ಗೃಹರಕ್ಷಕರಿಗೆ ಸ್ಯಾನಿಟೈಸರ್ ಮತ್ತು ಗಿಡಗಳ ವಿತರಣೆ

Advt_Headding_Middle
Advt_Headding_Middle

ಗೃಹರಕ್ಷಕರಿಗೆ ಸ್ಯಾನಿಟೈಸರ್ ಮತ್ತು ವನಮಹೋತ್ಸವ ಪ್ರಯುಕ್ತ ಗಿಡ ವಿತರಿಸುವ ಕಾರ್ಯಕ್ರಮ ಜೂ. 21 ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಿತು.
ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಠರಾದ ಡಾ.ಮುರಳೀಮೋಹನ ಚೂಂತಾರು ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ರಾಮಚಂದ್ರ ಪೆಲತಡ್ಕ, ಕೆ.ಎಫ್.ಡಿ.ಸಿ. ವಿಭಾಗೀಯ ವ್ಯವಸ್ಥಾಪಕ ಪಿ.ಎಂ.ರಂಗನಾಥ್, ದೈಹಿಕ ಶಿಕ್ಷಕ ನಟರಾಜ್, ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್ ಅತಿಥಿಗಳಾಗಿದ್ದರು.
ಗೃಹರಕ್ಷಕ ದಳದ ಸುಳ್ಯ ಘಟಕಾಧಿಕಾರಿ ಜಯಂತ ಶೆಟ್ಟಿಯವರು ಕಾರ್ಯಕ್ರಮ ನಡೆಸಿಕೊಟ್ಟರು.


ಜಿಲ್ಲೆಯ ಎಲ್ಲ ಒಂದು ಸಾವಿರ ಗೃಹರಕ್ಷಕರಿಗೆ ಸ್ಯಾನಿಟೈಸರನ್ನು ಎಂ.ಸಿ.ಎಫ್. ನವರು ಒದಗಿಸಿದ್ದರೆ, ಹೋಮಿಯೋಪಥಿ ವೈದ್ಯರ ಸಂಘದವರು ಕೊರೊನಾ ಬರದಂತೆ ಇಮ್ಯುನಿಟಿ ಪವರ್ ಬೆಳೆಸುವ ಔಷಧ ಒದಗಿಸಲಿದ್ದಾರೆ ಎಂದು ಡಾ.ಮುರಳೀಮೋಹನ ಚೂಂತಾರು ಹೇಳಿದರು.


ಪೋಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೃಹರಕ್ಷಕರ ಸಂಖ್ಯೆಯನ್ನು ಕಡಿತಗೊಳಿಸಿ ಕೆಲವರನ್ನಷ್ಟೆ ಇರಿಸಿಕೊಳ್ಳುವ ನಿರ್ಧಾರ ಪೊಲೀಸ್‌ ಇಲಾಖೆ ಮಾಡಿದಾಗ ನಾನು ಮೇಲಧಿಕಾರಿಗಳೊಂದಿಗೆ ಮಾತನಾಡಿ ರೊಟೇಷನ್ ಪ್ರಕಾರ ಎಲ್ಲರಿಗೂ ಕೆಲಸ ದೊರೆಯುವಂತೆ ಮಾಡಿರುವುದಾಗಿ ಹೇಳಿದ ಡಾ.ಚೂಂತಾರು ರವರು ಇತರ ಇಲಾಖೆಗಳಲ್ಲಿ ಗೃಹರಕ್ಷಕರಿಗೆ ಕಾರ್ಯನಿರ್ವಹಿಸಲು ಅವಕಾಶ ಸಿಗುವಂತೆ ಪ್ರಯತ್ನಿಸುವುದಾಗಿ ಹೇಳಿದರು.

 

ಬಳಿಕ ಯುವಜನ ಸಂಯುಕ್ತ ಮಂಡಳಿ ಆವರಣದಲ್ಲಿ ಗಿಡ ನೆಟ್ಟು ವನಮಹೋತ್ಸವ ಆಚರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.