ಆಲೆಟ್ಟಿ ಸೊಸೈಟಿ ಪ್ರ.ದರ್ಜೆ ಸಹಾಯಕ ಪೂವಯ್ಯ ಗೌಡ ಕುಂಚಡ್ಕ ರವರಿಗೆ ಬೀಳ್ಕೊಡುಗೆ – ಸನ್ಮಾನ

Advt_Headding_Middle
Advt_Headding_Middle

 

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಳೆದ 36 ವರ್ಷಗಳಿಂದ ಸೇವೆ ಸಲ್ಲಿಸಿ ಜೂ.30 ರಂದು ವಯೋನಿವೃತ್ತಿ ಹೊಂದಿರುವ ಪೂವಯ್ಯ ಗೌಡ ಕುಂಚಡ್ಕ ರವರಿಗೆ ಸಂಘದ ವತಿಯಿಂದ ಬೀಳ್ಕೊಡುಗೆ ಮತ್ತು ಸಾರ್ವಜನಿಕ ಸನ್ಮಾನ ಸಮಾರಂಭವು ಸಂಘದ ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಯವರು ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕರುಣಾಕರ ಹಾಸ್ಪಾರೆ, ಎ.ಪಿ.ಯಂ.ಸಿ. ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ನಿರ್ದೇಶಕರಾದ ಹರೀಶ್ ರಂಗತ್ತಮಲೆ, ಸುಧಾಕರ ಆಲೆಟ್ಟಿ, ಸುದರ್ಶನ ಪಾತಿಕಲ್ಲು, ಸೂರ್ಯ ನಾರಾಯಣ ನಾಯಕ್ ಅಂಜಿಕ್ಕಾರ್, ಎನ್. ಎ.ಗಂಗಾಧರ ನೆಡ್ಚಿಲು, ಶಿವರಾಮ ಕಾಪುಮಲೆ, ಶ್ರೀಮತಿ ಶ್ರೀದೇವಿ ಭಟ್ ಮಜಿಗುಂಡಿ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿನಕರ ಕೂರ್ನಡ್ಕ ಉಪಸ್ಥಿತರಿದ್ದರು.

ಸಾರ್ವಜನಿಕ ಸನ್ಮಾನ-ಬೀಳ್ಕೊಡುಗೆ

ಸಂಘಕ್ಕೆ 1984 ರಲ್ಲಿ ಸೇರ್ಪಡೆಗೊಂಡು ಸುದೀರ್ಘ 36 ವರ್ಷಗಳ ಕಾಲ ಬೇರೆ ಬೇರೆ ಹುದ್ದೆಗಳಲ್ಲಿ ಜವಬ್ದಾರಿಯಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದ ಪೂವಯ್ಯ ಗೌಡ ಕುಂಚಡ್ಕ ಮತ್ತು ಶ್ರೀಮತಿ ಭಾಗೀರಥಿ ದಂಪತಿಗಳನ್ನು ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಫಲಪುಷ್ಪ ನೀಡಿ ಸ್ಮರಣಿಕೆ ಹಾಗೂ ಚಿನ್ನದ ಉಂಗುರವನ್ನು ತೊಡಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳು, ಮಾಜಿ ನಿರ್ದೇಶಕರು, ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಸಂಘದ ಸದಸ್ಯರುಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದರು. ಪೂವಯ್ಯ ಗೌಡ ರವರಿಗೆ ಅವರ ಸಂಬಂಧಿಕರು ಹಾಗೂ ಆಲೆಟ್ಟಿ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು ,ಗ್ರಾಮದ ಅಭಿಮಾನಿ ವರ್ಗದವರು ಆಗಮಿಸಿ ಹಾರಾರ್ಪಣೆ ಮಾಡಿ ಗೌರವಿಸಿದರು.


ಸಂಘದ ಸಿಬ್ಬಂದಿ ಆನಂದ ಗೌಡ ಬಿಲ್ಲರಮಜಲು ಪ್ರಾರ್ಥಿಸಿದರು. ಸಿ.ಇ.ಒ.ದಿನಕರ ರವರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ ,ವಂದಿಸಿದರು. ಸನ್ಮಾನ ಪತ್ರವನ್ನು ಪ್ರವೀಣ್ ಆಲೆಟ್ಟಿ ವಾಚಿಸಿದರು. ಸುದರ್ಶನ ಪಾತಿಕಲ್ಲು ಅಭಿನಂದನಾ ಮಾತುಗಳನ್ನಾಡಿದರು. ಮಾಜಿ ನಿರ್ದೇಶಕ ಶಿವಾನಂದ
ರಂಗತ್ತಮಲೆ ಯವರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು. ರಾಷ್ಟ್ರ ಗೀತೆಯೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.