ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ರೌಂಡ್ ಟಾಕ್  : ಸೆಕ್ಟರ್ ನಾಯಕರೊಂದಿಗೆ ಸಮಾಲೋಚನೆ ಮತ್ತು ಸನ್ಮಾನ

Advt_Headding_Middle
Advt_Headding_Middle
Advt_Headding_Middle

ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SSF) ಸುಳ್ಯ ಡಿವಿಷನ್ ವತಿಯಿಂದ ನಾಲ್ಕು ಸೆಕ್ಟರ್ ಗಳ ನಾಯಕರೊಂದಿಗೆ ಸಮಾಲೋಚನಾ ಚರ್ಚೆ ಹಾಗೂ ಲಾಕ್ಡೌನ್ ಸಮಯಗಳಲ್ಲಿ ನಡೆದ ಆನ್ಲೈನ್ ಸ್ಪರ್ಧೆಗಳ ವಿಜಯಿಗಳಿಗೆ ಸನ್ಮಾನ ಕಾರ್ಯಕ್ರಮ ಬೆಳ್ಳಾರೆ ಸುನ್ನೀ ಸೆಂಟರ್ ನಲ್ಲಿ  ನಡೆಯಿತು.

ಡಿವಿಷನ್ ಅಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಈಸ್ಟ್ ಝೋನ್ ಸದಸ್ಯ ಜುನೈದ್ ಸಖಾಫಿ ಜೀರ್ಮುಕ್ಕಿ ಉದ್ಘಾಟಿಸಿದರು. ದಕ್ಷಿಣ ಕನ್ನಡ ಈಸ್ಟ್ ಝೋನ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ ದು ನೆರೆವೇರಿಸಿದರು. ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಫೈಝಲ್ ಝುಹ್ರಿ, ಕೆ.ಸಿ.ಎಫ್ ಅಬುಧಾಬಿ ಪಬ್ಲಿಕೇಶನ್ ಕನ್ವೀನರ್ ಕಬೀರ್ ಜಟ್ಟಿಪಳ್ಳ, ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹುದ್ದೀನ್ ಹಿಮಮಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಲಾಕ್ಡೌನ್ ಸಮಯಗಳಲ್ಲಿ ನಡೆದ ತನಾಫುಸ್ ಆನ್ಲೈನ್ ಸ್ಪರ್ಧೆಯಲ್ಲಿ ಸುಳ್ಯ ಡಿವಿಷನ್ ನಿಂದ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಿಯಾದ ಹಾಫಿಳ್ ನೌಶಾದ್ ಅಡ್ಕಾರ್, ತರ್ತೀಲ್ ಆನ್ಲೈನ್ ಸ್ಪರ್ಧೆಯಲ್ಲಿ ಸುಳ್ಯ ಡಿವಿಷನ್ ನಿಂದ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಿಯಾದ ಸುಹೈಲ್ ಬೆಳ್ಳಾರೆ ಹಾಗೂ ತುರ್ತು ಸ್ಪಂದನೆ ಹಾಗೂ ರಕ್ತದಾನ ಕ್ರಾಂತಿಗಾಗಿ ಮಾನ್ಯ ಜಿಲ್ಲಾಧಿಕಾರಿಗಳಿಂದ ಇಂಡಿಯನ್ ರೆಡ್ ಕ್ರಾಸ್ ನ ಸನ್ಮಾನ ಸ್ವೀಕರಿಸಿದ ಎಸ್ಸೆಸ್ಸೆಫ್ ಈಸ್ಟ್ ಝೋನ್ ಬ್ಲಡ್ ಸೈಬೋ ಉಸ್ತುವಾರಿ ಸಿದ್ದೀಖ್ ಗೂನಡ್ಕ ರವರನ್ನು ಶಾಲು ಹೊದಿಸಿ ಸನ್ಮಾನ ನೀಡಿ ಗೌರವಿಸಲಾಯಿತು. ನಂತರ ಡಿವಿಷನ್ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ಮೂವತ್ತರಷ್ಟು ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರಶಸ್ತಿ ಪತ್ರದೊಂದಿಗೆ ನಗದು ನೀಡಿ ಸನ್ಮಾನಿಸಲಾಯಿತು.
ಡಿವಿಷನ್ ಪ್ರಧಾನ ಕಾರ್ಯದರ್ಶಿ ಸಿರಾಜ್ ಹಿಮಮಿ ಕುಂಭಕೋಡು ಸ್ವಾಗತಿಸಿ ಜೊತೆ ಕಾರ್ಯದರ್ಶಿ ಸಫ್ವಾನ್ ಸುಣ್ಣಮೂಲೆ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.