ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ

Advt_Headding_Middle
Advt_Headding_Middle

ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ಜೂ. 25 ರಂದು ನಡೆಯಿತು.

ಬಾಲಚಂದ್ರ ಕಳಗಿಯವರ ಆಕಾಲಿಕ ಮರಣ ನಂತರ ಕುಮಾರ್ ಚೆದ್ಕಾರ್ ಪಂಚಾಯತ್ ಅಧ್ಯಕ್ಷರಾಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ವಹಿಸಿಕೊಂಡು ಸಂಪಾಜೆ ಗ್ರಾಮ ಪಂಚಾಯತ್ ಆಡಳಿತ ಕಚೇರಿಯ ಮೇಲು ಅಂತಸ್ತಿನಲ್ಲಿ ಸುಂದರವಾದ ಸಭಾಭವನ ನಿರ್ಮಿಸಲಾಯಿತು . ಅಲ್ಲದೆ ಸಂಸದರು, ಶಾಸಕರು, ಜಿಲ್ಲಾ ಪಂಚಾಯತ್, ತಾಲೋಕು ಪಂಚಾಯತ್ ನ ವಿವಿಧ ಅನುಧಾನ ಹಾಗೂ ಉದ್ಯೋಗ ಖಾತ್ರಿ ಯೋಜನೆ ಒಳಗೊಂಡಂತೆ 2019-20  ನೇ ಸಾಲಿನಲ್ಲಿ ಸಂಪಾಜೆ ಗ್ರಾಮಕ್ಕೆ ಸುಮಾರು 1.5೦ ಕೋಟಿ ಅನುದಾನ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸಲಾಯಿತು.

 

ಕಾರ್ಯಕ್ರಮದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯನವರು ಆಗಮಿಸಿದ ನಂತರ ಕೊಯನಾಡು ಶಾಲಾ ನೂತನ ಕಟ್ಟಡ, ಕೊಯನಾಡು ಗುಡ್ಡೆಗದ್ದೆ ಕಾಂಕ್ರೀಟ್ ರಸ್ತೆ, ಕುಂಠಿಕಾನ ಕೂಟೇಲು ಕಾಂಕ್ರೀಟ್ ರಸ್ತೆ, ಬೈಲು ಅಂಗನವಾಡಿಯ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ, ಗ್ರಾಮ ಪಂಚಾಯತ್ ಸಭಾಭವನ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮವು ನಡೆಯಿತು.

ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್ ಚೆದ್ಕಾರ್ ವಹಿಸಿದರು, ಸಮಾರಂಭದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ, ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ, ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಅನಂತ ಎನ್.ಸಿ, ಪಂಚಾಯತ್ ಉಪಾಧ್ಯಕ್ಷರಾದ ಸುಂದರ ಬಿಸಿಲುಮನೆ, ಕೃಷಿ ಉತ್ಪನ್ನ ಮಾರುಕಟ್ಟೆ ಯ ಸದಸ್ಯರಾದ ದೇವಪ್ಪ ಕೊಯನಾಡು, ಕೃಷಿ ಉತ್ಪನ್ನ ಮಾರುಕಟ್ಟೆ ಮಾಜಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಉಪಾಧ್ಯಾಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶೋಭಾರಾಣಿ, ಸದಸ್ಯರಾದ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ, ಸಂಪಾಜೆ ಪಂಚಾಯತ್ ಚುನಾಯಿತ ಪ್ರತಿನಿಧಿಗಳು, ರೈತ ಹಿತರಕ್ಷಣಾ ವೇದಿಕೆ ಸದಸ್ಯರುಗಳು, ಪಂಚಾಯತ್ ಸಿಬ್ಬಂದಿವರ್ಗದವರು, ಆರಕ್ಷಕ ಠಾಣಾ ಸಿಬ್ಬಂದಿಗಳು, ಕೃಷಿ ಪತ್ತಿನ ಸಹಕಾರಿ ಸಂಘದ ಚುನಾಯಿತ ಪ್ರತಿನಿಧಿಗಳು, ಪಂಚಾಯತ್ ಮಾಜಿ ಸದಸ್ಯರುಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳು ಹಾಗೂ ಸಮಸ್ತ ಗ್ರಾಮಸ್ಥರು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ದೇಶಕ್ಕೆ ಮಾರಕವಾದ ಕೊರೊನಾ ವೈರಸ್ ಜಾಗೃತಿ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಆರಕ್ಷಕ ಠಾಣಾ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರು ಸ್ಮರಣಿಕೆ ನೀಡಿ ಗೌರವಿಸಲಾಯಿತು ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಇಡೀ ದೇಶಕ್ಕೆ ಮಾದರಿ, ರಾಜ್ಯಕ್ಕೆ ಮಾದರಿಯಾಗಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಪೂರೈಸಿ ರಾಷ್ಟ್ರೀಯ ಮಟ್ಟದಲ್ಲಿ ಸಶಸ್ತ್ರಿಕರಣ ರಾಷ್ಟ್ರ ಪ್ರಶಸ್ತಿ ಪಡೆದು ಹೆಗ್ಗಳಿಕೆ ಮೆರೆದ ಗ್ರಾಮ ಕೊಡಗು-ಸಂಪಾಜೆ ಗ್ರಾಮ ಪಂಚಾಯತ್, ರಾಷ್ಟ್ರ ಪ್ರಶಸ್ತಿ ಪಡೆದು ಹಲವು ವರುಷಗಳಿಂದ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾದ ಸಂಪಾಜೆ ಬಿ.ಜೆ.ಪಿ ನಾಯಕ, ಕೊಡಗು ಜಿಲ್ಲಾ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ದಿ. ಬಾಲಚಂದ್ರ ಕಳಗಿಯವರನ್ನು ಸ್ಮರಿಸುತ್ತ ಸರಳ ರೀತಿಯಲ್ಲಿ ಸಮಾರೋಪ ಸಮಾರಂಭ ನಡೆಸಲಾಯಿತು.
ಕಾರ್ಯಕ್ರಮದ ಅಭಿನಂದನಾ ಬಾಷಣವನ್ನು ಕುಮಾರ್ ಚೆದ್ಕಾರ್ ಮಾಡಿದರು. ಶ್ರೀಮತಿ ಶೋಭಾರಾಣಿ ವಂದಿಸಿದರು. ಪುರುಷೋತ್ತಮ ಬಾಳೆಹಿತ್ಲು ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.