ಐವರ್ನಾಡಿನಲ್ಲಿ ಕೊರೋನಾ ಸೋಂಕಿತನ ಅಂತ್ಯಕ್ರಿಯೆ

Advt_Headding_Middle
Advt_Headding_Middle

 

ಐವರ್ನಾಡಿನ ಪಡ್ಪು ಮಡ್ತಿಲದ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿತರಾಗಿ ಸುಳ್ಯದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಅವರ ಅಂತ್ಯಸಂಸ್ಕಾರವು ಇಂದು ಐವರ್ನಾಡು ಗ್ರಾಮ ಪಂಚಾಯತ್ ಅಧೀನದಲ್ಲಿರುವ ಸಾರ್ವಜನಿಕ ರುದ್ರಭೂಮಿ ಮುಕ್ತಿಧಾಮ ಕಟ್ಟಡದಲ್ಲಿ ನಡೆಯಿತು.

Advertisement

 

54 ವರ್ಷ ಪ್ರಾಯದ ಈ ವ್ಯಕ್ತಿ ಮನೆಯಲ್ಲಿ ಅಸೌಖ್ಯಕ್ಕೊಳಗಾಗಿ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಅವರು ಜು .14 ರಂದು ನಿಧನರಾಗಿದ್ದು ಅವರ ಮೃತದೇಹವನ್ನು ಆಸ್ಪತ್ರೆಯಲ್ಲೇ ಇರಿಸಿ ಗಂಟಲದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿಯು ಜು.16 ರಂದು ಬಂದಿದ್ದು ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು.

 

ಅವರ ಮೃತದೇಹವನ್ನು ಖಾಸಗಿ ಆಸ್ಪತ್ರೆಯವರು ಜು.17 ರಂದು ಮನೆಯವರಿಗೆ ಬಿಟ್ಟುಕೊಟ್ಟಿದ್ದು ಅಂತ್ಯ ಸಂಸ್ಕಾರವು ಐವರ್ನಾಡು ಗ್ರಾಮ ಪಂಚಾಯತ್ ಅಧೀನದಲ್ಲಿರುವ ಸಾರ್ವಜನಿಕ ರುದ್ರಭೂಮಿ ಮುಕ್ತಿಧಾಮ ಕಟ್ಟಡದಲ್ಲಿ ನಡೆಯಿತು.
ಅಂತ್ಯಕ್ರಿಯೆ ನಡೆಸುವವರು ಮತ್ತು ಮನೆಯವರು ಪಿ.ಪಿ.ಇ.ಕಿಟ್ಟನ್ನು ಅಳವಡಿಸಿಕೊಂಡು ಅಂತ್ಯಕ್ರಿಯೆ ನಡೆಸಲಾಯಿತು.
ಅಂತ್ಯಕ್ರಿಯೆಗೆ ಗ್ರಾಮ ಪಂಚಾಯತ್ ಸಕಲ ಸಿದ್ಧತೆಯನ್ನು ಮಾಡಿತ್ತು.
ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸುಳ್ಯ ತಹಶೀಲ್ದಾರ್ ಅನಂತಶಂಕರ,ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಅಶ್ವಥಿ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್,ಕಂದಾಯ ಇಲಾಖೆಯವರು,ಆರೋಗ್ಯ ಕಾರ್ಯಕರ್ತೆಯರು,ಆಶಾಕಾರ್ಯಕರ್ತೆಯರು,ಗ್ರಾಮ ಪಂಚಾಯತ್ ಸಿಬ್ಬಂದಿವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.