Breaking News

ಅತ್ತಿಕರಮಜಲು ಜಮಾಅತ್ ನ ಪ್ರವಾಸಿ ಸಹೋದರರಿಂದ ಬಾಳಿಲ ಮಸೀದಿಗೆ ಹ್ಯಾಂಡ್ ಸಾನಿಟೈಸರ್ ಉಪಕರಣ ಮತ್ತು ಪ್ರೇಯರ್ ಮ್ಯಾಟ್ ಕೊಡುಗೆ

Advt_Headding_Middle
Advt_Headding_Middle

ಕೋವಿಡ್ 19 ಎಂಬ ಮಹಾಮಾರಿಯಿಂದ ಕಂಗೆಟ್ಟ ಪ್ರಪಂಚವು ಇದರಿಂದ ಮುಕ್ತಿ ಹೊಂದಲು ಅನೇಕ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ದೇಶ ಮತ್ತು ರಾಜ್ಯದಲ್ಲಿ ಕೂಡಾ ಇದು ವ್ಯಾಪಕವಾಗಿ ಹರಡುತ್ತಿದೆ ಇದಕ್ಕೆ ಸರಕಾರವು ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಮತ್ತು ಜನರು ಒಂದೆಡೆ ಒಟ್ಟು ಸೇರದಂತೆ ನಿರ್ಬಂಧವನ್ನು ಕೂಡಾ ವಿಧಿಸಿತ್ತು ಧಾರ್ಮಿಕ ಕೇಂದ್ರಗಳನ್ನು ಮುಚ್ಚುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿತ್ತು ಆದರೆ ತದನಂತರ ಸರಕಾರವು ಕೆಲವೊಂದು ನಿಯಮಗಳನ್ನು ಸಡಿಲಿಕೆ ಮಾಡಿತು ಇದರಲ್ಲಿ ಬಹಳ ಮುಖ್ಯವಾಗಿರುವಂತಹ ಧಾರ್ಮಿಕ ಕೇಂದ್ರಗಳಿಗೆ ಭಕ್ತಾದಿಗಳಿಗೆ ಪ್ರವೇಶಕ್ಕೆ ಅನುಮತಿ ನೀಡುವುದು.

ಈ ನಿಟ್ಟಿನಲ್ಲಿ ಅನೇಕ ಮಸೀದಿಗಳು ಭಕ್ತಾಧಿಗಳಿಗೆ ಮುಕ್ತ ಪ್ರವೇಶವನ್ನು ನೀಡಿದೆ ಆದರೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಬಾಳಿಲದ ಮೊಹಿಯುದ್ದೀನ್ ಜುಮಾ ಮಸೀದಿ ಅತ್ತಿಕರಮಜಲು ಇಲ್ಲಿ ಸರಕಾರ ವಿಧಿಸಿದ ಎಲ್ಲಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದೆ ಈ ನಿಟ್ಟಿನಲ್ಲಿ ಮಸೀದಿ ಆವರಣದಲ್ಲಿ ಪ್ರವಾಸಿ ಯುವಕರು ಕೊಡುಗೆಯಾಗಿ ನೀಡಿದ ಎರಡು ಹ್ಯಾಂಡ್ ಸಾನಿಟೈಸರ್ ಉಪಕರಣಗಳನ್ನು ಅಳವಡಿಸಿರುತ್ತದೆ.
ಮಸೀದಿ ಪ್ರಾರ್ಥನೆಗೆ ಬರುವ ಪ್ರತಿಯೊಬ್ಬರೂ ಪ್ರತ್ಯೇಕ ಪ್ರೇಯರ್ ಮ್ಯಾಟ್ ಅಥವಾ ಬಟ್ಟೆಗಳನ್ನು ತರುವುದು ಕಡ್ಡಾಯವಾಗಿರುತ್ತದೆ.ಇದನ್ನು ಮನಗಂಡು ನಮ್ಮ ಜಮಾಅತ್ನ ಪ್ರವಾಸಿ ಸಹೋದರು ಸುಮಾರು ಹದಿನೈದು ಪ್ರೇಯರ್ ಮ್ಯಾಟ್ ಮತ್ತು ಎರಡು ಹ್ಯಾಂಡ್ ಸಾನಿಟೈಸರ್ ಉಪಕರಣಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ. ಇದರ ಉದ್ಘಾಟನೆಯನ್ನು ಮಸೀದಿ ಖತೀಬರಾದ ಯಾಸಿರ್ ಅರಾಫತ್ ಕೌಸರಿ ಮತ್ತು ಜಮಾಅತ್ ಉಪಾಧ್ಯಕ್ಷರಾದ ಇಸ್ಮಾಯಿಲ್ ನೀರ್ಪಂಜರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಜಮಾಅತ್ ಕಮಿಟಿ ಸದಸ್ಯರು ಹಾಗೂ ಮಿನ್ನಾತುಲ್ ಹುದಾ ಇದರ ಅಧ್ಯಕ್ಷರು ಸದಸ್ಯರು ಮತ್ತು ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.