Breaking News

ಹಳೆಗೇಟಿನ ಹಳೆ ಸಮಸ್ಯೆ ನೀಗುವುದ್ಯಾವಾಗ? ರಸ್ತೆಯಲ್ಲೇ ಮಳೆ ನೀರು ; ಸಂಚಾರಕ್ಕೆ ಸಂಚಕಾರ

Advt_Headding_Middle
Advt_Headding_Middle

ಸುಳ್ಯ ನಗರದ ಮುಖ್ಯರಸ್ತೆ ಹಳೇಗೆಟು ಎಂಬಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮಧ್ಯೆ ನೀರು ನಿಂತು ಕೆಸರು ಗದ್ದೆಯಂತಾಗಿದ್ದು ವಾಹನ ಸವಾರರಿಗೆ ಸಂಕಷ್ಟವಾಗಿ ಪರಿಣಮಿಸಿದೆ. ಪ್ರತಿವರ್ಷ ಮಳೆ ಗಾಲ ಬರುವ ಸಂದರ್ಭದಲ್ಲಿ ಚರಂಡಿ ಇಲ್ಲದೇ ಸಾರ್ವಜನಿಕರಿಗೆ ‌ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ .

ಐದು ವರ್ಷಗಳಿಂದ ಈ ಸಮಸ್ಯೆ ಗೆ ಪರಿಹಾರ ಸಿಗಲಿಲ್ಲ
ದಿನನಿತ್ಯ ನೂರಾರು ವಾಹನ ಸವಾರರು ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸಬೇಕಾಗಿದೆ. ದ್ವಿಚಕ್ರ ವಾಹನ ಸವಾರರು ರಸ್ತೆಯನ್ನು ದಾಟಿಸಬೇಕಾದರೆ ಹರಸಾಹಸ ಪಡಬೇಕಾಗುತ್ತದೆ.


ಕೆಲ ಸವಾರರು ಕೆಸರಲ್ಲಿ ಬಿದ್ದ ಪ್ರಸಂಗಗಳು ಇದೆ. ಆದುದರಿಂದ ಸಂಬಂಧ ಪಟ್ಟ ಇಲಾಖೆ ಇದಕ್ಕೊಂದು ಸೂಕ್ತ ಪರಿಹಾರ ಕಂಡು ಕೊಳ್ಳದ್ದಿದ್ದಲ್ಲಿ ಜನಸಾಮಾನ್ಯರಿಗೆ ಅಪಾಯ ತಪ್ಪಿದ್ದಲ್ಲ. ಆದುದರಿಂದ ಸಂಬಂಧಿಸಿದ ಇಲಾಖೆ ತಕ್ಷಣ ಈ ಕಡೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡುವಂತೆ ಅಲ್ಲಿನ ವರ್ತಕರ ಮತ್ತು ಸಾರ್ವಜನಿಕರ ಒತ್ತಾಯ.

ಕಳೆದ ಐದು ವರ್ಷಗಳಿಂದ ಮಳೆಗಾಲ ಸಂದರ್ಭದಲ್ಲಿ ಇದೇ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಸಮಸ್ಯೆ ಬಗ್ಗೆ ದೂರುನೀಡಿದಾಗ ಅಧಿಕಾರಿಗಳು ‌ಬಂದು ನೋಡಿ ಹೋಗುತ್ತಾರೆ ಹೊರತು ಪರಿಹಾರ ದೊರಕ್ಕಲಿಲ್ಲ.

ಚರಂಡಿ ವ್ಯವಸ್ಥೆ ಆಗಬೇಕು: ರಸ್ತೆ ನಿರ್ಮಾಣವಾದರೂ ರಸ್ತೆಯ ಬದಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಆಗದೆ ರಸ್ತೆ ತಗ್ಗಾಗಿ ಇದ್ದ ಕಾರಣ ನೀರು ನಿಂತು ಇಲ್ಲಿನ ವರ್ತಕರಿಗೆ ,ಸಾರ್ವಜನಿಕರಿಗೆ, ದ್ವಿಚಕ್ರ ವಾಹನ ಸವಾರರಿಗೆ ತುಂಬಾ ಕಷ್ಟ ಅನುಭವಿಸುತ್ತಿದ್ದೆವೇ ಕಳೆದ ವರ್ಷ ವ್ಯಕ್ತಿಯೊಬ್ಬರು ಕೆಸರಿನಲ್ಲಿ ಬಿದ್ದು ಆಸ್ಪತ್ರೆಗೆ ಕರೆದುಕೊಂಡು ಹೊದ ಘಟನೆಯು ನಡೆದಿದೆ ಈ ವರ್ಷವಾದರೂ ಸಂಬಂದ ಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತಗೊಂಡು ತಕ್ಷಣ ಚರಂಡಿ ವ್ಯವಸ್ಥೆ ಮಾಡಲಿ.

– ತೌಹೀದ್ ಹೋಮ್ ಗ್ಯಾಲರಿ
ಸ್ಥಳೀಯ ಉದ್ಯಮಿ

ನಾವು ಇಲ್ಲಿ ಹಲವಾರು ವರ್ಷದಿಂದ ಉದ್ಯಮ ನಡೆಸುತ್ತಿದ್ದೇವೆ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕ ಕಷ್ಟವನ್ನು ನೋಡಿ ನೋಡಿ ಸಾಕಯಿತು.
ಕೆಲವೊಮ್ಮೆ ಕೆಲವೊಮ್ಮೆ ಒಳ್ಳೆಯ ಮಳೆ ಬಂದರೆ ರಸ್ತೆಯಲ್ಲಿ ನೀರು ತುಂಬಿ ಒಂದುಕಡೆಯಿಂದ ಇನ್ನೊಂದು ಕಡೆಗೆ ದಾಟಲು ರಸ್ತೆಯ ನೀರು ಕಮ್ಮಿಯಾಗುವರೆಗೂ ಕಾಯಬೇಕಾಗುತ್ತದೆ ಇನ್ನಾದರೂ ಆದಷ್ಟೂ ಬೇಗ ಸರಿಪಡಿಸಿಕೊಳ್ಳಲು ನಮ್ಮ ವಿನಂತಿ

ನವೀನ್ ಕುಮಾರ್
ಸಂತೃಪ್ತಿ ರೆಸ್ಟೋರೆಂಟ್…

ಮಾಣಿ ಸಂಪಾಜೆ ರಸ್ತೆ ಅಗಲೀಕರಣವಾಗುವ ಸಂದರ್ಭದಲ್ಲಿ ಫುಟ್‌ಪಾತ್ ಮತ್ತು ಚರಂಡಿ ನಿರ್ವಹಣೆ ಅಸಮರ್ಪಕವಾಗಿದ್ದು, ಮಳೆಗಾಲದಲ್ಲಿ ನೀರು ಚರಂಡಿ ಸರಿ ಇಲ್ಲದೆ ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ.  ಇದರ ಬಗ್ಗೆ 2017 ರಲ್ಲಿ ಕರ್ನಾಟಕ ಲೋಕಾಯುಕ್ತರಿಗೆ ದೂರು ನೀಡಿರುತ್ತಾನೆ. ಆದರೂ ಸರಿಪಡಿಸಲಿಲ್ಲ. ಇದರ ಬಗ್ಗೆ ಲೋಕಾಯುಕ್ತ ಕೇಸ್ ನಡೆಯುತ್ತಿದೆ.
– ಡಿ.ಎಂ.ಶಾರಿಖ್, ಸಾಮಾಜಿಕ ಕಾರ್ಯಕರ್ತ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.