ಪಂಜದ ಚಿಂಗಾಣಿಗುಡ್ಡೆಯಲ್ಲಿ ಚಿರತೆ ಪ್ರತ್ಯಕ್ಷ!

Advt_Headding_Middle
Advt_Headding_Middle

ಅರಣ್ಯ ಇಲಾಖೆಯಿಂದ ಬೋನು

ಪಂಜದ ಚಿಂಗಾಣಿಗುಡ್ಡೆ ಎಂಬಲ್ಲಿ ಜೂ. 22.ರಂದು ಚಿರತೆಯೊಂದು ಪ್ರತ್ಯಕ್ಷವಾಗಿದ್ದು
ಪರಿಸರದಲ್ಲಿ ಭಯ ಹುಟ್ಟಿಸಿದೆ. ಚಿಂಗಾಣಿಗುಡ್ಡೆ ಸಮೀಪದ ಕೋಡಿ ಎಂಬಲ್ಲಿ ರಾಜೇಶ್ ಎಂಬವರಿಗೆ ಚಿರತೆ ಕಾಣಲು ಸಿಕ್ಕಿದ್ದು, ಬಳಿಕ ಅದು ಪೊದೆಯೊಳಗೆ ಹೋಗಿ ನಾಪತ್ತೆಯಾಗಿತ್ತು.

Advertisement

ವಿಷಯ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿದರು. ಮಾಹಿತಿ ಪಡೆದರು. ಬಳಿಕ ಚಿರತೆ ಹಿಡಿಯಲು ಬೋನು ತಂದು ಇರಿಸಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಿಂದ ಬಂಟಮಲೆಯ ತಪ್ಪಲಿನ ಮನೆಗಳಿಂಧ ಸಾಕು ನಾಯಿಗಳನ್ನು ಚಿರತೆ ಕೊಂಡೊಯ್ದ ಘಟನೆ ವರದಿಯಾಗಿದೆ. ಕೆಲವು ತಿಂಗಳ ಹಿಂದೆ ಪಂಜ ಸಮೀಪದ ಬಳ್ಪದಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.