾಜನರಾದ ಸಂತೋಷ್ ಮುಂಡಕಜೆ ಇವರಿಂದ ಯೋಗ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು. ಅಮರ ಮ್ಯಾರಥಾನ್ ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಬಹುಮಾನ ವಿತರಸಿಲಾಯಿತು ಮತ್ತು ವಿಶ್ವ ಭೂಮಿ ದಿನಾಚರಣೆಯ ದಿನದಂದು ಸೆಲ್ಫಿ ಅಭಿಯಾನದಲ್ಲಿ ಕಳುಹಿಸಿದ ಫೋಟೋಗಳ ಗಿಡದ ಬೆಳವಣಿಗೆಯ ಆಧಾರದಲ್ಲಿ ಬಹುಮಾನ ಕೊಡಲಾಯಿತು. ಸಂಘಟನೆಯ ಸದಸ್ಯರುಗಳಾದ ಕು| ಸ್ವಾತಿ ಪದವು ಸ್ವಾಗತಿಸಿದರು, ಕು| ಸಾಯಿಶೃತಿ ಧನ್ಯವಾದವನ್ನಿತ್ತರು. Advertisement
ಸುಶ್ಮಿತಾ ಕಡಪಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ದಲ್ಲಿ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಮಡಿದ ವೀರ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು, ಮತ್ತು ದೇಶಾದ್ಯಂತ ಕರೋನ ವಿರುದ್ಧ ಹೋರಾಡುತ್ತಿರುವ ಕರೋನ ವಾರಿಯರ್ಸ್ ಗೆ ಚಪ್ಪಾಳೆ ತಟ್ಟುವ ಮೂಲಕ ಗೌರವ ಸಮರ್ಪಿಸಲಾಯಿತು. ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ಯಾನಿಟೈಸರ್ ಬಳಸಿ ಕಾರ್ಯಕ್ರಮ ಆಯೋಜಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.