ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ನಿವೃತ್ತ ವ್ಯವಸ್ಥಾಪಕ ಪಿ.ಎಂ.ರಂಗನಾಥ್ ರವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ

Advt_Headding_Middle
Advt_Headding_Middle
Advt_Headding_Middle

 

ಸುಳ್ಯ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಕಳೆದ ೪೦ ವರ್ಷಗಳಿಂದ ವಿವಿಧ ಜವಬ್ದಾರಿ ಹುದ್ದೆಗಳನ್ನು ನಿರ್ವಹಿಸಿ ಜೂ.3೦ ರಂದು ವಯೋನಿವೃತ್ತಿ ಹೊಂದಲಿರುವ ಲ| ಪಿ ಎಂ.ರಂಗನಾಥ್ ರವರನ್ನು ಕೆ.ಎಫ್. ಡಿ.ಸಿ. ಕಛೇರಿ ಸಿಬ್ಬಂದಿಗಳ ಮತ್ತು ಕಾರ್ಮಿಕ ವೃಂದ ದವರ ನೇತೃತ್ವದಲ್ಲಿ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭವು ಜೂ.೨೮ ರಂದು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ಜರಗಿತು.


ಸಮಾರಂಭದ ಅಧ್ಯಕ್ಷತೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ ಗಿರೀಶ್ ಭಾರಧ್ವಾಜ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್. ಗಂಗಾಧರ, ಉದ್ಯಮಿಗಳು ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವ,ವೈದ್ಯರು ಸುಳ್ಯ ಉದ್ಯಾನವನ ಆಸ್ಪತ್ರೆ ಯ ಡಾ.ಸಾಯಿಗೀತಾ ಜ್ಞಾನೇಶ್, ಆಲೆಟ್ಟಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮಾ ರಂಗನಾಥ್, ಕೆ.ಎಫ್. ಡಿ.ಸಿ ಕಛೇರಿ ಸೂಪರಿಂಟೆಂಡೆಂಟ್ ಶ್ರೀಮತಿ ಪವಿತ್ರ ಯೋಗೀಶ್, ಕಾರ್ಖಾನೆಗಳ ಸಹಾಯಕ ವ್ಯವಸ್ಥಾಪಕ ಗೋಪಾಲಕೃಷ್ಣ ಭಟ್,ಕಾರ್ಮಿಕ ಮುಖಂಡರಾದ ಕಂದಸ್ವಾಮಿ, ತಂಗವೇಲು, ಶೇಖರ ನಾಗಪಟ್ಟಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಛೇರಿ ಸಿಬ್ಬಂದಿ ಕು.ಆಶಿಕಾ ಪ್ರಭು ಸುಳ್ಯ ಪ್ರಾರ್ಥಿಸಿದರು. ಕು.ಸುಷ್ಮಾ ಸ್ವಾಗತಿಸಿದರು. ಗೋಪಾಲಕೃಷ್ಣ ಭಟ್ ವಂದಿಸಿದರು. ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರೂಪಿಸಿದರು.

 

ಕಛೇರಿ ಸಿಬ್ಬಂದಿಗಳು, ಕಾರ್ಖಾನೆಗಳ ಸಿಬ್ಬಂದಿಗಳು, ಕಾರ್ಮಿಕ ವೃಂದದವರಿಂದ ಬೀಳ್ಕೊಡುಗೆ ಹಾಗೂ ಸನ್ಮಾನ

ಸುದೀರ್ಘ ೪೦ ವರ್ಷಗಳ ಕಾಲ ಸುಳ್ಯ ವಿಭಾಗದ ಕೆ.ಎಫ್. ಡಿ.ಸಿ. ಯ ಕಾರ್ಖಾನೆಗಳ ವ್ಯವಸ್ಥಾಪಕ ಮತ್ತು ವಿಭಾಗೀಯ ವ್ಯವಸ್ಥಾಪಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಲ| ಪಿ.ಎಂ.ರಂಗನಾಥ್ ಮತ್ತು ಶ್ರೀಮತಿ ಪದ್ಮಾ ರಂಗನಾಥ್ ದಂಪತಿಗಳನ್ನು ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಫಲಪುಷ್ಪ , ಸ್ಮರಣಿಕೆ ಹಾಗೂ ಚಿನ್ನದ ಉಂಗುರವನ್ನು ತೊಡಿಸಿ ಸನ್ಮಾನಿಸಲಾಯಿತು.
ಸೇರಿದ ಹಲವಾರು ಮಂದಿ ರಂಗನಾಥ್ ರವರ ಅಭಿಮಾನಿಗಳು ಈ ಸಂದರ್ಭದಲ್ಲಿ ಶುಭ ಹಾರೈಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.