ಸರಕಾರಿ ಆಸ್ಪತ್ರೆಯ ನರ್ಸ್ ಗೆ ಕೊರೊನಾ ಪಾಸಿಟಿವ್

Advt_Headding_Middle
Advt_Headding_Middle

ಸುಳ್ಯದಲ್ಲಿ ಕೊರೋನಾ ವಾರಿಯರ್ ಗೂ ತಟ್ಟಿತು ಸೋಂ

ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಸೀಲ್ ಡೌನ್

ಸುಳ್ಯ ಸರಕಾರಿ ಆಸ್ಪತ್ರೆಯ ನರ್ಸ್ ಒಬ್ಬರಿಗೆ ಕೊರೊನಾ ಸೋಂಕು ಇರುವುದು ಇಂದು ಧೃಡ ಪಟ್ಟಿದೆ.

ಆಸ್ಪತ್ರೆಯ ಐ.ಸಿ.ಯು. ಘಟಕದಲ್ಲಿ ವಾರದ ಹಿಂದೆ ಅಡ್ಮಿಟ್ ಆಗಿ ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆ ಗೆ ದಾಖಲಾದ ರೋಗಿಯೊಬ್ಬರಿಗೆ ಎರಡು ದಿನದ ಹಿಂದೆ ಕೊರೊನಾ ಧೃಡಪಟ್ಟಿತ್ತು. ಈ ಹಿನ್ನಲೆಯಲ್ಲಿ ಸುಳ್ಯದ ಆಸ್ಪತ್ರೆ ಯ 13 ಮಂದಿ ನರ್ಸ್ ಗಳ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆ ಗೆ ಕಳುಹಿಸಲಾಗಿತ್ತು. ಇಂದು ವರದಿ ಬಂದಾಗ ಆ ರೋಗಿಗೆ ಚಿಕಿತ್ಸೆ ನೀಡಿದ ಐ.ಸಿ.ಯು
ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಡಬ ಸಮೀಪದವರಾದ ನರ್ಸ್ ಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಉಳಿದ 12 ಮಂದಿಯ ವರದಿ‌ ನೆಗೆಟಿವ್ ಬಂದಿದೆ.

ಈ ಹಿನ್ನಲೆಯಲ್ಲಿ ಆಸ್ಪತ್ರೆಯ ಐ.ಸಿ.ಯು. ಘಟಕವನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.