ಸುಳ್ಯ ರೋಟರಿಯಿಂದ ಒಂದು ಲಕ್ಷ ಗಿಡ ನೆಡುವ ಯೋಜನೆ – ರೊ.ಡಾ.ಗುರುರಾಜ್ ವೈಲಾಯ

Advt_Headding_Middle
Advt_Headding_Middle

 

ವನಮಹೋತ್ಸವವು ಜನರಲ್ಲಿ ಮರಗಳ ಬಗ್ಗೆ ಅರಿವನ್ನು ಹೆಚ್ಚಿಸಲು ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ಹಾಗೂ ಮಾಲಿನ್ಯವನ್ನು ಕಡಿಮೆಮಾಡುವ ಅತ್ಯುತ್ತಮ ದಾರಿಗಳ ಪೈಕಿ ಒಂದಾಗಿದ್ದು, ಈ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಲು ಸ್ವರ್ಣಮಹೋತ್ಸವವನ್ನು ಆಚರಿಸುತ್ತಿರುವ ಸುಳ್ಯ ರೋಟರಿ ಪ್ರಸ್ತುತ ವರ್ಷ ಒಂದು ಲಕ್ಷ ಸಸಿಗಳನ್ನು ನೆಡುವ ಮತ್ತು ಅದರ ಆರೈಕೆಯ ಮೇಲೆ ವಿಶೇಷ ನಿಗವಹಿಸಿ ಅದರ ಆರೈಕೆಯ ಜವಾಬ್ದಾರಿಯೊಂದಿಗೆ ಸುಳ್ಯ ರೋಟರಿ ಹೆಜ್ಜೆಇಟ್ಟಿದೆ, ಎಂದು ಸುಳ್ಯ ರೋಟರಿಯ ಗೂಗಲ್ ಮೀಟ್ ಮೂಲಕ ನಡೆದ ವನಮಹೋತ್ಸವ ಕಾರ್ಯಕ್ರಮ ಮತ್ತು ವಾರದ ಸಭೆಯಲ್ಲಿ ಅಧ್ಯಕ್ಷ ರೊ. ಡಾ.ಗುರುರಾಜ್ ತಿಳಿಸಿದರು.
ವನಮಹೋತ್ಸವ ದ ಅಗತ್ಯತೆಗಳ ಬಗ್ಗೆ ಹಾಗೂ ಉಪಯೋಗದ ಬಗ್ಗೆ ರೊ.ಡಾ.ಪುರುಷೋತ್ತಮ ಮಾತನಾಡಿದರು.

ಪ್ರಸ್ತುತ ವರ್ಷ ಸಂಸ್ಥೆ ಒಂದು ಲಕ್ಷ ಗಿಡನೆಡುವ ಯೋಜನೆ ಹಾಗೂ ಇದರ ಮೇಲ್ನೋಟದ ವಿವರ ಪಡೆಯುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಝೋನಲ್ ಲೆಫ್ಟಿನೆಂಟ್ ರೊ.ಜಿತ್ಹೇಂದ್ರ ಯೋಜನೆಗೆ ಶುಭಹಾರೈಸಿದರು. ಕೊವಿಡ್ ಹಿನ್ನಲೆಯಲ್ಲಿ ಆನ್‌ಲೈನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರು ಭಾಗವಹಿಸಿ ಶುಭಹಾರೈಸಿದರು. ಕಾರ್ಯದರ್ಶಿ ರೊ. ಲತಮಧುಸೂಧನ್ ಸರ್ವರನ್ನು ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.