Breaking News

ಅಡ್ತಲೆ: ಶವ ಸಂಸ್ಕಾರ ಮತ್ತು ವೈಕುಂಠ ಸಮಾರಾಧನೆಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಸ್ಪಂದನ ಗೆಳೆಯರ ಬಳಗ

Advt_Headding_Middle

 

 

 

ಜೂ. ೧೫ರಂದು ಅಡ್ತಲೆಯಲ್ಲಿ ವಾಸವಾಗಿರುವ ಗುಬ್ಬಿ ಎಂಬವರ ಪುತ್ರಿ ಶ್ರೀಮತಿ ಲೀಲಾವತಿ ನಿಧನರಾದ ಸಂದರ್ಭದಲ್ಲಿ ಅಗತ್ಯ ಸಹಕಾರಗಳೊಂದಿಗೆ ಯುವಕರ ತಂಡ ಮಾನವೀಯತೆ ಮೆರೆದಿದೆ.
ಅವರ ಅಂತ್ಯ ಸಂಸ್ಕಾರ ಮಾಡಲು ಕಟ್ಟಿಗೆ ಮಾಡಲು ಕೊರೊನಾ ಸಮಸ್ಯೆಯಿಂದಾಗಿ ಯಾರೂ ಮುಂದೆ ಬಾರದೇ ಇದ್ದುದರಿಂದ ಅಡ್ತಲೆಯ ಸ್ಪಂದನ ಗೆಳೆಯರ ಬಳಗಕ್ಕೆ ಮನವಿ ಮಾಡಿದ ಮೇರೆಗೆ ಯುವಕರ ತಂಡ ತುರ್ತಾಗಿ ಸ್ಪಂದಿಸಿ ಕಟ್ಟಿಗೆ ಮಾಡಿ ಕೊಟ್ಟು ಸಹಕರಿಸಿದರು. ಇದರೊಂದಿಗೆ ಅವರ ಉತ್ತರ ಕ್ರಿಯೆಯ ಬಗ್ಗೆ ಧನ ಸಹಾಯ ನೀಡುವ ಬಗ್ಗೆ ನಿರ್ಧರಿಸಿ ಗೆಳೆಯರ ಬಳಗ ಸದಸ್ಯರು ಧನ ಸಂಗ್ರಹಿಸಿ ರೂ. ೭ ಸಾವಿರ ಆರ್ಥಿಕ ನೆರವು ನೀಡಿದರು.
ಗೆಳೆಯರ ಬಳಗದ ಅಧ್ಯಕ್ಷರಾದ ವಿನಯ್ ಬೆದ್ರುಪಣೆ, ಕಾರ್ಯದರ್ಶಿ ಸಂತೋಷ್ ಪಿಂಡಿಮನೆ, ಗೌರವ ಸಲಹೆಗಾರರಾದ ಭವಾನಿ ಶಂಕರ ಅಡ್ತಲೆ, ಕೇಶವ ಅಡ್ತಲೆ, ಸದಾನಂದ ಅಡ್ತಲೆ, ಶಶಿಕುಮಾರ್ ಉಳುವಾರು ಮತ್ತು ಶಿವರಾಮ ಕಲ್ಲುಗದ್ದೆ, ಸದಸ್ಯರಾದ ಪ್ರವೀಣ್ ಪಾನತ್ತಿಲ, ದಯಾನಂದ ಬಳ್ಕಾಡಿ, ಗಿರೀಶ್ ಅಡ್ಕ, ಚೇತನ್ ಮೇಲಡ್ತಲೆ, ಯಶವಂತ ಚೀಮಾಡು, ಜಗದೀಶ್ ಬೆಳ್ಳಿಪ್ಪಾಡಿ, ಅಶೋಕ್ ಬೆದ್ರುಪಣೆ ಮತ್ತು ಊರವರಾದ ಗಿರಿಪ್ರಕಾಶ್ ಕಲ್ಲುಗದ್ದೆ, ವಿನಯಚಂದ್ರ ಅಡ್ತಲೆ ಮತ್ತಿತರರು ಸಹಕಾರ ನೀಡಿದರು.
ಗುಬ್ಬಿಯವರ ಪುತ್ರ ಪೊನ್ನಪ್ಪರಿಗೆ ಸಂಗ್ರಹಿಸಿದ ಧನವನ್ನು ಹಸ್ತಾಂತರಿಸಿದರು. ಸ್ಪಂದನ ಗೆಳೆಯರ ಬಳಗ ಇದೇ ರೀತಿಯ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನರ ಜನರ ವಿಶ್ವಾಸ ಗಳಿಸಿಕೊಂಡಿದೆ.
ಲೀಲಾವತಿಯವರನ್ನು ಕೊಕ್ಕಡ ಸಮೀಪದ ಕಾಯರ್ತಡ್ಕ ಎಂಬಲ್ಲಿ ಮದುವೆ ಮಾಡಿಕೊಟ್ಟಿದ್ದು,
ಇವರ ಗಂಡ ಶ್ರೀನಿವಾಸರವರು ಮೃತಪಟ್ಟ ಬಳಿಕ ತವರು ಮನೆ ಅಡ್ತಲೆಯಲ್ಲಿಯೇ ವಾಸವಾಗಿದ್ದರು. ಮೃತರಿಗೆ ೪೩ ವರ್ಷ ವಯಸ್ಸಾಗಿತ್ತು.

ಕಳೆದ ವರ್ಷ ಆ.೨೫ರಂದು ಪದಗ್ರಹಣಗೊಂಡು ರೂಪುಗೊಂಡ ಸ್ಪಂದನ ಗೆಳೆಯರ ಬಳಗವು ಹಲವು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾ ಬಂದಿದೆ. ಅವುಗಳಲ್ಲಿ ಮುಖ್ಯವಾಗಿ
* ಸಾರ್ವಜನಿಕ ರಸ್ತೆಗೆ ಬಿದ್ದ ಮರಗಳ ತೆರವು
* ಪಿಂಡಿಮನೆಯ ಮನೆಗೆ ಆಕಸ್ಮಿಕ ಬೆಂಕಿ ಅವಘಡವಾದಾಗ ಮತ್ತು ನಂತರ ಶ್ರಮದಾನ
* ರಸ್ತೆ ತಿರುವಿನಲ್ಲಿ ಸಂಚಾರಕ್ಕೆ ಕಷ್ಟದ ಮತ್ತು ಅಪಘಾತಕ್ಕೆ ಕಾರಣವಾದ ಬೃಹತ್ ಮರದ ತೆರವು
* ದೇವಸ್ಥಾನ ಮತ್ತು ಭಜನಾಮಂದಿರಗಳಲ್ಲಿ ಶ್ರಮದಾನ
* ಕಾಡ್ಗಿಚ್ಚು ಹಬ್ಬಿದಾಗ ಬೆಂಕಿ ನಂದಿಸುವಲ್ಲಿ ತಕ್ಷಣ ಸ್ಪಂದಿಸಿ ಅರಣ್ಯ ಇಲಾಖೆಯೊಂದಿಗೆ ಕಾರ್ಯಾಚರಣೆ.
* ಬಡ ವ್ಯಕ್ತಿ ಸಾವನ್ನಪ್ಪಿದಾಗ ಯಾರೂ ಇಲ್ಲದ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ಕಟ್ಟಿಗೆ ಮಾಡಿಕೊಟ್ಟು ಸಹಕಾರ ಮತ್ತು ಉತ್ತರಕ್ರೀಯೆಗೆ ಧನಸಹಾಯ.
* ಚೆಂಬುವಿನಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌಡ ಸಂಸ್ಕೃತಿಯ ಪ್ರಾತ್ಯಕ್ಷಿತೆ
* ಅಡ್ತಲೆ ಶಾಲೆಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕೊಡುಗೆ ಮತ್ತು ನಾಗರಿಕರಿಗೆ ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ.
* ಕೋವಿಡ್ ೧೯ ಲಾಕ್ ಡೌನ್ ಸಂದರ್ಭದಲ್ಲಿ ದಿನಾಂಕ ೦೬-೦೪-೨೦೨೦ ಮೇ ಸೋಮವಾರ ಬೆಳಿಗ್ಗೆ ೮ ಗಂಟೆಯಿಂದ ನಮ್ಮ ಗ್ರಾಮದ ಅಡ್ತಲೆ ವಾರ್ಡಿನ ಅಡ್ತಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಿರ್ಲಾಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಕಾರ ಸಂಘದ ವತಿಯಿಂದ ಸರಕಾರದಿಂದ ಕೊಡಲ್ಪಟ್ಟ ಪಡಿತರವನ್ನು ವಿತರಣೆ ಮಾಡುವಲ್ಲಿ ಪೂರ್ಣ ಸಹಕಾರ.
* ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಿ, ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.