ಬಂಗಾರುಪೇಟೆ ತಹಶೀಲ್ದಾರ್ ಹತ್ಯೆ: ಸುಳ್ಯ ಸರಕಾರಿ ಸ.ನೌಕರರಿಂದ ಪ್ರತಿಭಟನೆ ಮನಸ್ಥೈರ್ಯ ಕಳೆದುಕೊಳ್ಳದಿರೋಣ : ನೌಕರರಿಗೆ ಧೈರ್ಯ ನೀಡಿದ ಅಧಿಕಾರಿಗಳು

Advt_Headding_Middle
Advt_Headding_Middle
Advt_Headding_Middle

ಬಂಗಾರುಪೇಟೆ ತಾಲೂಕು ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರರ ಹತ್ಯೆಯನ್ನು ಖಂಡಿಸಿ ರಾಜ್ಯಾದ್ಯಂತ ಸರಕಾರಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗಿದ್ದು, ಸುಳ್ಯ ತಾಲೂಕು ಸಂಘದ ವತಿಯಿಂದ ಸುಳ್ಯ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಸುಳ್ಯ ತಹಶೀಲ್ದಾರ್ ಅನಂತ ಶಂಕರ್ “ಕರ್ತವ್ಯದಲ್ಲಿರುವ ಸಂದರ್ಭ ಈ ರೀತಿಯ ಹತ್ಯೆ ಖಂಡನೀಯ. ಇದು ಮರುಕಳಿಸಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು” ಎಂದು ಹೇಳಿದರು.

ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಮಾತನಾಡಿ “ನಾವು ಪ್ರತಿದಿನ ಒತ್ತಡದಲ್ಲೇ ಕರ್ತವ್ಯದಲ್ಲಿರುವವರು.

ಈಗ ಕೋವಿಡ್ ಕಾಲ ಆಗಿದ್ದು ಅದರ ನಿರ್ವಹಣೆಯ ಜತೆಗೆ ಕಚೇರಿ ಕೆಲಸವನ್ನು ಮಾಡಬೇಕಾಗಿದೆ. ಹತ್ಯೆಯಂತಹ ಘಟನೆಗಳು ನಡೆದರೆ ನಾವ್ಯಾರು ಮನಸ್ಥೈರ್ಯ ಕಳೆದುಕೊಳ್ಳದೆ ನಮ್ಮ ಕರ್ತವ್ಯ ಪ್ರಮಾಣಿಕವಾಗಿ ನಡೆಯಬೇಕು. ಜತೆಗೆ ಕರ್ತವ್ಯಕ್ಕೆ ಅಡ್ಡಿ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಒತ್ತಾಯ ಮಾಡುತ್ತಿzವೆ” ಎಂದು ಹೇಳಿದರು.


ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆಯವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನಾ ಸಭೆಯಲ್ಲಿ ಸರಕಾರಕ್ಕೆ ಸಲ್ಲಿಸುವ ಮನವಿಯನ್ನು ಅವರು ದಿ, ಬಳಿಕ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯ ಪರಿಷತ್ ಸದಸ್ಯ ಪೃಥ್ವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಕುದ್ಪಾಜೆ ವಂದಿಸಿದರು.
ಈ ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿ ಸಿದ್ದಪ್ಪ ನಿಂಗದಾಳ, ಪದಾಧಿಕಾರಿಗಳಾದ ಸಿಂಗಾರ ಶೆಟ್ಟಿ, ಚಂದ್ರಕಾಂತ್ ಎಂ.ಆರ್., ಮೋಹನ್ ನಂಗಾರು, ಭವಾನಿ ಟೀಚರ್, ವಿಜಯ ವಾರ್ಡನ್, ಸನತ್ ಗೂನಡ್ಕ, ಗಿರೀಶ್ , ರವೀಚಂದ್ರ ತೋಟಪ್ಪಾಡಿ, ಅಖಿಲ, ತಿಪ್ಪೇಶಪ್ಪ, ಶೇಖರ್ ಯು.ಡಿ., ರಾಜೀವ್ ಮರ್ಕಂಜ, ದೇವರಾಜ್ ಪೋಲೀಸ್, ಜಯಪ್ರಕಾಶ್ ಪಿ.ಡಿ.ಒ., ನೇಮಿರಾಜ್ ಜಿ.ಪಂ. ಸುಳ್ಯ, ನಟರಾಜ ಮಾಸ್ಟರ್ ಮೊದಲಾದವರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.