ಆಲೆಟ್ಟಿ -ಕೂಟೇಲು- ಕುಕ್ಕುಂಬಳ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸಲು ಒತ್ತಾಯ

Advt_Headding_Middle
Advt_Headding_Middle

 

ಗ್ರಾಮ ಸಡಕ್ ಯೋಜನೆಯಡಿಯಲ್ಲಿ
ಪ್ರಥಮ ಆದ್ಯತೆ ನೀಡುವಂತೆ ನಾಗರಿಕರ ಆಗ್ರಹ

ರಸ್ತೆ ಅಗಲೀಕರಣಕ್ಕೆ ಜಮೀನು ಬಿಟ್ಟು ಕೊಡಲು ಫಲಾನುಭವಿಗಳ ನಿರ್ಧಾರ

ಆಲೆಟ್ಟಿಗೆ ಸಂಪರ್ಕ ಕಲ್ಪಿಸುವ
ಕುಕ್ಕುಂಬಳ -ಅಂಜಿಕಾರು -ಪಾಲಡ್ಕ -ಮಜಿಗುಂಡಿ -ಅರಂಬೂರು – ನೆಡ್ಚಿಲು -ಕೂಟೇಲು ಭಾಗದ ರಸ್ತೆ ಯನ್ನು ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಪ್ರಥಮ ಆದ್ಯತೆಯಲ್ಲಿ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಈ ಭಾಗದ ಫಲಾನುಭವಿಗಳು ಜು.9 ರಂದು ಅರಂಬೂರು ಭಜನಾ ಮಂದಿರದ ಸಭಾಂಗಣದಲ್ಲಿ ಸಭೆ ನಡೆಸಿದರು. ಈ ರಸ್ತೆ ಕುಕ್ಕುಂಬಳ ದಿಂದ ಅಲೆಟ್ಟಿಗೆ ಸುಮಾರು 9 ಕಿ ಮೀ ಉದ್ದವಿರುವ ರಸ್ತೆ ಆಗಿದ್ದು ಕಳೆದ 30 ವರ್ಷಗಳಿಂದ ಸ್ಥಳೀಯರು ಸೇರಿ ದುರಸ್ತಿ ಪಡಿಸಿರುವುದಲ್ಲದೆ ಯಾವುದೇ ಅನುದಾನ ದೊರಕಿರುವುದಿಲ್ಲ.ಈ ಪರಿಸರದಲ್ಲಿ 1500 ಕ್ಕಿಂತ ಹೆಚ್ಚು ಮಂದಿ ವಾಸಿಸುತ್ತಿದ್ದು 250 ಕ್ಕಿಂತ ಹೆಚ್ಚು ಮನೆಗಳಿವೆ .ಇದರಲ್ಲಿ 100 ಕ್ಕಿಂತ ಹೆಚ್ಚು ಪರಿಶಿಷ್ಟ ಪಂಗಡದವರ ಮನೆಗಳಿವೆ .ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 2015 ರಲ್ಲಿ ಮನವಿ ನೀಡಲಾಗಿತ್ತು .ಆ ಸಂದರ್ಭದಲ್ಲಿ ಲೊಕಸಭಾ ಸದಸ್ಯ ನಳಿನಕುಮಾರ್ ಕಟೀಲ್ ರವರು ಹಾಗೂ ಶಾಸಕ ಎಸ್. ಅಂಗಾರ ರವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.


ರಸ್ತೆ ಹಾದು ಹೊಗುವ ಕುಕ್ಕುಂಬಳ -ಅಂಜಿಕ್ಕಾರ್ -ಪಾಲಡ್ಕ -ಮಜಿಗುಂಡಿ -ಅರಂಬೂರು -ನೆಡ್ಚಿಲು -ಕೂಟೇಲು ಪ್ರದೇಶದ ರಸ್ತೆಯ ಫಲಾನುಭವಿಗಳು ರಸ್ತೆ ಅಗಲೀಕರಣದ ಸಂದರ್ಭದಲ್ಲಿ ತಮ್ಮ ವರ್ಗ ಜಾಗ ಬಿಟ್ಟು ಕೊಡಲು ಅಫಿದಾವಿತ್ ಮೂಲಕ ಒಪ್ಪಿಗೆ ಪತ್ರ ನೀಡಲು ಸಿದ್ಧರಿರುವುದಾಗಿ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು
ಶ್ರೀಪತಿ ಭಟ್ ಮಜಿಗುಂಡಿ ವಹಿಸಿದ್ದರು.ಈ ಸಂದರ್ಭದಲ್ಲಿ ಬಾಲಕೃಷ್ಣ ಅಳ್ವ ಅರಂಬೂರು, ತೀರ್ಥರಾಮ ನೆಡ್ಚಿಲು, ಎನ್. ಎ. ಜಯರಾಮ ನೆಡ್ಚಿಲು ,ಸೂರ್ಯನಾರಾಯಣ ನಾಯಕ್ ಅಂಜಿಕಾರು ,ಶಿವಶಂಕರ ಪಾಲಡ್ಕ , ನಾರಾಯಣ ನಾಯ್ಕ ಅರಂಬೂರು ,ಹುಕ್ರಪ್ಪ ಗೌಡ ನೆಡ್ಚಿಲು, ಕೊರಗಪ್ಪ ಮಾಸ್ತೆರ್ ಕಣಕ್ಕೂರು ನೆಡ್ಚಿಲು, ದಿವಾಕರ ಪೈ ಮಜಿಗುಂಡಿ, ಗೊಪಾಲಕೃಷ್ಣ ಕೂಟೇಲು, ಪುಷ್ಪರಾಜ ಮಜಿಗುಂಡಿ ,ಮಹೇಶ್ ಪಡ್ಪು ,ಕೃಷ್ಣ ಪ್ರಸಾದ್ ಬಡಿಕಾನ ,ಉದಯನಾರಾಯಣ ಭಟ್ ಮಜಿಗುಂಡಿ ,ಜಗದೀಶ್ ಸರಳಿಕುಂಜ, ಕೃಷ್ಣ ನಾಯಕ್ ಅರಂಬೂರು ,ಗಂಗಾಧರ್ ನೆಡ್ಚಿಲು ,ಯೋಗೀಶ ಅರಂಬೂರು ,ಈಶ್ವರ ಮೂಲ್ಯ ಮಜಿಗುಂಡಿ,ಉಮೇಶ ನಾಯ್ಕ್ ಕೂಟೇಲು,ರಾಜೇಶ್ ಅರಂಬೂರು ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.