Breaking News

ಸುಳ್ಯದ ಬ್ಯಾಂಕ್ ಉದ್ಯೋಗಿ ಮಹಿಳೆಗೆ ಮಿಸೆಸ್ ಕರ್ನಾಟಕ – 2020 ಕಿರೀಟ

Advt_Headding_Middle
Advt_Headding_Middle

 

ಸುಳ್ಯದ ಬ್ಯಾಂಕ್ ಆಫ್ ಬರೋಡಾ ಉದ್ಯೋಗಿಯಾಗಿರುವ ಬೀರಮಂಗಲ ನಿವಾಸಿ ಶ್ರೀಮತಿ ಸುಪ್ರೀತಾ ಕೆ.ಎಸ್.ರವರು *ಮಿಸೆಸ್ ಕರ್ನಾಟಕ -2020* ಆಗಿ ಆಯ್ಕೆಯಾಗಿದ್ದು, ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.


ಮೈಸೂರಿನ ಆರ್.ಆರ್.ಗ್ರೂಪ್ಸ್ (ರಾಕಿಂಗ್ ರತು ಗ್ರೂಪ್ಸ್) ನವರು ಪ್ರತಿವರ್ಷ ಈ ಸೌಂದರ್ಯ ಸ್ಪರ್ಧೆ ಏರ್ಪಡಿಸುತ್ತಿದ್ದು, ಈ ವರ್ಷದ ಕಿರೀಟವನ್ನು ಶ್ರೀಮತಿ ಸುಪ್ರೀತ ಕೆ.ಎಸ್. ರವರು ಗೆದ್ದುಕೊಂಡಿದ್ದಾರೆ.
ಸ್ಪರ್ಧೆ ಜು.11 ರಂದು ಮೈಸೂರಿನ ಕಂಟ್ರಿ ಇನ್ ಹೋಟೆಲ್ ನ ಸಭಾಂಗಣದಲ್ಲಿ ನೆರವೇರಿತು. ಸ್ಪರ್ಧೆಯಲ್ಲಿ ಗೆದ್ದ ಸುಪ್ರೀತಾರವರಿಗೆ ಆರ್.ಆರ್.ಗ್ರೂಪ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಶ್ ಸಿದ್ಧಮಲ್ಲಪ್ಪವಂಶ ರವರು ಕಿರೀಟ ತೊಡಿಸಿ, ಕಪ್ ನೀಡಿ ಗೌರವಿಸಿದರು.

Advertisement
ಮಿಸೆಸ್ ಕರ್ನಾಟಕ ಆಗಿ ಆಯ್ಕೆಯಾಗಿರುವ ಶ್ರೀಮತಿ ಸುಪ್ರೀತಾ ಕೆ.ಎಸ್. ರವರು ಸುಳ್ಯ ಬೀರಮಂಗಲ ನಿವಾಸಿಯಾಗಿರುವ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಅಜಿತ್ ಬಿ.ಟಿ. ಯವರ ಪತ್ನಿ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಸೂರ್ಯಕಲಾ ತ್ರಿವಿಕ್ರಮ ರವರ ಸೊಸೆ.
ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿಯಾಗಿರುವ ಪುತ್ತೂರು ನಿವಾಸಿ ಕೆ.ಸುರೇಶ್-ಸವಿತಾ ಸುರೇಶ್ ದಂಪತಿಯ ಪುತ್ರಿಯಾಗಿರುವ ಶ್ರೀಮತಿ ಸುಪ್ರೀತಾರವರು ಉಡುಪಿಯಲ್ಲಿ ಪ್ರೌಢ ಹಾಗೂ ಪಿ.ಯು.ಸಿ. ಶಿಕ್ಷಣ ಪೂರೈಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿ ಪಡೆದರು. ಬಳಿಕ ವಿಜಯಾ ಬ್ಯಾಂಕ್ ಉದ್ಯೋಗಿಯಾಗಿ ಸೇರ್ಪಡೆಗೊಂಡರು. ಚಿತ್ರಕಲೆ, ಸಂಗೀತ, ಯೋಗ, ಅಕ್ವೇರಿಯಂ, ಕರಕುಶಲತೆ, ಗಾರ್ಡನಿಂಗ್ ಹವ್ಯಾಸ ಹೊಂದಿರುವ ಇವರು ೨೦೦೮ ರಲ್ಲಿ ಬಿ.ಬಿ.ಎಂ. ಪದವಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರು.
8 ವರ್ಷದ ಪುತ್ರ ಇಶಾನ್ ತಾಯಿಯಾಗಿರುವ ಸುಪ್ರೀತಾ ಈಗ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.