Breaking News

ಪತಿಯ ಮನೆಗೆ ಸೇರಿಸಬೇಕೆಂದು ಬೆಂಗಳೂರಿನಿಂದ ಸುಳ್ಯಕ್ಕೆ ಬಂದ ಮಹಿಳೆ ಪ್ರಕರಣ

Advt_Headding_Middle

 

ಮಂಗಳೂರಿನಲ್ಲಿ ಮಾತುಕತೆ ನಡೆದರೂ ಮತ್ತೆ ಖಲೀಲ್ ಮನೆ ಗೇಟಿನ ಮುಂದೆ ಕುಳಿತ ಮಹಿಳೆ


ಪತಿಯ ಮನೆಗೆ ಸೇರಿಸಬೇಕೆಂದು ಬೆಂಗಳೂರಿನಿಂದ ಸುಳ್ಯಕ್ಕೆ ಬಂದಿದ್ದ ಮಹಿಳೆಯ ಪ್ರಕರಣಕ್ಕೆ ಸಂಬಂಧಿಸಿ ಜೂ. 28 ರಂದು ಮಂಗಳೂರಿನಲ್ಲಿ ಮಾತುಕತೆ ನಡೆದ ಬಳಿಕವೂ‌ಮಹಿಳೆ ಆಸಿಯಾ ತನ್ನ ಧರಣಿಯನ್ನು ಮುಂದುವರಿಸಿದ್ದಾರೆ. ಇಂದಿನಿಂದ ಮತ್ತೆ ಖಲೀಲ್ ಕಟ್ಟೆಕ್ಕಾರ್ ರ ಮನೆಯ ಗೇಟಿನ ಬಳಿ ಕುಳಿತುಕೊಂಡಿದ್ದಾರೆ.

ಜೂ.25ರಂದು ಸುಳ್ಯ ನಾವೂರು ಹಾಜಿ ಅಬ್ದುಲ್ಲಾ ಕಟ್ಟೆಕಾರ್ ರವರ ನಿವಾಸಕ್ಕೆ ಬೆಂಗಳೂರು ಮೂಲದ ಆಸಿಯಾ ಎಂಬ ಮಹಿಳೆ ಅಬ್ದುಲ್ಲಾರ ಪುತ್ರ ಇಬ್ರಾಹಿಂ ಖಲೀಲ್ ರವರು ನನ್ನನ್ನು ಮತಾಂತರಗೊಳಿಸಿ ವಿವಾಹವಾಗಿರುವುದಾಗಿ ಇದೀಗ ನನ್ನಿಂದ ದೂರ ಸರಿದಿರುವುದಾಗಿ ಹೇಳಿಕೊಂಡು ಬಂದು ಮನೆಯ ಜಗಲಿಯಲ್ಲಿ ಠಿಕಾಣಿ ಹೂಡಿದ್ದರು.

ಈ ಘಟನೆಯ ನಡೆದುದ್ದರಿಂದ ಜೂನ್ ೨೮ರಂದು ಮಂಗಳೂರಿನ ಮಹಿಳಾ ಹೋರಾಟಗಾರ್ತಿ ವಿದ್ಯಾದಿನಕರ್ , ದ.ಕ. ಜಿಲ್ಲಾ ಜಮಾಯತ್ ಇಸ್ಲಾಂ ಜಿಲ್ಲಾ ಸಂಚಾಲಕ ಕೌಟಂಬಿಕ ಸಲಹೆಗಾರ ಶಹೀದ್ ಇಸ್ಮಾಯಿಲ್ ಹಾಗೂ ಸುಳ್ಯದ ಸಾಮಾಜಿಕ ಹೋರಾಟಗಾರ ಎಂ.ಬಿ. ಸದಾಶಿವ ನೇತೃತ್ವದಲ್ಲಿ ಎರಡು ಕಡೆಯವರನ್ನು ಕರೆಸಿ ನಡೆದ ಘಟನೆಯ ಸತ್ಯಾಸತ್ಯತೆ ಬಗ್ಗೆ ವಿವರವನ್ನು ಸಂಗ್ರಹಿಸುವ, ಪರಿಹಾರವನ್ನು ಕಂಡುಕೊಳ್ಳುವ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವ ಬಗ್ಗೆ ಮಂಗಳೂರು ಜಮಾತ್ ಇಸ್ಲಾಂ ಕಚೇರಿಯಲ್ಲಿ ಮಾತುಕತೆ ನಡೆದಿದೆ.
ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ಮಾತುಕತೆಯಲ್ಲಿ ಮೊದಲು ಆಸಿಯಾಗೆ ಮಾತನಾಡಲು ಅವಕಾಶ ನೀಡಲಾಯಿತು. ಆಗ ಆಸಿಯಾ ಸುಮಾರು 1 ಗಂಟೆಗೂ ಹೆಚ್ಚು ಕಾಲ‌ ಮಾತನಾಡಿದರೆಂದೂ ತಾನು ೨೦೧೪ರಿಂದ ೨೦೨೦ ರ ವರೆಗಿನ ಬಗ್ಗೆ ಇಬ್ರಾಹಿಂ ಇವರೊಂದಿಗೆ ಫೇಸ್ಬುಕ್ನಲ್ಲಿ ಪರಿಚಯದ ಬಗ್ಗೆ, ಸ್ನೇಹಕ್ಕೆ ತಿರುಗಿದರ ಬಗ್ಗೆ ವಿವರ ನೀಡಿದರೆಂದು ತಿಳಿದು ಬಂದಿದೆ. ಆದರೇ ಮಹಿಳೆ ಆಸಿಯಾರ ಬಳಿ ಯಾವುದೇ ಲಿಖಿತ ದಾಖಲೆಗಳು ಇರಲಿಲ್ಲವೆನ್ನಲಾಗಿದೆ.
ಅವರ ಮಾತಿನ ಬಳಿಕ ಇಬ್ರಾಹಿಂ ಖಲೀಲ್ ಗೆ ಮಾತನಾಡಲು ಅವಕಾಶ ನೀಡಲಾಯಿತೆಂದೂ ಆಗ ಆಸಿಯಾ ಹೇಳಿದ ವಿಷಯವನ್ನು ಖಲೀಲ್ ಒಪ್ಪದೆ, ಫೇಸ್ಬುಕ್ ಗೆಳೆತನ ಮಾತ್ರ ಹೊಂದಿದೆ. ವ್ಯಾಪಾರ ಸಂದರ್ಭದಲ್ಲಿ ಬೆಂಗಳೂರಿಗೆ ಹೋದಾಗ ಇವರನ್ನು ಭೇಟಿಯಾಗಿದ್ದೆ, ಹೊರತು ಇವರನ್ನು ಮತಾಂತರಿಸಿ ನಾನು ಮದುವೆಯಾಗಿಲ್ಲ ಎಂದು ಹೇಳಿದರು.
ಚರ್ಚೆ ನಡೆದಾಗ ಮಾತುಕತೆಗೆ ಕರೆದವರು ಆಸಿಯಾರಲ್ಲಿ ದಾಖಲೆ ಕೇಳಿದರೆಂದೂ ಆಗ ಆಕೆ ತನ್ನ ಜತೆಗಿನ ನಾಲ್ಕೆದು ಮೊಬೈಲ್ ನಂಬರ್ ನೀಡಿದರಲ್ಲದೆ ಮದುವೆ ಸಂದರ್ಭದಲ್ಲಿ ಇವರೆಲ್ಲ ನೇತೃತ್ವದಲ್ಲಿ ಇದ್ದರು. ಇವರ ಸಮ್ಮುಖ ಮದುವೆಯಾಗಿದೆ ಅವರಲ್ಲಿ ವಿಚಾರಿಸಬೇಕು ಎಂದು ಮಹಿಳೆ ಕೇಳಿದರೆಂದೂ ತಿಳಿದು ಬಂದಿದೆ.
ಸಭೆಯ ತೀರ್ಮಾನದಂತೆ ಒಂದು ವಾರದಲ್ಲಿ ನಿಖಾಃ ಆಗಿರುವ ದಾಖಲೆಗಳನ್ನು , ಮದುವೆ ಮಾಡಿಸಿದವರ ಹೇಳಿಕೆಯನ್ನು ೭ ದಿನದೊಳಗೆ ಸಾಕ್ಷಿ ಸಮೇತ ತರುವಂತೆ ಹಾಗೂ ಈ ಕೆಲಸವನ್ನು ಸಂಧಾನಕಾರರಿಗೆ ಒಪ್ಪಿಸುವುದೆಂದೂ ತೀರ್ಮಾನಿಸಲಾಯಿತು. ಈ ಬಗ್ಗೆ ಮದುವೆ ಆಗಿದ್ದು ರುಜುವಾತು ಆದರೆ ಮಹಿಳೆ ಆಸಿಯಾರನ್ನು ಖಲೀಲ್ ನೊಂದಿಗೆ ಕಳುಹಿಸಿ ಕೊಡಲು ಸಭೆಯಲ್ಲಿ ತೀರ್ಮಾನವಾಯಿತೆಂದೂ ತಿಳಿದುಬಂದಿದೆ. ಅಲ್ಲಿಯವರೆಗೆ ಅವರ ಮನೆಗೆ ಹೋಗಿ ಯಾವುದೇ ರೀತಿಯ ತೊಂದರೆ ಕೊಡಬಾರದು ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಇದಕ್ಕೆ ಒಪ್ಪಿದ ಆಸಿಯಾ ಸುಳ್ಯಕ್ಕೆ ಬಂದು ಕಟ್ಟೆಕಾರ್ ಮನೆಯ ಸಿಟೌಟ್ ನಲ್ಲಿಟ್ಟಿದ್ದ ಬ್ಯಾಗನ್ನು ಸಂಧಾನಕಾರರ ಮುಖಾಂತರ ತರಿಸಿಕೊಂಡಿದ್ದರೆಲಾಗಿದೆ.

*ಮತ್ತೆ‌ ಮನೆಯ ಗೇಟಿನ ಮುಂಭಾಗ ಠಿಕಾಣಿ*

ಆದರೇ ಮಂಗಳೂರಿನಲ್ಲಿ ನಡೆದ ಮಾತುಕತೆಯಂತೆ ಸೋಮವಾರ ಒಂದು ದಿನ ಆಸಿಯಾ ಧರಣಿ ಕೂರದೇ ಸುಮ್ಮನಿದ್ದರು. ಜೂ.30ರಂದು ಮತ್ತೆ ಧರಣಿ ಕೂರಲೆಂದು ಕಟ್ಟೆಕ್ಕಾರ್ ಖಲೀಲ್ ರ ಮನೆಯ ಬಳಿ ಬಂದಾಗ ಗೇಟಿಗೆ ಬೀಗ ಹಾಕಲಾಗಿತ್ತು. ಇದನ್ನು ನೋಡಿದ ಆಸಿಯಾ ವಾಪಸ್ ಹೋಗದೆ ಗೇಟಿನ ಎದುರೇ ಚಯರ್ ಹಾಕಿ ಠಿಕಾಣಿ ಹೂಡಿದರು.

ಮಂಗಳೂರಿನಲ್ಲಿ ನಡೆದ ಸಂಧಾನ ಸಭೆಯಲ್ಲಿ ಖಲೀಲ್ ಇಬ್ರಾಹಿಂ ಕಟ್ಟಿಕಾರ್ ರವರ ಮನೆಯಿಂದ ಕಲೀಲ್ ರವರ ತಂದೆ-ತಾಯಿ ಮಾವ ಹಾಗೂ ಖಲೀಲ್ ರವರು, ಸಂಧಾನಕಾರರಾಗಿ ಎಂಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ , ಹಸೈನಾರ್ ಜಯನಗರ, ಮಂಗಳೂರು ಜಮಾತೆ ಇಸ್ಲಾಂ ಕೌಟುಂಬಿಕ ಸಲಹೆಗಾರ ಸಮಿತಿಯ ಇಬ್ಬರು ಮಹಿಳಾ ಸದಸ್ಯರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.