Breaking News

ಸುಳ್ಯ ತಾ.ಪಂ.ನಲ್ಲಿ ಶುಭದ ರೈ, ಅಶೋಕ್ ನೆಕ್ರಾಜೆಯವರಿಗೆ ಬೀಳ್ಕೊಡುಗೆ

Advt_Headding_Middle
Advt_Headding_Middle

 

ಸುಳ್ಯ ತಾಲೂಕಿನ ಎಣ್ಮೂರು ಹಾಗೂ ಸುಬ್ರಹ್ಮಣ್ಯ ತಾ.ಪಂ. ಕ್ಷೇತ್ರಗಳು ಕಡಬ ತಾ.ಪಂ.ಗೆ ಸೇರ್ಪಡೆಯಾಗಿರುವುದರಿಂದ ಈ ಎರಡು ಕ್ಷೇತ್ರದ ಸದಸ್ಯರಾಗಿರುವ ಶುಭದ ಎಸ್ ರೈ ಹಾಗೂ ಅಶೋಕ್ ನೆಕ್ರಾಜೆ ಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇಂದು ಸುಳ್ಯ ತಾ.ಪಂ.ಸಭಾಂಗಣದಲ್ಲಿ ನಡೆಯಿತು.


ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು.


ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಸದಸ್ಯ ರಾಧಾಕೃಷ್ಣ ಬೊಳ್ಳೂರು, ಅಬ್ದುಲ್ ಗಫೂರ್ ಕಲ್ಮಡ್ಕ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಶುಭಹಾರೈಸಿದರೆ, ಅಧಿಕಾರಿಗಳ ಪರವಾಗಿ ಸುಳ್ಯ ರೇಂಜರ್ ಮಂಜುನಾಥ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರಶೇಖರ ಪೇರಾಲು ಶುಭ ಹಾರೈಸಿದರು.


ತಹಶೀಲ್ದಾರ್ ಅನಂತಶಂಕರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ವೇದಿಕೆಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.