ಸುಳ್ಯದಲ್ಲಿ ಕೊರೋನಾಗೆ ಎರಡನೇ ಬಲಿ ಬೆಳ್ಳಾರೆಯ ಮಹಿಳೆ ಪುತ್ತೂರು ಆಸ್ಪತ್ರೆಯಲ್ಲಿ ಮೃತ್ಯು – ಬೆಳ್ಳಾರೆಯಲ್ಲಿ ಅಂತ್ಯ ಸಂಸ್ಕಾರ

Advt_Headding_Middle
Advt_Headding_Middle

 

ಬೆಳ್ಳಾರೆ ಸಮೀಪದ 62 ವರ್ಷದ ಮಹಿಳೆಯೊಬ್ಬರು ಕೊರೋನಾ ಸೋಂಕಿನಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಜು.14 ರಂದು ಮೃತಪಟ್ಟಿದ್ದು ಅವರ ಅಂತ್ಯ ಸಂಸ್ಕಾರವು ತಡಗಜೆಯಲ್ಲಿರುವ ಬೆಳ್ಳಾರೆ ಗ್ರಾ.ಪಂ. ಘನತ್ಯಾಜ್ಯ ಘಟಕದ ಸಮೀಪ ಜು.15 ರಂದು ಮಧ್ಯಾಹ್ನ ನಡೆಯಿತು.

ಜು.14ರಂದು ನೆಟ್ಟಾರಿನ ಮಹಿಳೆ ಮನೆಯಲ್ಲಿ ಅಸೌಖ್ಯಕ್ಕೊಳಗಾಗಿ ಅವರನ್ನು ಬೆಳ್ಳಾರೆ ಖಾಸಗಿ ಕ್ಲಿನಿಕ್ ಗೆ ಕರೆದುಕೊಂಡು ಬರಲಾಯಿತು.
ಅಲ್ಲಿ ವೈದ್ಯರು ಪುತ್ತೂರಿಗೆ ಕರೆದುಕೊಂಡು ಹೋಗಿ ಎಡ್ಮಿಟ್ ಮಾಡುವಂತೆ ತಿಳಿಸಿದ್ದರು.
ಅದರಂತೆ ಮಹಿಳೆಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಕುಂಬ್ರ ತಲುಪುವಾಗ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ.ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಹೋದಾಗ ಅಲ್ಲಿ ಕೋವಿಡ್ ಟೆಸ್ಟ್ ಮಾಡಿಸಿ ಬನ್ನಿ ಎಂದು ಹೇಳಿದರೆನ್ನಲಾಗಿದೆ.
ಬಳಿಕ ಅಲ್ಲಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿತ್ತು.

ಮಹಿಳೆ ಬಿಪಿ, ಶುಗರ್, ಲಂಗ್ಸ್ ,ಹೃದಯಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ಅವರ ಕೋವಿಡ್ ಪರೀಕ್ಷೆ ನಡೆಸಿದ್ದು ಅವರಿಗೆ ಸೋಂಕು ದೃಢ ಪಟ್ಟಿರುವುದು ಬೆಳಕಿಗೆ ಬಂತು. ತೀರಾ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಸಂಜೆ ಮೃತಪಟ್ಟಿದ್ದು ಅವರ ಮೃತದೇಹವನ್ನು ಜು.15 ರಂದು ಮಧ್ಯಾಹ್ನ ಬಿಟ್ಟುಕೊಡಲಾಯಿತು.

ಅಂತ್ಯ ಸಂಸ್ಕಾರ : ಜಿಲ್ಲಾಡಳಿದ ಆದೇಶದಂತೆ ಮಹಿಳೆಯ ಅಂತ್ಯ ಸಂಸ್ಕಾರ ಬೆಳ್ಳಾರೆ ಗ್ರಾಮ ಪಂಚಾಯತ್ ಜಾಗವಾದ ತಡಗಜೆಯ ಘನತ್ಯಾಜ್ಯ ಘಟಕದ ಸಮೀಪ ನಡೆಯಿತು.
ಮೃತದೇಹದ ಅಂತ್ಯ ಸಂಸ್ಕಾರ ತಡಗಜೆಯಲ್ಲಿ ನಡೆಯುತ್ತದೆ ಎಂಬ ಸುದ್ದಿ ತಿಳಿದ ಮುಂಡಾಜೆ ತಡಗಜೆ ಪರಿಸರದ ನಿವಾಸಿಗಳು ಗ್ರಾಮ ಪಂಚಾಯತ್ ಪಿ.ಡಿ.ಒ ಬಳಿ ಬಂದು ಅಲ್ಲಿ ಅಂತ್ಯ ಸಂಸ್ಕಾರ ನಡೆಸಲು ಆಕ್ಷೇಪ ವ್ಯಕ್ತಪಡಿಸಿದರು.
ಬಳಿಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಂಜಯ ಕೆ.ಆರ್.ರವರು ಬೆಳ್ಳಾರೆ ಠಾಣೆಯ ಎಸ್.ಐ.ಯವರಿಗೆ ವಿಷಯ ತಿಳಿಸಿದರು.
ಎಸ್.ಐ.ಆಂಜನೇಯ ರೆಡ್ಡಿಯವರು ಮತ್ತು ಸುಳ್ಯ ತಹಶೀಲ್ದಾರ್ ಅನಂತಶಂಕರವರು,ಕಂದಾಯ ಇಲಾಖೆಯವರು ಸ್ಥಳಕ್ಕೆ ಬಂದರು.
ಬಳಿಕ ಮಹಿಳೆಯ ಅಂತ್ಯ ಸಂಸ್ಕಾರ ನಡೆಯಿತು.
ಇಲಾಖಾಧಿಕಾರಿಗಳು ಸ್ಥಳಕ್ಕೆ ಬಂದಾಗ ಆಕ್ಷೇಪ ವ್ಯಕ್ತಪಡಿಸಿದವರು ಅಲ್ಲಿ ಇರಲಿಲ್ಲವೆನ್ನಲಾಗಿದೆ.

ಅಂತ್ಯ ಸಂಸ್ಕಾರ ಸಮಯದಲ್ಲಿ ಮನೆಯವರು ಹಾಗೂ ಇತರರು ಪಿ.ಪಿ.ಇ.ಕಿಟ್ ಹಾಕಿಕೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.