Breaking News

ಒಡೆದ ನೀರಿನ ಪೈಪ್ : ದುರಸ್ತಿಗೆ ನಿರ್ಲಕ್ಷ್ಯ – ಶಾರಿಖ್ ಟೀಕೆ

Advt_Headding_Middle
Advt_Headding_Middle


ನೀರಿನ ಪೈಪ್ ಒಡೆದದ್ದನ್ನು ಇನ್ನೂ ಸರಿಪಡಿಸದೆ ನಗರ ಪಂಚಾಯತ್ ನಿರ್ಲಕ್ಷ್ಯ ವಹಿಸಿದೆ ಎಂದು ಆರ್‌ಟಿಐ ಕಾರ್ಯಕರ್ತ ಡಿ.ಎಂ.ಶಾರಿಖ್ ಟೀಕಿಸಿದ್ದಾರೆ.


ಕಟ್ಟೆಕಾರ್ ಅಂಗಡಿಯ ಬಳಿ ಈ ಹಿಂದೆ ಚರಂಡಿಯಲ್ಲೇ ಇರುವ ನೀರಿನ ಪೈಪ್ ಒಡೆದು ಕುಡಿಯುವ ನೀರು ತ್ಯಾಜ್ಯ ನೀರಿನೊಂದಿಗೆ ಹರಿಯುತ್ತಿರುವ ಬಗ್ಗೆ ದೂರು ನೀಡಿ ತಕ್ಷಣ ಪಂಚಾಯತ್ ಸಿಬ್ಬಂದಿ ದುರಸ್ತಿಪಡಿಸಿದ್ದು ಕೆಲವೇ ಕ್ಷಣದಲ್ಲಿ ಮತ್ತೆ ಮೊದಲಿನಂತೆ ಆಗಿದೆ. ಈಗ ಪಂಚಾಯತ್ ಸಲಕರಣೆ ಮತ್ತು ತಜ್ಞರು ಹಾಸನದಿಂದ ಬಂದು ದುರಸ್ತಿ ಮಾಡಲಿದ್ದಾರೆಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಇಷ್ಟು ಸಣ್ಣ ಕಾಮಗಾರಿಗೆ ಸುಳ್ಯ ನಗರ ಪಂಚಾಯತ್ ನಲ್ಲಿ ತಜ್ಞ ಎಂಜಿನಿಯರ್ ಇಲ್ಲದೆ ಇರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ತಕ್ಷಣ ಸೂಕ್ತ ಅಧಿಕಾರಿಗಳು ಸ್ಪಂದಿಸುವ ಅಗತ್ಯವಿದೆ. ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಪಂಚಾಯತ್ ನಿರ್ಲಕ್ಷ್ಯ ಖಂಡನೀಯ ಎಂದು ಆರ್ ಟಿಐ ಕಾರ್ಯಕರ್ತ ಡಿ.ಎಂ. ಶಾರಿಖ್ ಹೇಳಿಕೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.