ಮಡಪ್ಪಾಡಿ ಹಿತರಕ್ಷಣಾ ವೇದಿಕೆ ಕಜೆ-ಮಡಪ್ಪಾಡಿ ವತಿಯಿಂದ ಶ್ರಮದಾನ

Advt_Headding_Middle
Advt_Headding_Middle
Advt_Headding_Middle

ಸಾರ್ವಜನಿಕ ಹಿತರಕ್ಷಣಾ ವೇದಿಕೆ ಕಜೆ-ಮಡಪ್ಪಾಡಿ ವತಿಯಿಂದ ಬಲ್ಕಾಜೆಯಿಂದ ಮಡಪ್ಪಾಡಿ ಸೇವಾಜೆಯವರೆಗೆ ರಸ್ತೆಯ ಇಕ್ಕೆಲಗಳಲ್ಲಿದ್ದ ಕಾಡು ಕಡಿಯುವುದು, ಮಳೆನೀರು ಬಸಿದು ಹೋಗಲು ಚರಂಡಿ ನಿರ್ಮಾಣ ಹಾಗೂ ರಸ್ತೆಗಳ ಚರಂಡಿ ಗೆ ಕಲ್ಲು ತುಂಬಿಸುವ ಶ್ರಮದಾನವು ಇಂದು ಬೆಳಿಗ್ಗೆ ಉದ್ಘಾಟನೆಗೊಂಡಿತು.

Advertisement


ಕಜೆ ಅಂಗಡಿಯ ಬಳಿ ‘ನಮ್ಮ ರಸ್ತೆ – ನಮ್ಮ ಶ್ರಮ’ ಶ್ರಮದಾನಕ್ಕೆ ಮಹಾತ್ಮ ಗಾಂಧಿ ಗ್ರಾಮ ಸೇವಾ ತಂಡ ಮಡಪ್ಪಾಡಿ ಇದರ ಸಂಚಾಲಕ ಎಂ.ಡಿ.ವಿಜಯ್ ಕುಮಾರ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಮಡಪ್ಪಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಶುಭ ಹಾರೈಸಿದರು.
ವೇದಿಕೆ ಸಂಚಾಲಕ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

Advertisement


ಶ್ರಮದಾನ ದಲ್ಲಿ ಮಡಪ್ಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ಉಪಾಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಸದಸ್ಯ ಸೋಮಶೇಖರ ಕೇವಲ, ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಯ್ಯ ಪೂಂಬಾಡಿ, ನಿತ್ಯಾನಂದ ಮುಳುಗಾಡು, ಶೇಖರ ಕೆ.ಪಿ., ರಮೇಶ್ ಕರಂಗಲಡ್ಕ, ಕೀರ್ತನ್ ಕೊಡಪಾಲ, ಯತೀಂದ್ರನಾಥ ಮತ್ತಿತರ ಸುಮಾರು 60 ಕ್ಕಿಂತಲೂ ಹೆಚ್ಚು ಫಲಾನುಭವಿಗಳು ಶ್ರಮದಾನದಲ್ಲಿ ಪಾಲ್ಗೊಂಡರು.
15ರಿಂದ 60 ವರ್ಷದೊಳಗಿನವರನ್ನು ಮಾತ್ರ ಪಾಲ್ಗೊಳ್ಳುವಂತೆ ತಿಳಿಸಲಾಗಿತ್ತು. ಎಲ್ಕರೂ ಮಾಸ್ಕ್ ಧರಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.