ಲಾಕ್ ಡೌನ್ : ಸ್ವಯಂ ಪ್ರೇರಿತವಾಗಿರಲಿ ; ಒತ್ತಡ ಹಾಕುವುದು ಬೇಡ : ಶಾಸಕ ಅಂಗಾರ

Advt_Headding_Middle
Advt_Headding_Middle

ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವುದರಿಂದ ತಾಲೂಕಿನಲ್ಲಿ ಲಾಕ್ ಡೌನ್ ನ ಅಗತ್ಯೆತ ಕುರಿತು ಇಂದು ತಾ.ಪಂ.ನಲ್ಲಿ ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರು ಅಧಿಕಾರಿಗಳಿಂದ ಸಲಹೆ‌ ಪಡೆದರು.

ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ಹಾಗೂ ಎಸ್.ಐ.‌ಹರೀಶ್ ಎಂ.ಆರ್. ಲಾಕ್ ಡೌನ್ ಆದರೆ ವರ್ತಕರಿಂದ ಬರಬಹುದಾದ ಅಭಿಪ್ರಾಯ ಗಳನ್ನು ಆಧರಿಸಿ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗುತ್ತಿಗಾರು, ಸಂಪಾಜೆಯಲ್ಲಿ ಲಾಕ್ ಡೌನ್ ನಡೆಸುವ ಮತ್ತು ಸುಳ್ಯ ವರ್ತಕರ ಸಂಘದ ಸಭೆ ನಡೆದು ಲಾಕ್ ಡೌನ್ ಕುರಿತು ಬಂದಿರುವ ಅಭಿಪ್ರಾಯ ತಾ.ಪಂ. ಇ.ಒ.ಭವಾನಿಶಂಕರ್ ತಿಳಿಸಿದರು.

ಬಳಿಕ ಮಾತನಾಡಿದ ಶಾಸಕರು ನನಗೆ ಮೊನ್ನೆ ನೆಲ್ಯಾಡಿಯ ವರ್ತಕರು ಫೋನ್ ಮಾಡಿ ಸ್ವಯಂ ಲಾಕ್ ಡೌನ್ ಕುರಿತು ಹೇಳಿದಾಗ ನಾನು ಸ್ವಯಂ ಆಗಿ ಮಾಡುವುದಿದ್ದರೆ ಮಾಡೋಣ ಎಂದು ಹೇಳಿದ್ದೆ. ಆದ್ದರಿಂದ ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸೋಣ. ಜತೆಗೆ ಲಾಕ್ ಡೌನ್ ವರ್ತಕರು ಮಾಡುವುದಿದ್ದರೆ ಮಾಡಲಿ. ಆದರೆ ಯಾರೂ ಒತ್ತಾಯ ಮಾಡುವುದು ಬೇಡ ಎಂದು ಹೇಳಿದರು.


ಕೊರೊನಾ ಜಾಗೃತಿ ಹೆಚ್ಚಾಗಬೇಕು. ಮಾಸ್ಕ್ ಹಾಕದಿರುವವರಿಗೆ ಕಡ್ಡಾಯ ಫೈನ್ ಹಾಕಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.