ಕವಿ ಸುಬ್ರಾಯ ಚೊಕ್ಕಾಡಿ ಯವರ ೮೦ ರ ಸಂಭ್ರಮ ಚೊಕ್ಕಾಡಿಯವರ ಕವಿತೆಗಳಲ್ಲಿ ಹೊಸತನವಿದೆ, ಪರಿಸರದ ನಡುವಿನ ಜೀವನವನ್ನು ವಿದ್ವತ್ ಪೂರ್ಣವಾಗಿಸಿದೆ – ಡಾ.ಪೂವಪ್ಪ ಕಣಿಯೂರು

Advt_Headding_Middle
Advt_Headding_Middle
Advt_Headding_Middle

 

“ತಾನು ಅನುಭವಿಸಿದ ಕಠಿಣ ಸನ್ನಿವೇಶಗಳನ್ನು ಸೃಜನಶೀಲ ವಾಗಿ ಅಭಿವ್ಯಕ್ತಿಸಿದ ಕವಿ ಸುಬ್ರಾಯ ಚೊಕ್ಕಾಡಿಯವರು ಬರೆಯಲು ಆರಂಭಿಸಿದಾಗ ಹೊಸತನ ಅವರ ಕವಿತೆಗಳಲ್ಲಿ ಕಾಣುತ್ತದೆ.ಪರಿಸರದ ನಡುವಿನ ಜೀವನ ಅವರನ್ನು ಮತ್ತಷ್ಟು ವಿದ್ವತ್ ಪೂರ್ಣವಾಗಿಸಿತು. ವರುಷ 80 ಆದರೂ ಈಗಲೂ ಅದೇ ಮುಗ್ಧತೆ ಅವರಲ್ಲಿದೆ.ತನ್ನ ಮನೆಯಂಗಳದ ಅನುಭವಗಳನ್ನು ಕಾವ್ಯ ರೂಪಕ್ಕಿಳಿಸಿದ ಚೊಕ್ಕಾಡಿಯವರಿಗೆ ಸಿಗಬೇಕಾದ ಗೌರವ ಇನ್ನೂ ಸಿಕ್ಕಿಲ್ಲ. ಅವರು ತನಗಾಗಿ ಏನನ್ನೂ ಹಂಬಲಿಸಲಿಲ್ಲ.ನಾವೆಲ್ಲರೂ ಈ ಬಗ್ಗೆ ಪ್ರಯತ್ನಿಸಬೇಕಾಗಿದೆ ಎಂದು ಸಾಹಿತಿ, ಉಪನ್ಯಾಸಕ ಡಾ.ಪೂವಪ್ಪ ಕಣಿಯೂರು ಪ್ರಧಾನ ಭಾಷಣ ಮಾಡಿದರು.

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಫ್ರೆಂಡ್ಸ್ ಕ್ಲಬ್ ಪೈಲಾರು ಇದರ ಸಹಯೋಗದಲ್ಲಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರ 80 ವರ್ಷದ ಹುಟ್ಟುಹಬ್ಬವನ್ನು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿಆಯೋಜಿಸಲಾಗಿದ್ದು ‘ ಚೊಕ್ಕಾಡಿ ಬದುಕು, ಬರಹ-ಒಂದು ಅವಲೋಕನ ಕಾರ್ಯಕ್ರಮದಲ್ಲಿ ಚೊಕ್ಕಾಡಿಯವರ ಕಲ್ಲು ಮಂಟಪ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.


ಯುವಬರಹಗಾರ-ಶಿಕ್ಷಕ ಅರವಿಂದ ಚೊಕ್ಕಾಡಿ ಮಾತನಾಡಿ “ಸುಬ್ರಾಯ ಚೊಕ್ಕಾಡಿಯವರು ಆಕಾಶಕ್ಕೆ ಲಗ್ಗೆ ಇಟ್ಟ ಪಾರಿಜಾತ.ಸಣ್ಣ ಹೂವು ಪಾರಿಜಾತದ ಪರಿಮಳ ಹೇಗೆ ಪಸರಿಸುತ್ತದೆಯೋ ಹಾಗೆ ಚೊಕ್ಕಾಡಿಯಿಂದ ಸುಬ್ರಾಯ ಚೊಕ್ಕಾಡಿಯವರ ಕಂಪು ದೇಶ-ವಿದೇಶಗಳಿಗೆ ಹರಡಿದೆ. ಆಧುನಿಕ ಸಾಹಿತ್ಯವನ್ನು ಕರಾವಳಿಗೆ ತಂದವರಲ್ಲಿ ಚೊಕ್ಕಾಡಿಯವರು ಪ್ರಮುಖರು ಎಂದು ಹೇಳಿದರು.

ಶಿಕ್ಷಕ-ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು, ಬೆಂಗಳೂರಿನ ಮಾಲಿನಿ ಗುರುಪ್ರಸನ್ನ, ಸಿಂಧೂರಾವ್.ಟಿ ಮತ್ತು ಹರೀಶ್ ಕೇರ ಸಂಪಾದಿಸಿರುವ ಚೊಕ್ಕಾಡಿಯವರ ಬಗೆಗಿನ ಅಭಿನಂದನಾ ಗ್ರಂಥ “ವಿಹಂಗಮ” ಬಿಡುಗಡೆಗೊಳಿಸಿದರು. ಚೊಕ್ಕಾಡಿಯವರ ಸಾಹಿತ್ಯದ ಮೇಲೆ ಬೆಳಕು ಬೀರುವ ಅಭಿನಂದನಾ ಗ್ರಂಥ ಹೊರತಂದ ಅವರ ಅಭಿಮಾನಿಗಳ ಶ್ರಮವನ್ನು ಶ್ಲಾಘಿಸಲಾಯಿತು.

ಸನ್ಮಾನ-ಅಭಿನಂದನೆ :

ಸಾಹಿತ್ಯ ಪರಿಷತ್ತು ಮತ್ತು ಫ್ರೆಂಡ್ಸ್ ಕ್ಲಬ್ ನ ವತಿಯಿಂದ ಸುಬ್ರಾಯ ಚೊಕ್ಕಾಡಿಯವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಚೊಕ್ಕಾಡಿಯವರ ಮಾತು:
ಯಾವುದಕ್ಕೂ ಹಂಬಲಿಸಿ ಬರೆದವನಲ್ಲ ನಾನು.ನನ್ನ ಪರಿಸರ ನನ್ನ ಬರವಣಿಗೆಗೆ ಸ್ಫೂರ್ತಿ ಯನ್ನೊದಗಿಸಿತು.ನನ್ನ ಊರಿನಲ್ಲೆ ನನ್ನ ಪ್ರೀತಿ ಪಾತ್ರರ ನಡುವೆ ಗೌರವಿಸಿ ನನ್ನ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದ್ದಕ್ಕಾಗಿ ಸಾಹಿತ್ಯ ಪರಿಷತ್ತು ಮತ್ತು ಫ್ರೆಂಡ್ಸ್ ಕ್ಲಬ್ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.
ಸಮಾರಂಭದ ಅಧ್ಯಕ್ಷತೆ ಯನ್ನು ವಹಿಸಿದ್ದ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ ಮಾತನಾಡಿ ” ಸುಬ್ರಾಯ ಚೊಕ್ಕಾಡಿಯವರಂತ ಕವಿಗಳು ನಮ್ಮ ತಾಲೂಕಿನಲ್ಲಿರುವುದು ನಮಗೆಲ್ಲ ಹೆಮ್ಮೆ. ಅವರ ಸಾಹಿತ್ಯ ಸೇವೆಯನ್ನು ಅವರ ೮೦ರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವಲೋಕಿಸಿ ಗೌರವಿಸುವ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಸಂತೋಷದಿಂದ ಮಾಡುತ್ತಿದೆ” ಎಂದು ಹೇಳಿದರು.
ವೇದಿಕೆಯಲ್ಲಿ ಸುಬ್ರಾಯ ಚೊಕ್ಕಾಡಿಯವರ ಪತ್ನಿ ಶ್ರೀಮತಿ ಲಕ್ಷ್ಮೀ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಚಂದ್ರಶೇಖರ ಪೇರಾಲು ಮತ್ತು ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ , ಚೊಕ್ಕಾಡಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಮೂಕಮಲೆ ಉಪಸ್ಥಿತರಿದ್ದರು.


ಚಂದ್ರಶೇಖರ ಪೇರಾಲು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ತೇಜಸ್ವಿ ಕಡಪಳ ವಂದಿಸಿದರು . ಚರಿಷ್ಮಾ ಕಡಪಳ ಪ್ರಾರ್ಥಿಸಿದರು. ಸುಶ್ಮಿತಾ ಕಡಪಳ ಕಾರ್ಯಕ್ರಮ ನಿರೂಪಿಸಿದರು. ಯಕ್ಷಿತಾ ಪಾರೆ ಮತ್ತು ಫ್ರೆಂಡ್ಸ್ ಕ್ಲಬ್‌ನ ಸದಸ್ಯರು ಸಹಕರಿಸಿದರು.

ಗಾಯಕ ರಮೇಶ್ ಮೆಟ್ಟಿನಡ್ಕರವರಿಂದ ಸುಬ್ರಾಯ ಚೊಕ್ಕಾಡಿಯವರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು .
ಸುಬ್ರಾಯ ಚೊಕ್ಕಾಡಿಯವರ ಅಭಿಮಾನಿಗಳು ಮತ್ತು ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.