Breaking News

ಸಾಂಸ್ಥಿಕ ಕ್ವಾರಂಟೈನ್ ರದ್ದುಗೊಳಿಸಿದ ರಾಜ್ಯ ಸರಕಾರ | ಹೊರ ರಾಜ್ಯ, ವಿದೇಶದಿಂದ ಬರುವವರಿಗೆ 14 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯ

Advt_Headding_Middle
Advt_Headding_Middle

ರಾಜ್ಯ ಸರ್ಕಾರ ಕ್ವಾರಂಟೈನ್ ನಿಯಮಗಳನ್ನು ಮತ್ತಷ್ಟು ಸಡಿಲಿಸಿದ್ದು, ಹೊರ ರಾಜ್ಯ ಅಥವಾ ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಿ, ಸಾಂಸ್ಥಿಕ ಕ್ವಾರಂಟೈನ್ ರದ್ದುಗೊಳಿಸಿದೆ.


ಈ ಮುಂಚೆ ಹೊರ ರಾಜ್ಯ ಹಾಗೂ ವಿದೇಶದಿಂದ ಬರುವವರಿಗೆ ಒಂದು ಸರ್ಕಾರಿ ಅಥವಾ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿತ್ತು. ಇದೀಗ ಅದನ್ನು ರದ್ದುಗೊಳಿಸಿದ್ದು, ಮನೆಯಲ್ಲೇ 14 ದಿನ ಕ್ವಾರಂಟೈನ್‌ಗೆ ಒಳಗಾದರೆ ಸಾಕು ಎಂದು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ಹಿಂದೆ ಹೊರ ರಾಜ್ಯ ಅಥವಾ ವಿದೇಶದಿಂದ ಆಗಮಿಸುವವರು ಕಡ್ಡಾಯವಾಗಿ ೦೭ ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ ೦೭ ದಿನ ಹೋಮ್ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಸರಕಾರ ನಿಯಮ ರೂಪಿಸಿತ್ತು. ಅಲ್ಲದೆ, ಕ್ವಾರಂಟೈನ್‌ಗೆ ಒಳಗಾಗುವವರೇ ಅದರ ಹಣವನ್ನು ಪಾವತಿ ಮಾಡಬೇಕು ಎಂದು ಸೂಚಿಸಲಾಗಿತ್ತು. ಈ ನಿಯಮದಿಂದಾಗಿ ಅನೇಕರಿಗೆ ಆರ್ಥಿಕವಾಗಿ ಸಾಕಷ್ಟು ತೊಂದರೆಯೂ ಉಂಟಾಗಿತ್ತು. ರೈಲು, ವಿಮಾನದ ಮೂಲಕ ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವವರು ಹೊಸ ಕ್ವಾರಂಟೈನ್ ನಿಯಮಗಳನ್ನು ತಿಳಿದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.