ದ್ವಾರಕ ಹೋಟೆಲ್ ಸೀಲ್ ಡೌನ್ ವದಂತಿ ಆರೋಗ್ಯ ಇಲಾಖೆ, ಹೋಟೆಲ್ ಮಾಲಕರ ನಿರಾಕರಣೆ ಸುಳ್ಳು ಸುದ್ದಿ ಹರಡಿಸದಂತೆ ವೈದ್ಯಾಧಿಕಾರಿ ಮನವಿ

Advt_Headding_Middle
Advt_Headding_Middle
Advt_Headding_Middle

 

ಸುಳ್ಯದ ಹೆಸರಾಂತ ಹೋಟೆಲ್ ದ್ವಾರಕ ಸೀಲ್ ಡೌನ್ ಆಗಿದೆ ಎಂಬ ವದಂತಿ ಹರಿದಾಡುತ್ತಿದ್ದು, ಈ ವದಂತಿಯನ್ನು ಆರೋಗ್ಯ ಇಲಾಖೆ ಹಾಗೂ ಹೋಟೆಲ್ ಮಾಲಕರು ನಿರಾಕರಿಸಿದ್ದಾರೆ. ದಯವಿಟ್ಟು ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಅವರು ವಿನಂತಿಸಿಕೊಂಡಿದ್ದಾರೆ.

ಸುಳ್ಯದ ದ್ವಾರಕ ಹೋಟೆಲ್ ನಲ್ಲಿರುವ ಕೆಲಸದ ವ್ಯಕ್ತಿಗೆ ಕೊರೊನಾ ಸೋಂಕು ಬಂದಿದೆಯಂತೆ, ಮಂಗಳೂರಿಗೆ ಕರೆದೊಯ್ದಿದ್ದಾರಂತೆ ಹೋಟೆಲ್ ಸೀಲ್ ಡೌನ್ ಆಗಿದೆಯಂತೆ ಎಂಬ ವದಂತಿ ಹರಡುತ್ತಿದೆ. ಸುದ್ದಿ ಪತ್ರಿಕಾ ಕಚೇರಿ ಗೆ ಹಾಗೂ ವರದಿಗಾರರಿಗೆ ಹಲವು ಮಂದಿ ಫೋನ್ ಮಾಡಿ ವಿಚಾರಿಸ ತೊಡಗಿದ್ದಾರೆ.

ಈ ಕುರಿತು ಸುದ್ದಿ ಹೋಟೆಲ್ ಮಾಲಕರನ್ನು ಸಂಪರ್ಕಿಸಿ ವಿಚಾರಿಸಿದಾಗ “ನಮ್ಮಲ್ಲಿ ಯಾರಿಗೂ ಸೋಂಕು ಇಲ್ಲ. ನಮಗೂ ಕೆಲವರು ಫೋನ್ ಮಾಡಿ‌ ಕೇಳಿದ್ದಾರೆ. ಯಾರೋ ಸುಮ್ಮನೆ ಸುಳ್ಳು ಸುದ್ದಿ ಹರಡುತ್ತಿದ್ದಾರಷ್ಟೆ. ನಾವು ಹೋಟೆಲ್ ಹಾಗೂ ತರಕಾರಿ ಅಂಗಡಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದರು.

ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ರನ್ನು ಸಂಪರ್ಕಿಸಿ ವಿಚಾರಿಸಿದಾಗ “ದ್ವಾರಕದ ಯಾರಿಂದಲೂ ಸ್ವಾಬ್ ತೆಗೆದೇ ಇಲ್ಲ. ಮತ್ತು ಹೋಟೆಲ್ ಸೀಲ್ ಡೌನ್ ವಿಚಾರವೇ ಇಲ್ಲ. ಹಾಗಿದ್ದರೆ ನಮಗೆ ತಿಳಿದ ಬಳಿಕವೇ‌ ಮಾಡಬೇಕಾಗುತ್ತದೆ. ದಯವಿಟ್ಟು ಯಾರೂ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬೇಡಿ ಎಂದು ವೈದ್ಯಾಧಿಕಾರಿ ಗಳು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.