ಸಹಾಯಕ ಪೊಲೀಸ್ ಉಪನಿರೀಕ್ಷಕ ಸಾಂತಪ್ಪ ಗೌಡರಿಗೆ ನಿವೃತ್ತಿ

Advt_Headding_Middle
Advt_Headding_Middle

ಬ್ರಹ್ಮಾವರದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಾಂತಪ್ಪ ಗೌಡರವರು ಸೇವೆಯಿಂದ ಜೂ.30 ರಂದು ನಿವೃತ್ತಿ ಹೊಂದಿದರು.
ಇವರು ಆರಕ್ಷಕ ವೃತ್ತಿಯನ್ನು ಉಡುಪಿ ಜಿಲ್ಲೆಯ ಕೊಲ್ಲೂರು, ಬೈಂದೂರು, ಪಡುಬಿದ್ರಿ, ಕಾಪು, ಉಡುಪಿನಗರ, ಶಿರ್ವ, ಕುಂದಾಪುರ‌ ವೃತ್ತ ಕಚೇರಿ, ಉಡುಪಿ ವೃತ್ತ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಇವರು ಬ್ರಹ್ಮಾವರ ಠಾಣೆಯಲ್ಲಿ ಎ.ಎಸ್.
ಐ ಆಗಿ ಐದೂವರೆ ವರ್ಷ ಕರ್ತವ್ಯದಲ್ಲಿದ್ದು, ತಮ್ಮ 33 ವರ್ಷಗಳ ಸುದೀರ್ಘ ಸೇವೆಯಿಂದ ಜೂ.30 ರಂದು ನಿವೃತರಾದರು.
ಇವರು ಮೂಲತಃ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಇಜ್ಜಲುಮಕ್ಕಿ ದಿ.ಸೋಮಪ್ಪ ಗೌಡರ ಮತ್ತು ಶ್ರೀಮತಿ ಅಮ್ಮಕ್ಕ ರವರ ಪುತ್ರ. ಇವರ ಪತ್ನಿ ಸುನಿತಾ ಗೃಹಿಣಿಯಾಗಿದ್ದು, ಪುತ್ರ ರಿತೇಶ್ ಕುಮಾರ್ ಡಿಪ್ಲೊಮಾ ಮತ್ತು ಪುತ್ರಿ ರಚಿತ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.