ರಸ್ತೆಗೆ ಮಣ್ಣು ಹಾಕಿ ಗಡಿ ಬಂದ್ : ಈಗ ಕೇರಳದ ಸರದಿ

Advt_Headding_Middle

 

ಕಾಸರಗೋಡು, ದಕ್ಷಿಣ ಕನ್ನಡ ಸಂಪರ್ಕಿಸುವ ರಸ್ತೆಗಳು ಬಂದ್

ಹೊಸ ಕ್ರಮವಲ್ಲ: ಕಾಸರಗೋಡು ಡಿ.ಸಿ. ಸ್ಪಷ್ಟನೆ

ಕೊರೊನಾ ಹಿನ್ನೆಲೆಯಲ್ಲಿ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಣ್ಣು ಹಾಕಿ ಮುಚ್ಚಿದ್ದ ಕೇರಳ-ಕರ್ನಾಟಕ ಸಂಪರ್ಕದ ರಸ್ತೆಗಳನ್ನು ಇದೀಗ ಕಾಸರಗೋಡು ಜಿಲ್ಲಾಡಳಿತ ಮುಚ್ಚಿದ್ದು, ಮತ್ತೆ ಜನರಿಗೆ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.

ಮಾರ್ಚ್ ಎರಡನೇ ವಾರದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದ್ದರಿಂದ ಕರ್ನಾಟಕ ಸರಕಾರದ ಸೂಚನೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೇರಳಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಾರಿಕೇಡ್ ಹಾಕಿ ಮುಚ್ಚಿತ್ತು . ಬಳಿಕ ಮಣ್ಣಿನ ರಾಶಿ ಹಾಕಿ ಮುಚ್ಚಿ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿತ್ತು.

ಮಂಗಳೂರು ಕಾಸರಗೋಡು ಸಂಪರ್ಕದ ತಲಪಾಡಿಯಲ್ಲೂ ಸಂಚಾರ ನಿರ್ಬಂಧಿಸಿ ಆಂಬ್ಯುಲೆನ್ಸ್ ಸಂಚಾರವನ್ನು ಕೂಡಾ ತಡೆದಾಗ ಈ ವಿಷಯವು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತಲ್ಲದೆ, ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು.

ಕರ್ನಾಟಕದಲ್ಲಿ ಲಾಕ್ ಡೌನ್ ಹಂತ ಹಂತವಾಗಿ ಸಡಿಲಿಕೆಗೊಂಡ ಬಳಿಕ ಸುಳ್ಯ ತಾಲೂಕಿನ ಗಡಿಪ್ರದೇಶವಾದ ಮುರೂರಿನಲ್ಲಿ ಮಣ್ಣಿನ ರಾಶಿ ತೆಗೆಯಲಾಗಿತ್ತು. ಕೋಲ್ಚಾರು ಸಮೀಪದ ಕನ್ನಡಿತೋಡು, ಬಡ್ಡಡ್ಕ ಸಮೀಪದ ಕಲ್ಲಪಳ್ಳಿ, ಮಂಡೆಕೋಲಿನ ಕನ್ಯಾನ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷೆಯ ಹಿನ್ನೆಲೆಯಲ್ಲಿ ಮಣ್ಣು ತೆರವುಗೊಳಿಸಲಾಗಿತ್ತು. ಬಳಿಕ ಎಲ್ಲ ಕಡೆ ಬಾರಿಕೇಡ್ ಅಳವಡಿಸಿ, ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತಿದ್ದು, ಪಾಸ್ ಇದ್ದವರಿಗೆ ಮಾತ್ರ ಅಂತರರಾಜ್ಯ ಪ್ರವೇಶಿಸುವ ಅವಕಾಶವನ್ನು ಕಲ್ಪಿಸಲಾಗುತ್ತಿತ್ತು.

ಇದೀಗ ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರದ ಸೂಚನೆಯಂತೆ ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಅವರ ಆದೇಶದ ಮೇರೆಗೆ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಗಡಿಪ್ರದೇಶದಲ್ಲಿ ಮಣ್ಣು ಹಾಕಿ ಬಂದ್ ಮಾಡಲಾಗಿದೆ.
ಅದರಂತೆ ಜಾಲ್ಸೂರು-ಕಾಸರಗೋಡು ರಸ್ತೆಯ ಪರಪ್ಪೆ, ಸುಳ್ಯ-ಬಂದಡ್ಕ ರಸ್ತೆಯ ಕನ್ನಡಿತೋಡು, ಸುಳ್ಯ-ಪಾಣತ್ತೂರು ರಸ್ತೆಯ ಕಲ್ಲಪಳ್ಳಿ, ಸುಳ್ಯ-ಅಡೂರು ರಸ್ತೆಯ ಕನ್ಯಾನ ಗಡಿಪ್ರದೇಶಗಳಲ್ಲಿ ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕಿ ಸಂಪೂರ್ಣವಾಗಿ ರಸ್ತೆಯನ್ನು ಬಂದ್ ಮಾಡಲಾಗಿದೆ.

ಈ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ. ಅಂದು ಮಣ್ಣು ಹಾಕಿದ್ದನ್ನು ವಿರೋಧಿಸಿದವರು, ಈಗ ಮಣ್ಣು ಹಾಕಿದ್ದು ಸರಿಯೇ ಎಂದು ಅನೇಕರು ಪ್ರಶ್ನಿಸುತ್ತಿದ್ದರೆ, ಮತ್ತೆ ಅನೇಕರು,” ಅಂದು ಮಣ್ಣು ಹಾಕಿದಾಗ ಸಮರ್ಥಿಸಿಕೊಂಡವರಿಗೆ ಈಗ ವಿರೋಧಿಸಲು ನೈತಿಕತೆ ಇದೆಯೇ ಎಂದು ಕೇಳುತ್ತಿದ್ದಾರೆ.
” ಅಂದು ಇಲ್ಲಿ ಮಣ್ಣು ಹಾಕಿದ್ದಕ್ಕೆ ವಿರೋಧ ಉಂಟಾದದ್ದಲ್ಲ. ಮಂಗಳೂರು ಪ್ರವೇಶದ ಆಂಬ್ಯುಲೆನ್ಸ್ ಗಳಿಗೂ ತಡೆ ಮಾಡಿದಾಗ ವಿರೋಧ ಉಂಟಾಗಿತ್ತು. ಇಂತಹ ಕೆಲಸ ಯಾವ ಸರಕಾರ ಮಾಡಿದರೂ ಖಂಡನೀಯ ” ಎಂಬ ವಾದವೂ ಇದೆ.

ಈ ಮಧ್ಯೆ ನಿನ್ನೆ ಸಾಮಾಜಿಕ ಜಾಲತಾಣದ ಕುರಿತು ಹೇಳಿಕೆ ನೀಡಿರುವ ಕಾಸರಗೋಡು ಜಿಲ್ಲಾಧಿಕಾರಿಯವರು, ರಸ್ತೆ ಮುಚ್ಚಿರುವುದು ಹೊಸ ಕ್ರಮವಲ್ಲ. ಈಗಾಗಲೇ ಸಂಚಾರಕ್ಕೆ ನಿರ್ಬಂಧವಿರುವ ರಸ್ತೆಗಳನ್ನು ಕೊರೋನಾ ಹರಡುವಿಕೆಯ ನಿಟ್ಟಿನಲ್ಲಿ ಮತ್ತಷ್ಟು ಬಿಗುವಾದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.