Breaking News

ಅಗಲಿದ ನಿವೃತ್ತ ಶಿಕ್ಷಕ ಮೊರಂಗಲ್ಲು ಪಿ.ಪದ್ಮನಾಭ ರೈ ಯವರಿಗೆ ಶ್ರದ್ಧಾಂಜಲಿ-ನುಡಿ ನಮನ

Advt_Headding_Middle
Advt_Headding_Middle

 

ಸುಳ್ಯ ಪರಿವಾರ ನಿವಾಸಿ ದಿ.ಮೊರಂಗಲ್ಲು ಪಿ.ಪದ್ಮನಾಭ ರೈಯವರು ಜೂ.14 ರಂದು ನಿಧನರಾಗಿದ್ದು ಅವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮವು ಜೂ.24 ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದು ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಪರಿವಾರಕಾನದಲ್ಲಿರುವ ಉಡುಪಿ ಗಾರ್ಡನ್ ಹೋಟೆಲ್ ನ ಗ್ರ್ಯಾಂ ಡ್ ಪರಿವಾರ್ ಸಭಾಂಗಣದಲ್ಲಿ ಜರುಗಿತು.

ಮೃತರು ಸುಳ್ಯ ತಾಲೂಕಿನ ಎಡಮಂಗಲ, ಗಾಂಧಿನಗರ ಮತ್ತು ಅಜ್ಜಾವರ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ಜನಮೆಚ್ಚಿದ ಶಿಕ್ಷಕರಾಗಿ ಗುರುತಿಸಿಕೊಂಡು ಜನಾನುರಾಗಿಯಾಗಿದ್ದು, ಮೊರಂಗಲ್ಲು ಕುಟುಂಬದ ಯಜಮಾನರಾಗಿದ್ದರು.

ಅವರ ಜೀವನಗಾಥೆಯ ಕುರಿತು ಎಣ್ಮೂರುಗುತ್ತು ಪಟ್ಟೆ ಪ್ರಭಾಕರ ರೈ ಯವರು ಪ್ರಸ್ತಾಪಿಸಿ ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಪ್ರಫುಲ್ಲ ರೈ, ಪುತ್ರ ಡಾ.ಶಬರೀಶ, ಸಹೋದರ ವಿಶ್ವನಾಥ ರೈ ,ಸಹೋದರಿಯರು ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬದ ಹಿರಿಯರು,ಕಿರಿಯರು ಉಪಸ್ಥಿತರಿದ್ದರು. ಆಗಮಿಸಿದ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಚಿರಶಾಂತಿ ಕೋರಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.