ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ದೇಲಂಪಾಡಿ ಬ್ರಹ್ಮಶ್ರೀ ಬಾಲಕೃಷ್ಣ ತಂತ್ರಿಗಳಿಗೆ ಶ್ರದ್ಧಾಂಜಲಿ‌ ಸಭೆ

Advt_Headding_Middle
Advt_Headding_Middle

ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ತಂತ್ರಿಗಳಾಗಿ ಸುದೀರ್ಘವಾಗಿ ಸೇವೆ ಸಲ್ಲಿಸುತ್ತಿದ್ದ ದೇಲಂಪಾಡಿ ಬ್ರಹ್ಮಶ್ರೀ ಬಾಲಕೃಷ್ಣ ತಂತ್ರಿಗಳು ಜು. 7 ರಂದು ವಿಧಿವಶರಾಗಿದ್ದು ಅವರಿಗೆ ದೇವಸ್ಥಾನದಲ್ಲಿ ಶ್ರದ್ಧಾಂಜಲಿ ಸಭೆಯು‌ ಜು.11 ರಂದು ನಡೆಯಿತು.

ADVERTISEMENT

 

ADVERTISEMENT

 

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕರವರು ಸ್ವಾಗತಿಸಿ ಬಾಲಕೃಷ್ಣ ತಂತ್ರಿಗಳು ಚೆನ್ನಕೇಶವ ದೇವಸ್ಥಾನದಲ್ಲಿ ತಂತ್ರಿಗಳಾಗಿ ತಾಂತ್ರಿಕ ಕಾರ್ಯಗಳನ್ನು,ಜಾತ್ರೆ,ಉತ್ಸವಾದಿಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದರು.ಕೇರಳದ ಕುಂಬ್ಳೆ ಸೀಮೆಯಲ್ಲಿ ಅವರು ಪ್ರಸಿದ್ದರಾಗಿದ್ದರು ಎಂದು ಹೇಳಿ ನುಡಿನಮನ ಸಲ್ಲಿಸಿದರು.

 

ADVERTISEMENT

 

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ಮಾತನಾಡಿ ಬಾಲಕೃಷ್ಣ ತಂತ್ರಿಗಳು ದೇವಸ್ಥಾನದಲ್ಲಿ ಧಾರ್ಮಿಕ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು.

 

ADVERTISEMENT

 

ಅವರ ಅಗಲಿಕೆ ದೇವಸ್ಥಾನಕ್ಕೆ ಮತ್ತು ಹಿಂದೂಧರ್ಮಕ್ಕೆ ತುಂಬಲಾರದ ನಷ್ಟ ಎಂದು ಹೇಳಿ ಅವರ ಆದರ್ಶಗುಣಗಳನ್ನು ನೆನಪಿಸಿ ನುಡಿನಮನ ಸಲ್ಲಿಸಿದರು.

 

ADVERTISEMENT

 

ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಲಿಂಗಪ್ಪ ಗೌಡ ಕೇರ್ಪಳ,ಎನ್.ಎ.ರಾಮಚಂದ್ರ,ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಕಿಶೋರಿ ಶೇಟ್,ಕೃಪಾಶಂಕರ ತುದಿಯಡ್ಕ,ಉಮೇಶ ಪಿ.ಕೆ,ಕೆ.ವಿ.ಹೇಮನಾಥ,ರಾಧಾಕೃಷ್ಣ ರೈ ಬೂಡು,ಹೇಮಂತ್ ಕುಮಾರ್ ಗೌಡರಮನೆ ದೇವಸ್ಥಾನದ ಸಿಬ್ಬಂದಿ ವರ್ಗದವರು ಹಾಗೂ ಇತರರು ಉಪಸ್ಥಿತರಿದ್ದು ಬಾಲಕೃಷ್ಣ ತಂತ್ರಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

 

ADVERTISEMENT

 

 

ADVERTISEMENT

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.