ಇಬ್ರಾಹಿಂ ಖಲೀಲ್ ಕಟ್ಟೆಕ್ಕಾರ್ ಪ್ರಕರಣ: ಮಹಿಳಾ ಆಯೋಗದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ನಿಂದ ತಡೆ

Advt_Headding_Middle
Advt_Headding_Middle
Advt_Headding_Middle

 

ಸುಳ್ಯದ ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್‌ರನ್ನು ತಾನು ಮದುವೆಯಾಗಿರುವುದಾಗಿ ಹೇಳಿ ಮಹಿಳಾ ಆಯೋಗದ ಆದೇಶದೊಂದಿಗೆ ಖಲೀಲ್‌ರ ಮನೆಗೆ ಬಂದು ಕುಳಿತಿದ್ದ ಮಹಿಳೆಯ ಪ್ರಕರಣಕ್ಕೆ ತಿರುವು ದೊರೆತಿದ್ದು, ಮಹಿಳಾ ಆಯೋಗದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ತನ್ನ ಗಂಡನ ಮನೆಗೆ ತನ್ನನ್ನು ಸೇರಿಸಬೇಕೆಂದು ಬೆಂಗಳೂರಿನ ಆಸಿಯಾ ಎಂಬ ಮಹಿಳೆ ಮಹಿಳಾ ಆಯೋಗಕ್ಕೆ ವಿನಂತಿ ಮಾಡಿಕೊಂಡ ಮೇರೆಗೆ ‘ಆಕೆಯ ಗಂಡನ ಮನೆಯಾದ ಇಬ್ರಾಹಿಂ ಖಲೀಲ್ ಕಟ್ಟೆಕ್ಕಾರ್‌ರವರ ಮನೆಗೆ ಈಕೆಯನ್ನು ಬಿಟ್ಟು ವರದಿ ಕಳುಹಿಸಲು ಕರ್ನಾಟಕ ಮಹಿಳಾ ಆಯೋಗವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಆದೇಶ ಮಾಡಿತ್ತು. ಅದರಂತೆ ಸಿಡಿಪಿಒ ಮತ್ತು ಸುಳ್ಯ ಎಸ್‌ಐಯವರು ಆಕೆಯನ್ನು ಕಟ್ಟೆಕ್ಕಾರ್ ಮನೆಗೆ ಬಿಟ್ಟಿದ್ದರು.
ಈ ವಿಚಾರದ ಬಗ್ಗೆ ಸಂಧಾನಕಾರರ ನೇತೃತ್ವದಲ್ಲಿ ಎರಡು ಬಾರಿ ಮಾತುಕತೆ ನಡೆದಿದ್ದು, ಮುಂದಿನ ೧೫ ದಿನಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಿ ತರುವಂತೆ ಖಲೀಲ್ ಮತ್ತು ಆಸಿಯಾರವರಿಗೆ ಸೂಚಿಸಲಾಗಿತ್ತು. ಇದೀಗ ಖಲೀಲ್ ಮತ್ತು ಮನೆಯವರು ಹೈಕೋರ್ಟಿಗೆ ದೂರು ನೀಡಿ ಮಹಿಳಾ ಆಯೋಗದ ನೋಟೀಸಿಗೆ ತಡೆಯಾಜ್ಞೆ ಕೋರಿದ್ದು, ಆಸಿಯರವರು ಖಲೀಲ್‌ರವರೊಂದಿಗೆ ಮದುವೆಯಾದ ಯಾವುದೇ ದಾಖಲೆಗಳು ಇಲ್ಲ, ಹಾಗೂ ಮಹಿಳಾ ಆಯೋಗ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದೆ ಎಂದು ವಾದಿಸಿದ್ದರು. ಪರಿಣಾಮವಾಗಿ ನ್ಯಾಯಾಧೀಶರಾದ ಕೃಷ್ಣ ದೀಕ್ಷಿತ್‌ರವರ ಏಕಸದಸ್ಯ ಪೀಠ ಈ ತಡೆಯಾಜ್ಞೆ ನೀಡಿದೆ ಎಂದು ತಿಳಿದುಬಂದಿದೆ. ಹೈಕೋರ್ಟ್ ನ್ಯಾಯವಾದಿ ಸುಳ್ಯದ ಡಿ. ಕೃಷ್ಣಮೂರ್ತಿಯವರು ಹೈಕೋರ್ಟಿನಲ್ಲಿ ಖಲೀಲ್‌ರವರ ಪರವಾಗಿ ವಾದಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.