ಬಳ್ಪ: ಅಂಧ ವ್ಯಕ್ತಿಗೆ ಸೂರು ಕಟ್ಟಿಸಿಕೊಟ್ಟ ಕಡಬ ಯುವ ಬ್ರಿಗೇಡ್

Advt_Headding_Middle
Advt_Headding_Middle
Advt_Headding_Middle

ಹುಟ್ಟಿನಿಂದಲೇ ಅಂಧತ್ವವನ್ನು ಹೊಂದಿದ್ದ ಬಳ್ಪ ಗ್ರಾಮದ ಕಣ್ಕಲ್ ನಲ್ಲಿ ವಾಸವಾಗಿರುವ ಸುಮಾರು 50 ವರ್ಷ ವಯಸ್ಸಿನ ಲಿಂಗು ಎಂಬವರು ಕಣ್ಕಲ್ ಬಳಿ ಒಂದು ಸಣ್ಣ ಗುಡಿಸಲಿನಲ್ಲಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಅವಿವಾಹಿತರಾಗಿದ್ದ ಇವರು ಅಡಿಕೆ ಸುಳಿಯುವ ಕಾಯಕ ಮಾಡುತ್ತಿದ್ದರು.

ಇವರ ಸೊಸೆ ಲಲಿತಾ ಎಂಬವರು ಕೆಲವು ವರ್ಷಗಳ ಹಿಂದೆ ಟರ್ಪಾಲಿನ ಗುಡಿಸಲೊಂದನ್ನು ನಿರ್ಮಿಸಿಕೊಟ್ಟಿದ್ದು, ಆ ಗುಡಿಸಲಿನಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದ ಇಬರಿಗೆ ಅಗತ್ಯಬಿದ್ದಾಗ ಸಹಾಯ ಮಾಡುತ್ತಿದ್ದರು.
ದಾಖಲೆಗಳ ಕೊರತೆಯಿಂದಾಗಿ ಪಡಿತರ ಚೀಟಿಯಿಂದ ವಂಚಿತರಾಗಿದ್ದ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಿಂಚಿತ್ತ ಸಹಕಾರ ಲಭಿಸಿದ್ದು ಬಿಟ್ಟರೆ ಬೇರೇನೂ ಆದಾಯದ ಮೂಲಗಳಿಲ್ಲ. ಇದನ್ನು ಮನಗಂಡ ಯುವ ಬ್ರಿಗೇಡ್ ತಂಡದ ಸದಸ್ಯರು ದಾನಿಗಳ ನೆರವಿನಿಂದ ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದು, ಯುವ ಬ್ರಿಗೇಡ್ ನೇತಾರ ಚಕ್ರವರ್ತಿ ಸೂಲಿಬೆಲೆ ಫಲಾನುಭವಿಗೆ ಮನೆ ಹಸ್ತಾಂತರ ಕಾರ್ಯಕ್ರಮ ಜು. 11 ರಂದು ನಡೆಯಿತು.
ಯುವ ಬ್ರಿಗೇಡ್ ವಿಭಾಗ ಸಂಚಾಲಕ ತಿಲಕ್ ಶಿಶಿಲ ಅವರ ಮುಂದಾಳತ್ವದಲ್ಲಿ ಸದಸ್ಯರಾದ ಸುನೀಲ್, ಹೃತಿಕ್, ಹರ್ಷ, ಮಿಥುನ್, ಕಾರ್ತಿಕ್, ಸ್ಥಳಿಯರಾದ ಸದಾನಂದ , ವಿಶ್ವನಾಥ ಮೊದಲಾದವರ ಸಹಕಾರದೊಂದಿಗೆ ದಾನಿಗಳ ನೆರವಿನಿಂದ ಲಿಂಗು ಅವರಿಗೆ ನೂತನ ನಿವಾಸ ನಮ್ಮನೆಯನ್ನು ನಿರ್ಮಾಣ ಮಾಡಲಾಗಿದೆ‌.

Advertisement

ಇವರಿಗೆ ಸುಬ್ರಹ್ಮಣ್ಯ ಯುವ ಬ್ರಿಗೇಡ್ ನ ಸೂರ್ಯನಾರಾಯಣ, ರಮೇಶ್ ಭಟ್, ಕೃಷ್ಣರಾಜ್ ಮತ್ತು ಶ್ರೀಕುಮಾರ್‌ ಸಹಕಾರ ನೀಡಿದ್ದರು. ಇದೇ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.