ಕೊಡಿಯಾಲ : ಕೋಳಿ ಅಂಕಕ್ಕೆ ಪೋಲೀಸ್ ಧಾಳಿ

Advt_Headding_Middle
Advt_Headding_Middle

ಕೊಡಿಯಾಲ ಗ್ರಾಮದ ಬೇರ್ಯ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಆಂಜನೇಯ ರೆಡ್ಡಿ ಜಿ. ವಿ, ಹಾಗೂ ಸಿಬ್ಬಂದಿಗಳಾದ ಬಾಲಕೃಷ್ಣ.ಕೆ.ಎಂ. ಪ್ರವೀಣ್ ಬಾರ್ಕಿ. ಸಂತೋಷ್ ಕುಮಾರ್ ರವರು ಜುಲೈ 12 ರಂದು ಸಂಜೆ 5 ಗಂಟೆಗೆ ಬೇರ್ಯದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಅಕ್ರಮ ಕೋಳಿ ಅಂಕ ಜೂಜಾಟದಲ್ಲಿ ನಿರತರಾಗಿದ್ದ 1)ಹುಕ್ರಪ್ಪ ಶೆಟ್ಟಿ ಕೋಡಿಮಜಲು 2)ಪಾಂಡುರಂಗ ಕೆ ಕೈಕುಡೆ. 3)ಸುಂದರ ಎಂ ಮರಿಕೈ. 4) ವಿಶ್ವಾಸ್ ಕೆ ಪಲ್ಲತ್ತಾರು 5) ಉಮೇಶ್ ಗೌಡ ಕೈಕುಡೆ 6) ಚೇತನ್ ಕೆ ಕಾಯರ್ತಡ್ಕ ಎಂಬವರನ್ನು ಹಾಗೂ ಕೋಳಿಅಂಕ ಜೂಜಾಟಕ್ಕೆ ಬಳಸಿದ ವಿವಿಧ ಬಣ್ಣ, ಗಾತ್ರದ ಹುಂಜ ಕೋಳಿ ಗಳು-13 ಇವುಗಳ ಅಂದಾಜು ಮೌಲ್ಯ ರೂ 8000/- ನಗದು ಹಣ ರೂ 9350/- ಕೋಳಿ ಕಾಲುಗಳಿಗೆ ಕಟ್ಟಿದ ಬಾಳುಗಳು. ಬಾಳು ಕಟ್ಟಲು ಉಪಯೋಗಿಸಿದ ನೂಲುಗಳುನ್ನು ಮಹಜರು ನಡೆಸಿ ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಸುತ್ತಿದ್ದುದರಿಂದ ಆರೋಪಿಗಳ ವಿರುದ್ಧ ಕಲಂ 87 KP ACT ನಂತೆ ಪ್ರಕರಣ ದಾಖಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.