ಸುಳ್ಯ ಕನಕಮಜಲು ಜಾನುವಾರು ಸಾಗಾಟ ಪ್ರಕರಣ ಉನ್ನತ ಮಟ್ಟದ ಪೋಲಿಸ್ ಅಧಿಕಾರಿಗಳು ತನಿಖೆ ನಡೆಸಲು ಎಸ್.ಡಿ.ಪಿ.ಐ ಆಗ್ರಹ

Advt_Headding_Middle
Advt_Headding_Middle

 

ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾವು ಎಂಬಲ್ಲಿಂದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಅನುಮತಿಯೊಂದಿಗೆ ಶ್ರೀಮತಿ ಡಯಾನ ಜ್ಞಾನಪ್ರಕಾಶ್ ಎಂಬವರು ಕಾವು ವಿನ ದಿವ್ಯಾನಂದ ಶೆಟ್ಟಿ ಎಂಬವರಿಂದ ಖರೀದಿಸಿದ ಒಂದು ಹಾಲು ಕೆರಯುವ ದನ ಮತ್ತು ಇನ್ನೊಂದು ಗಬ್ಬದ ದನವನ್ನು ಪಿಕಪ್ ವಾಹನದಲ್ಲಿ ಉಮ್ಮರ್ ಫಾರೂಕ್ ಎಂಬವರು ಸಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ವಾಹನವನ್ನು ಹಿಂಬಾಲಿಸಿ ಸಂಘಪರಿವಾರದ ಗೂಂಡಾಗಳು ಪೊಲೀಸರ ಸಮ್ಮುಖದಲ್ಲಿ ವಾಹನವನ್ನು ಪುಡಿಗೈದು ಹಲ್ಲೆ ನಡೆಸಿ ಕಾನೂನು ಮೀರಿ ವರ್ತಿಸಿರುವುದು ಕಂಡು ಬಂದಿದೆ.ಇದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ ಮತ್ತು ಉನ್ನತ ಮಟ್ಟದ ಪೋಲಿಸ್ ಅಧಿಕಾರಿಗಳು ಈ ಪ್ರಕರಣವನ್ನು ತನಿಖೆ ನಡೆಸಬೇಕು.
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಅನುಮತಿಯೊಂದಿಗೆ ಕಾವು ನಿಂದ ತರುತ್ತಿದ್ದ ಸಂದರ್ಭದಲ್ಲಿ ಭಜರಂಗದಳದ ಸುಳ್ಯ ತಾಲೂಕು ಸಂಯೋಜಕ ನಿಕೇಶ್ ಉಬರಡ್ಕ ನೇತ್ರತ್ವದ ಐದಾರು ಗೂಂಡಾಗಳ ತಂಡ ಕೊಲೆಗೈಯ್ಯುವ ಉದ್ದೇಶದಿಂದಲೇ ತಲ್ವಾರ್ ಝಳಪಿಸುತ್ತಾ‌ ಹಿಂಬಾಲಿಸಿಕೊಂಡು ಬಂದು ಕನಕಮಜಲುವಿನಲ್ಲಿ ಈ ಗೂಂಡಗಳ ತಂಡ ತಲ್ವಾರ್ ,ಕತ್ತಿ ದೊಣ್ಣೆಗಳೊಂದಿಗೆ ಬಂದು ಪಿಕಪ್ ವಾಹನಕ್ಕೆ ಅವರ ಬೈಕ್ ಗಳನ್ನು ಅಡ್ಡವಿಟ್ಟು ಚಾಲಕನನ್ನು ಕಡಿಯಲು ಪ್ರಯತ್ನಿಸಿದ್ದು.ಗೂಂಡಾಗಳ ತಲ್ವಾರ್ ನ ಲಯ ತಪ್ಪಿ ಪಿಕಪ್ ನ ಮುಂಭಾಗಕ್ಕೆ ಸಿಕ್ಕಿ ವಾಹನಕ್ಕೆ ಹಾನಿಯಾಗಿದೆ.ಮತ್ತು ಅವರು ಬೀಸಿದ ರಭಸಕ್ಕೆ ತಲ್ವಾರ್ ಎರಡು ತುಂಡಾಗಿದೆ.
ಅವರಿಂದ ತಪ್ಪಿಸಿಕೊಂಡು ಬಂದ ವಾಹನವನ್ನು ಭಜರಂಗದಳದ ಗೂಂಡಾಗಳು ಹಿಂದಿನಿಂದ ಪುನಃ ರಾಜರೋಷವಾಗಿ ತಲ್ವಾರ್ ದೊಣ್ಣೆಗಳನ್ನು ಹಿಡಿದು ಹಿಂಬಾಲಿಸಿಕೊಂಡು ಬಂದಾಗ ಸ್ವಾಭಾವಿಕವಾಗಿ ತನ್ನ ಜೀವಭಯದಿಂದ ಮತ್ತು ಪರಿಭ್ರಮಣೆ ಯಿಂದ ಸುಳ್ಯದ ಜ್ಯೋತಿ ಸರ್ಕಲ್ ನಲ್ಲಿ ಪೋಲಿಸರ ಸೂಚನೆಯ ಗಮನ ಕೊಡದೆ ವಾಹನವನ್ನು ಸುಳ್ಯ ಪೋಲಿಸ್ ಠಾಣೆಗೆ ಕೊಂಡೊಯ್ಯುವ ಸಲುವಾಗಿ ವೇಗವಾಗಿ ಚಲಿಸುತ್ತಾನೆ,ಆದರೆ ವಾಹನವನ್ನು ಹಿಂದಿನಿಂದ ಬೆನ್ನಟ್ಟಿಕೊಂಡು ಬಂದ ತಂಡ ಶ್ರೀರಾಂ ಪೇಟೆಯಲ್ಲಿ ಪುನಃ ಅಡ್ಡಲಾಗಿ ನಿಂತ ಕಾರಣ ಪೋಲಿಸ್ ಠಾಣೆಗೆ ಹೋಗಲು ಸಾದ್ಯವಾಗದೆ ನೇರವಾಗಿ ಜ್ಯೂನಿಯರ್ ಕಾಲೇಜ್ ರಸ್ತೆಯಲ್ಲಿ ಸಾಗಿದಾಗ ಎದುರಿನಿಂದ ಬಂದ ಒಂದು ವಾಹನಕ್ಕೆ ಒರೆಸಿದ ಕಾರಣ ವಾಹನವನ್ನು ಸಮೀಪದಲ್ಲೇ ಇರುವ ದನ ಖರೀದಿದಾರರಾದ ಡಯಾನ ರವರ ಮನೆಯ ಸಮೀಪ ವಾಹನ ನಿಲ್ಲಿಸಿ ಡಯಾನರವರ ಮನೆಯ ಸಮೀಪದ ಬಾಡಿಗೆ ಮನೆಗೆ ಓಡಿಹೋಗಿ ಪಾರಾಗಲು ಪ್ರಯತ್ನಿಸುತ್ತಾನೆ,ಅಲ್ಲಿಗೆ ಬಂದ ಭಜರಂಗದಳದ ಗೂಂಡಾಗಳೊಂದಿಗೆ ಪೋಲಿಸರು ಸೇರಿ ಮನೆಯ ಕಿಟಕಿ ಗಾಜುಗಳನ್ನು ಒಡೆದು ಮುಂಭಾಗಿಲಿಗೆ ತಲ್ವಾರ್ ಮತ್ತು ದೊಣ್ಣೆಯಿಂದ ಒಡೆದು ವಾಹನ ಚಾಲಕ ಉಮರ್ ಫಾರೂಕ್ ನನ್ನು ತಳಿಸಿ ಠಾಣೆಗೆ ಕರೆದೊಯ್ಯುತ್ತಾರೆ.
ಅದಲ್ಲದೇ ಪೋಲಿಸರ ಸಮ್ಮುಖದಲ್ಲೇ ಪಿಕಪ್ ವಾಹನವನ್ನು ಪುಡಿಗೈದು ಗೂಂಡಾಗಿರಿ ನಡೆಸುವಾಗ ಪೋಲಿಸರು ಮೂಕ ಪ್ರೇಕ್ಷರಾಗಿ ನಿಂತು ಮೌನ ಸಮ್ಮತಿ ನೀಡುತ್ತಾರೆ. ಠಾಣೆಗೆ ಕರೆತಂದ ನಂತರ ಚಾಲಕನ ಮೇಲೆ ಕಠಿಣ ಕಾಯಿದೆಗಳನ್ನು ಹಾಕಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದು ಅಕ್ರಮ ಮತ್ತು ಅನ್ಯಾಯವಾಗಿದೆ.
“ಈ ಎಲ್ಲಾ ಘಟನೆಗಳು ಡಯಾನರವರ ಮನೆಯ ಮುಂಭಾಗದಲ್ಲಿರುವ ಮಂಗಳೂರು ಫರ್ನಿಚರ್ ರವರ ಸಿ.ಸಿ ಕೆಮರಾದಲ್ಲಿ ಸೆರೆಯಾಗಿರುತ್ತದೆ”
ಈ ವಿಚಾರ ತಿಳಿದ ಸುಳ್ಯ ಪೋಲಿಸರು ಮಂಗಳೂರು ಫರ್ನಿಚರ್ ರವರಿಗೆ ಕರೆ ಮಾಡಿ ಆ ಸಮಯದಲ್ಲಿನ ರೆಕಾರ್ಡ್ ಗಳನ್ನು ಅಳಿಸಿ ಹಾಕುವಂತೆ ಒತ್ತಡ ಮತ್ತು ಬೆದರಿಕೆ ಹಾಕಿದ್ದಾರೆ ಎಂಬ ಚರ್ಚೆಗಳು ಕೂಡ ಸಾರ್ವಜನಿಕ ವಲಯದಲ್ಲಿ ನಡಿತಾ ಇದೆ.ಒಂದು ವೇಳೆ ಡಿಲಿಟ್ ಮಾಡಿದ್ದರು ಉನ್ನತ ಅಧಿಕಾರಿಗಳು ಡಿಜಿಟಲ್ ತಂತ್ರಜ್ಞಾನ ಬಳಸಿ ಬ್ಯಾಕಪ್ ಮಾಡಿ ಸತ್ಯಾಸತ್ಯತೆ ಹೊರ ತರಬೇಕು.
ಸುಳ್ಯ ತಾಲೂಕಿನಲ್ಲಿ ಕಳೆದ ಕೆಲವು ತಿಂಗಳಿನಿಂದ ಸಕ್ರಮವಾಗಿ ಕ್ರಷಿಕರಿಗೆ ಹೈನುಗಾರಿಕೆ ನಡೆಸಲು ದನಗಳನ್ನು ಸಾಗಾಟ ಮಾಡುತ್ತಿದ್ದಾಗ ಭಜರಂಗದಳದ ಗೂಂಡಾಗಳು ಗೂಂಡಾಗಿರಿ ಮಾಡುತ್ತಿದ್ದರು ಸುಳ್ಯ ಪೋಲಿಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಮತ್ತು ಕಾನೂನು ಬಾಹಿರ ವಾಗಿ ಸಕ್ರಮ ಸಾಗಾಟಗಾರರ ವಿರುದ್ಧವೇ ಪ್ರಕರಣ ದಾಖಲಿಸುತ್ತಿರುವುದರಿಂದ ಭಜರಂಗದಳದ ಗೂಂಡಾಗಳಿಗೆ ಕ್ರೌರ್ಯ ಮೆರೆಯಲು ಪ್ರಚೋದನೆ ಮತ್ತು ಬೆಂಬಲ ಸಿಕ್ಕಿದಂತಾಗಿದೆ.ಇದು ಇದೇ ರೀತಿಯಲ್ಲಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇದು ಕೋಮುಗಲಭೆ ನಡೆಯಲು ಕಾರಣವಾಗುವ ಸಂಭವ ಕೂಡ ಇದೆ ಮತ್ತು ಇದಕ್ಕೆ ಪೋಲಿಸ್ ಇಲಾಖೆಯೇ ನೇರ ಕಾರಣವಾಗಲಿದೆ.
ಆದ್ದರಿಂದ ಉನ್ನತ ಮಟ್ಟದ ಪೋಲಿಸ್ ಅಧಿಕಾರಿಗಳು ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಾದ ಭಜರಂಗದಳದ ಗೂಂಡಾಗಳ ವಿರುದ್ಧವಾಗಿ ಪ್ರಕರಣ ದಾಖಲಿಸಬೇಕು.ಹಾಗೂ ಡಿಜಿಟಲ್ ತಂತ್ರಜ್ಞಾನ ಉಪಯೋಗಿಸಿ ಮಂಗಳೂರು ಫರ್ನಿಚರ್ ರವರ ಸಿ.ಸಿ ಕೆಮರಾ ದಲ್ಲಿ ಸೆರೆಯಾದ ಘಟನಾವಳಿಗಳನ್ನು ಬ್ಯಾಕಪ್ ಮಾಡಿ ತೆಗೆಯಬೇಕು
ಮಾತ್ರವಲ್ಲದೆ ಭಜರಂಗದಳದ ಗೂಂಡಾಗಳೊಂದಿಗೆ ದೌರ್ಜನ್ಯ ನಡೆಸಲು ಶಾಮೀಲಾದ ಪೋಲಿಸರ ವಿರುದ್ಧವು ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಎಸ್ ಎಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.