ಜಾಲ್ಸೂರಿನಲ್ಲಿ ಮನಸ್ವಿ ಫೂಟ್ ವೇರ್ಸ್ ಶುಭಾರಂಭ

Advt_Headding_Middle
Advt_Headding_Middle

ಜಾಲ್ಸೂರಿನ ಆದಿಶಕ್ತಿ ಆರ್ಕೇಡ್ ನಲ್ಲಿ ಸಿಂಡಿಕೇಟ್ ಬ್ಯಾಂಕ್ ಬಳಿ ಆಲೆಟ್ಟಿ ಗ್ರಾಮದ ಕುದ್ಕುಳಿ ಮನೋಜ್ ಕುಮಾರ್ ರವರ ಮಾಲಕತ್ವದ ಮನಸ್ವಿ ಫೂಟ್ ವೇರ್ಸ್ ಜು. 13 ರಂದು ಶುಭಾರಂಭಗೊಂಡಿತು. ಬೆಳಗ್ಗೆ ಪುರೋಹಿತ ನಟರಾಜ್ ಶರ್ಮ ರವರ ನೇತೃತ್ವದಲ್ಲಿ ಗಣಪತಿ ಹವನ ನಡೆಯಿತು. ಆರ್ಕೇಡ್ ಮಾಲಕ ರಮೇಶ್ ಜಾಲ್ಸೂರು ರವರು ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

Advertisement

ಈ ಸಂದರ್ಭದಲ್ಲಿ ಹಿರಿಯರಾದ ಶ್ರೀಮತಿ ಯಮುನಾ ಕುದ್ಕುಳಿ, ಮಾಲಕರ ತಂದೆ ಕೃಷ್ಣಪ್ಪ ಪೂಜಾರಿ, ಜಾಲ್ಸೂರು ಪಂಚಾಯತ್ ಸದಸ್ಯ ಜನಾರ್ದನ ಆಚಾರ್ಯ ಜಾಲ್ಸೂರು, ಸದಾನಂದ ಜಾಲ್ಸೂರು, ಜೆ.ಮೋಹನ್ ಜಾಲ್ಸೂರು, ರಮೇಶ್ ಪಣೋಲಿಬೈಲು, ರೋಹಿನಾಥ್ ಶಂಬೂರು, ಪದ್ಮನಾಭ ಪೂಜಾರಿ ನಾರ್ಕೋಡು, ಯಜ್ಞೇಶ್ ಆಚಾರ್ಯ ಜಾಲ್ಸೂರು, ದಾಮೋದರ ಕುದ್ಕುಳಿ, ರಾಜೇಶ್ ಕುದ್ಕುಳಿ, ರವಿಚಂದ್ರ ಕುದ್ಕುಳಿ, ಶ್ರೀಮತಿ ವಾಹಿನಿ ಪ್ರಶಾಂತ್ ಪೂಜಾರಿ, ರವಿಚಂದ್ರ ಕೊಡಿಯಾಲಬೈಲು, ರಾಧಾಕೃಷ್ಣ ಕಾಯರ್ತೋಡಿ, ದಿನೇಶ್ ಅಜ್ಜಾವರ, ಪ್ರಕಾಶ್ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಮಳಿಗೆಯಲ್ಲಿ ಹೊಸ ವಿನ್ಯಾಸದ ಪಾದರಕ್ಷೆಗಳು ಹಾಗೂ ಕೊಡೆ, ರೈನ್ ಕೋಟ್, ಬ್ಯಾಗ್ ಗಳು ಮಿತ ದರದಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.