Breaking News

ಬೆಳ್ಳಾರೆ ರೋಟರಿ ಕ್ಲಬ್‌ಗೆ 15 ಪ್ರಶಸ್ತಿಗಳು

Advt_Headding_Middle
Advt_Headding_Middle

 

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ರೋಟರಿ ಜಿಲ್ಲೆ ೩೧೮೧ರಲ್ಲಿ ತನ್ನ ಸಾಮಾಜಿಕ ಚಟುವಟಿಕೆ ಹಾಗೂ ಇನ್ನಿತರ ಸೇವಾ ಕಾರ್ಯಗಳಿಗಾಗಿ ಒಟ್ಟು ೧೫ ಅವಾರ್ಡ್‌ಗಳನ್ನು ಗಳಿಸಿ ಪ್ರಸಕ್ತ ಸಾಲಿನಲ್ಲಿ ಸಣ್ಣ ಕ್ಲಬ್ ಲೇವಲ್‌ನಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.

Advertisement

ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ೧೮ರಂದು ಬಂಟ್ವಾಳದ ಲೊರೆಟ್ಟೊ ಹಿಲ್ಸ್ ಕ್ಲಬ್‌ನಲ್ಲಿ ಸರಳವಾಗಿ ನಡೆಯಿತು. ಜಿಲ್ಲಾ ಪ್ರಶಸ್ತಿಗಳನ್ನು ರೋಟರಿ ಜಿಲ್ಲೆ ೩೧೮೧ರ ಗವರ್ನರ್ ಮೇಜರ್ ಡೋನರ್ ಜೋಸಫ್ ಮಾಥ್ಯೂರವರಿಂದ ಬೆಳ್ಳಾರೆ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೊ| ಬಿ. ನರಸಿಂಹ ಜೋಶಿಯವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಮೇಜರ್ ಡೋನರ್ ಡಾ| ಕೇಶವ ಪಿ.ಕೆ., ಜೋನಲ್ ಲೆಪ್ಟಿನೆಂಟ್ ರೊ| ಪ್ರಭಾಕರ ಆಳ್ವ, ಕಾರ್ಯದರ್ಶಿ ರೊ| ಗೋಪಾಲಕೃಷ್ಣ ಪಿ.ಎಸ್. ಮತ್ತು ಸಾರ್ಜೆಂಟ್ ರೊ| ಐತ್ತಪ್ಪ ಗೌಡರು ಉಪಸ್ಥಿತರಿದ್ದರು. ಇದರಲ್ಲಿ ೫ ಪ್ರಥಮ ಸ್ಥಾನಗಳನ್ನು, ೭ ದ್ವಿತೀಯ ಸ್ಥಾನಗಳನ್ನು ಮತ್ತು ೩ ತೃತೀಯ ಸ್ಥಾನಗಳನ್ನು ಪಡೆದ ಹಿರಿಮೆ ಬೆಳ್ಳಾರೆ ರೋಟರಿ ಕ್ಲಬ್ ಬೆಳ್ಳಾರೆ ಟೌನ್‌ದಾಗಿದೆ. ಅಧ್ಯಕ್ಷರಾದ ರೊ| ಬಿ. ನರಸಿಂಹ ಜೋಶಿಯವರು ಪ್ರಸಕ್ತ ಸಾಲಿನಲ್ಲಿ ಅಧ್ಯಕ್ಷರ ವೈಯುಕ್ತಿಕ ಸಾಧನೆಗಾಗಿ ಬೆಸ್ಟ್ ಪ್ರೆಸಿಡೆಂಟ್ ಅವಾರ್ಡ್, ೫ ಬಾರಿ ಪ್ರಥಮ ಮತ್ತು ೩ ಬಾರಿ ದ್ವಿತೀಯ ಸ್ಥಾನ ಮತ್ತು ೨ ಬಾರಿ ತೃತೀಯ ಸ್ಥಾನವನ್ನು ಪಡೆದು ಇತಿಹಾಸ ನಿರ್ಮಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.