ಜುಲೈ 6 ರಂದು ಆಲೆಟ್ಟಿ ರಸ್ತೆ ವಾಹನ ಸಂಚಾರಕ್ಕೆ ಮುಕ್ತ

Advt_Headding_Middle

ಸುಳ್ಯದಿಂದ ಆಲೆಟ್ಟಿಗೆ ಸಂಚರಿಸುವ ರಸ್ತೆ ಕಲ್ಲುಮುಟ್ಲು ತಿರುವಿನಿಂದ ನಾಗಪಟ್ಟಣ ಸೇತುವೆ ತನಕ ಕಾಂಕ್ರೀಟಿಕರಣಗೊಂಡ ರಸ್ತೆಯಲ್ಲಿ ಜು.6 ರಿಂದ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.

ಅದೇ ದಿನ ಬೆಳಗ್ಗೆ 9.45 ಕ್ಕೆ ಶಾಸಕ ಎಸ್ ಅಂಗಾರರವರು ನೂತನ ಕಾಂಕ್ರೀಟ್ ರಸ್ತೆಯನ್ನು ಉದ್ಗಾಟಿಸಲಿರುವರು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ನಗರ ಪಂಚಾಯತ್ ಸದಸ್ಯರು , ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ಆಲೆಟ್ಟಿ ಪಂಚಾಯತ್ ಅಧ್ಯಕ್ಷ ಹರೀಶ್ ರಂಗತ್ತಮಲೆ ಮತ್ತಿತರ ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಉದ್ಘಾಟನೆ ನೆರವೇರಲಿರುವುದು.ಕಳೆದ ಜೂ.15 ರಿಂದ ಕಾಂಕ್ರೀಟ್ ಕೆಲಸ ಪೂರ್ಣಗೊಂಡು 21 ದಿನಗಳ ಕಾಲ ಕ್ಯೂರಿಂಗ್ ಗಾಗಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿತ್ತು. ಕೆ.ಆರ್. ಡಿ.ಎಲ್. ಇಂಜಿನಿಯರ್ ರವರು ಜು.6 ರಿಂದ ರಸ್ತೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವ ಬಗ್ಗೆ ಸೂಚನೆ ನೀಡಿರುತ್ತಾರೆ. ಆದ ಕಾರಣ ಸಾರ್ವಜನಿಕರು ಸಹಕರಿಸಬೇಕು ಎಂದು ಹರೀಶ್ ಕಂಜಿಪಿಲಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.