ಸರಕಾರ ಪುಟಾಣಿ ಮಕ್ಕಳೊಂದಿಗೆ ಚೆಲ್ಲಾಟವಾಡುವುದೇ…! ಅಥವಾ ಬಡ ಕುಟುಂಬದ ಮಕ್ಕಳಿಗೆ ಅನ್ಯಾಯವೆಸಗುವುದೇ …? ಶಿಕ್ಷಣ ಸಚಿವರಿಗೆ ಸುಳ್ಯದ ಉದ್ಯಮಿ ಪತ್ರ

Advt_Headding_Middle
Advt_Headding_Middle

 

ಆನ್ ಲೈನ್ ಶಿಕ್ಷಣ ಕ್ರಮದಲ್ಲಿ ಆಗುವ ಸಮಸ್ಯೆಯ ಕುರಿತು ಸುಳ್ಯದ ಉದ್ಯಮಿ ಶ್ರೀನಾಥ್ ಆಲೆಟ್ಟಿ ಯವರು ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಿಗೆ ಟ್ವಿಟರ್ ಮೂಲಕ ಪತ್ರವೊಂದನ್ನು ಕಳುಹಿಸಿದ್ದು ಆ ಪತ್ರವನ್ನು ಇಲ್ಲಿ ಓದಬಹುದಾಗಿದೆ.

ಮಾನ್ಯ ಸಚಿವರೇ
ಯಾಕೆ ಈ ತರಾತುರಿಯ ಕೆಲಸ. ಪುಟಾಣಿ ಮಕ್ಕಳಿಗೆ ಆನ್‌ಲೈನ್ ಮುಖಾಂತರ ಶಿಕ್ಷಣಕ್ಕೆ ಮುಂದಾಗಿರುವುದು ಇದು ಅಕ್ಷರಶ ಸರಿಯಾದ ಕ್ರಮವಲ್ಲ. ಪುಟಾಣಿ ಮಕ್ಕಳು ತರಗತಿಯ ಕ್ಲಾಸ್‌ನಲ್ಲಿಯೇ ಕುಳಿತುಕೊಳ್ಳಲು ತಿಳಿಯದ ಮುಗ್ಧರು ಇನ್ನು ಆನ್‌ಲೈನ್ ಕ್ಲಾಸ್‌ನಲ್ಲಿ ಕುಳಿತುಕೊಳ್ಳುವರೇ? ನೀವೇ ಒಂದು ಸಲ ಯೋಚಿಸಿ ಅಥವಾ ನಿಮ್ಮ ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಒಂದು ಸಲ ಪ್ರಯತ್ನಿಸಿ. ಈ ಪುಟ್ಟ ಮಕ್ಕಳಿಗೆ ಟಿ.ವಿ.ಯಲ್ಲಿ ಅಥವಾ ಮೊಬೈಲ್‌ನಲ್ಲಿ ಚಿಂಟೂ ಅಥವಾ ಇನ್ನಿತರ ಕರ‍್ಯಕ್ರಮಗಳನ್ನು ಹಾಕಿ ಕೊಟ್ಟಲ್ಲಿಯೂ ಕೂಡಾ ಮಕ್ಕಳು ಟಿ.ವಿ.ಯ ಮುಂದೆಯೋ ಅಥವಾ ಮೊಬೈಲ್ ಮುಂದೆಯೂ ಕುಳಿತುಕೊಳ್ಳುವುದಿಲ್ಲ. ಇನ್ನು ಆನ್‌ಲೈನ್ ಕ್ಲಾಸ್‌ನಲ್ಲಿ ಕುಳಿತುಕೊಳ್ಳುವರೇ? ಒಂದು ಸಲ ಯೋಚಿಸಿ. ಇನ್ನು ಕೆಲ ಮಕ್ಕಳ ಹೆತ್ತವರು ಹೊರಗಡೆ ದುಡಿಯಲು ಹೋದಾಗ ತಮ್ಮ ಮಕ್ಕಳನ್ನು ಮನೆಯಲ್ಲಿ ಹಿರಿಯರ ಜೊತೆಗೆ ಬಿಟ್ಟು ಹೋಗುತ್ತಾರೆ. ಆದರೆ ಅಲ್ಲಿ ಅವರಿಗೆ ಅದರ ಬಗ್ಗೆ ಅರಿವು ಇರುವುದಿಲ್ಲ, ಮೊಬೈಲ್ ಬಳಸಲೂ ಬರುವುದಿಲ್ಲ, ಇನ್ನು ಇಂತಹ ಮಕ್ಕಳಿಗೆ ಆನ್‌ಲೈನ್ ತರಗತಿ ಕನಸಿನ ಮಾತು. ಸರಿ ಇಷ್ಟರ ತನಕ ನಾನು ಹೇಳಿದ್ದು ಶ್ರೀಮಂತರ ವಿಷಯ.
ಇನ್ನು ಬಡವರ ಪರಿಸ್ಥಿತಿ ಕೇಳಿ ಸಚಿವರೇ ನಾನು ರಾಜ್ಯದ ಬೇರೆ ಬೇರೆ ಗ್ರಾಮದ ವಿಷಯಕ್ಕೆ ಹೋಗುವುದಿಲ್ಲ ನಮ್ಮ ಸುಳ್ಯ ತಾಲೂಕನ್ನೇ ಪರಿಗಣಿಸಿದರೆ ಅದರಲ್ಲೂ ಆಲೆಟ್ಟಿ ಎಂಬ ಗ್ರಾಮ ಬಹಳ ದೊಡ್ಡ ಗ್ರಾಮ ಇಲ್ಲಿ ಸ್ಮರ‍್ಟ್ ಫೋನ್ ಮೊಬೈಲ್ ಇಲ್ಲದ ಎಷ್ಟೋ ಮನೆಗಳಿವೆ ಅಲ್ಲದೇ ಮೊಬೈಲ್ ಇದ್ದವರಿಗೂ ನಮ್ಮಂತ ಹಳ್ಳಿಗಳಲ್ಲಿ ಮೊಬೈಲ್ ಟವರ್ ಕೂಡಾ ಇರುವುದಿಲ್ಲ ಅಥವಾ ಟವರ್ ಇದ್ದರೂ ನೆಟ್‌ರ‍್ಕ್ ಸಿಗುವುದಿಲ್ಲ. ಇಂತಹ ಸಮಯದಲ್ಲಿ ನಮ್ಮ ನಮ್ಮ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಬೇಕೆಂದರೆ ಇಲ್ಲಿಯ ಸುಳ್ಯವನ್ನೇ ಅವಲಂಭಿಸಬೇಕಾಗುತ್ತದೆ. ಆದ್ದರಿಂದ ರಾಜ್ಯದಲ್ಲಿ ಇಂತಹ ಹಳ್ಳಿಗಳು ಹಾಗೂ ಸ್ಮರ‍್ಟ್ ಫೋನ್ ಇಲ್ಲದ ಬಡ ಕುಟುಂಬಗಳು ಎಷ್ಟು ಇವೆಯೆಂಬುದು ನಿಮಗೇ ತಿಳಿದಿರುತ್ತದೆ ಹೊರತು ನಮಗಲ್ಲ. ಒಂದು ವೇಳೆ ಇಂತಹಾ ಪುಟಾಣಿ ಮಕ್ಕಳಿಗೆ ನೀವು ಆನ್ ಲೈನ್ ಶಿಕ್ಷಣವನ್ನು ಪ್ರಾರಂಭಿಸಿದರೆ ಇಂತಹ ಮುಗ್ಧ ಪುಟಾಣಿ ಮಕ್ಕಳಿಗೆ ವಂಚಿಸಿದ ಹಾಗೆ ಆಗುವುದಿಲ್ಲವೇ ಎಂದು ಯೋಚಿಸ ಬೇಕಾಗಿದೆ. ದಿಟ್ಟ ನರ‍್ಧಾರಕ್ಕೆ ಬನ್ನಿ ನಮ್ಮಂತಹ ಹಳ್ಳಿಗಳಲ್ಲಿರುವ ಮಕ್ಕಳಿಗೆ ಹಾಗೂ ಪುಟಾಣಿ ಮಕ್ಕಳೊಂದಿಗೆ ಚೆಲ್ಲಾಟವಾಡಬೇಡಿ.

-ಶ್ರೀನಾಥ್ ಆಲೆಟ್ಟಿ
ಉದ್ಯಮಿ ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.