Breaking News

ಐವರ್ನಾಡು : ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಾರ್ಖಾನೆಗಳ ವಿಭಾಗೀಯ ವ್ಯವಸ್ಥಾಪಕ ರಂಗನಾಥರವರಿಗೆ ಅಭಿನಂದನೆ

Advt_Headding_Middle
Advt_Headding_Middle

 

ಸುಳ್ಯ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಾರ್ಖಾನೆಗಳ ವಿಭಾಗೀಯ ವ್ಯವಸ್ಥಾಪಕರಾದ ರಂಗನಾಥರವರು ಜೂ.30 ರಂದು ನಿವೃತ್ತಿಗೊಳ್ಳಲಿದ್ದು ಅವರಿಗೆ ಐವರ್ನಾಡಿನ ಮರುವತ್ತಡ್ಕ ರಬ್ಬರು ಘಟಕದ ವತಿಯಿಂದ ಸನ್ಮಾನ ಕಾರ್ಯಕ್ರಮವು ಜೂ.25 ರಂದು ಮರುವತ್ತಡ್ಕದಲ್ಲಿ ನಡೆಯಿತು.

ನಿವೃತ್ತಿಗೊಳ್ಳಲಿರುವ ರಂಗನಾಥ್ ಮತ್ತು ಶ್ರೀಮತಿ ಪದ್ಮಾರಂಗನಾಥ್ ರವರನ್ನು ಶಾಲು ಹೊದಿಸಿ ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಸುಬ್ರಹ್ಮಣ್ಯದ ಕುಮಾರಧಾರ ಘಟಕದ ವಲಯಾರಣ್ಯಾಧಿಕಾರಿ ಶ್ರೀಕಾಂತ್,ಸುಬ್ರಹ್ಮಣ್ಯದ ಪ್ಲಾಂಟೇಷನ್ ಸುಪರಿಟೆಂಡೆಂಟ್ ಸುಂದರ ಗೌಡ,ಐವರ್ನಾಡು ಘಟಕದ ತೋಟಗಳ ಅಧೀಕ್ಷಕ ವಿಷ್ಣು ಗೌಡ ವೇದಿಕೆಯಲ್ಲಿದ್ದು ಶುಭಹಾರೈಸಿ, ಮಾತನಾಡಿದರು.

ಸನ್ಮಾನ ಸ್ವೀಕರಿಸಿದ ರಂಗನಾಥ್ ರವರು ತಮ್ಮ 40 ವರ್ಷ ಸೇವಾವಧಿಯ ದಿನಗಳನ್ನು ಸ್ಮರಿಸಿಕೊಂಡು ಸಹಕರಿಸಿದವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕೃಷ್ಣವೇಣಿ ಪ್ರಾರ್ಥಿಸಿ,ರಾಮಸ್ವಾಮಿ ( ಆನಂದ) ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿ ವಂದಿಸಿದರು.
ಕಾರ್ಮಿಕರು ಶುಭಹಾರೈಸಿ ಮಾತನಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.