ವಕೀಲರಿಗೂ ಆರ್ಥಿಕ ಸಹಕಾರ ನೀಡಲು ಸರಕಾರಕ್ಕೆ ವಕೀಲರ ಸಂಘ ಮನವಿ

Advt_Headding_Middle
Advt_Headding_Middle

 

ಕೋವಿಡ್-19 ನಿಂದಾಗಿ ವಕೀಲರು ಕೂಡಾ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು ಸರಕಾರ ವಕೀಲರಿಗೆ ಆರ್ಥಿಕ ಸಹಕಾರ ನೀಡಬೇಕೆಂದು ಸುಳದಯ ವಕೀಲರ ಸಂಘದ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಮಾಡಿದೆ.


ವಕೀಲರಿಗೆ ಆರ್ಥಿಕ ವಾಗಿ ಸಹಾಯವಾಗುವ ನಿಟ್ಟಿನಿಂದ ಸರಕಾರವು ರಾಜ್ಯ ವಕೀಲರ ಸಂಘಕ್ಕೆ ಶೀಘ್ರವೇ ರೂ.50 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಹಾಗೂ ಕೇಂದ್ರ ಸರಕಾರ ವಕೀಲರ‌ ಸಮುದಾಯಕ್ಕೆ ಹೆಲ್ತ್ ಇನ್ಶೂರೆನ್ಸ್ ವ್ಯವಸ್ಥೆಯನ್ನು ಮಾಡಬೇಕು. ಮತ್ತು ವಕೀಲರಿಗೆ 5 ಲಕ್ಷದಿಂದ ನಿಬ್ಬಡ್ಡಿವರೆಗೆ ಸಾಲ ನೀಡಲು ವ್ಯವಸ್ಥೆ ಕಲ್ಪಿಸಿ ವಕೀಲರು ಆರ್ಥಿಕ ವಾಗಿ ಸಬಲರಾಗಲು ಸಹಕರಿಸಬೇಕು ಎಂದು ವಕೀಲರ ಸಂಘದವರು ನೀಡಿರುವ ಮನವಿಯಲ್ಲಿ ‌ವಿನಂತಿಸಲಾಗಿದೆ.

Advertisement

ವಕೀಲರ ಸಂಘದ ಕಾರ್ಯದರ್ಶಿ ಪುಷ್ಪರಾಜ್ ಗಾಂಭೀರ್ ರವರ ನೇತೃತ್ವದಲ್ಲಿ ತಹಶೀಲ್ಧಾರ್ ರ ಮೂಲಕ ಸರಕಾರಗಳಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಖಜಾಂಜಿ ವಿನಯಕುಮಾರ್ ಮುಳುಗಾಡು, ಉಪಾಧ್ಯಕ್ಷ ಸತೀಶ್ ಕುಂಭಕ್ಕೋಡು, ಪದಾಧಿಕಾರಿಗಳಾದ ಹರ್ಷಿತ್ ಕಾರ್ಜ, ಸದಸ್ಯರಾದ ಚಂದ್ರಶೇಖರ ಬಿ.,ಹರೀಶ್ ಬುಡುಪನ್ನೇ, ವಿನೋದ್ ಪಿ.ಕೆ., ಜಯಪ್ರಕಾಶ್ ಕಜೆತಡ್ಕ, ಚರಣ್ ಕಾಯರ, ರುದ್ರಪ್ಪ ಎನ್. , ಮನೋಜ್ ಎಂ ಮತ್ತಿತರರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.