ನ್ಯಾಚುವಿಕ್ ಬಾತ್ ಸೋಪ್ ಮಾರುಕಟ್ಟೆಗೆ ಬಿಡುಗಡೆ

Advt_Headding_Middle
Advt_Headding_Middle

 

ಸುಳ್ಯ ಅಟಲ್‌ನಗರ ನಿವಾಸಿ ದೀಕ್ಷಿತ್ ಡಿ.ಪಿ ಮಾಲಕತ್ವದಲ್ಲಿ ನೂತನವಾಗಿ ಉತ್ವಾದಿಸಲ್ಪಟ್ಟ ನ್ಯಾಚುವಿಕ್ ಬಾತ್‌ಸೋಪ್ ಜು.೧೦ರಂದು ಮಾರುಕಟ್ಟೆಗೆ ಬಿಡುಗಡೆಗೊಂಡಿತು.
ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅರ್ಚಕರಾದ ನೀಲಕಂಠ ಭಟ್ ರವರು ದೇವರಿಗೆ ಪೂಜೆ ನೆರವೇರಿಸಿ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನಾರಾಯಣ ಕೇಕಡ್ಕ, ಸೋಮನಾಥ ಪೂಜಾರಿ, ಭರತ್ ಪಿಂಡಿಮನೆ, ಕೃಷ್ಣ ಬೆಟ್ಟರವರ ಉಪಸ್ಥಿತಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಮಾಲಕರಾದ ದೀಕ್ಷಿತ್ ಡಿ.ಪಿ, ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ದಾಮೋದರ.ಪಿ, ತಿಮ್ಮಪ್ಪ.ಪಿ, ದೇವಿಪ್ರಸಾದ್, ನವೀನ್ ಕುದ್ಪಾಜೆ ಉಪಸ್ಥಿತರಿದ್ದರು. ಪ್ರಥಮ ಗ್ರಾಹಕರಾಗಿ ಸುಳ್ಯದ ಶ್ರೀ ಸಿದ್ಧಿವಿನಾಯಕ ಸ್ಟೋರ್‌ನಲ್ಲಿ ವೆಹಿಕಲ್ ಇಂಡಿಯಾದ ಮಾಲಕರಾದ ರಮಾನಂದ ಕಾನತ್ತಿಲರವರಿಗೆ ನ್ಯಾಚುವಿಕ್ ಸೋಪನ್ನು ನೀಡಲಾಯಿತು. ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸದೆ ಕೇವಲ ಗಿಡ ಮೂಲಿಕೆಗಳನ್ನು ಬಳಸಿ, ಹ್ಯಾಂಡ್‌ಮೇಡ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಡಿಪಾರ್ಟ್‌ಮೆಂಟಲ್ ಸ್ಟೋರ್ ಹಾಗೂ ಮೆಡಿಕಲ್‌ಗಳಲ್ಲಿ ಲಭ್ಯವಾಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.