ಗೋ ಕರೋನಾ ಗೋ ವಿಶ್ವ ವಿಖ್ಯಾತ ಮಂತ್ರ ದೇಶದೆಲ್ಲೆಡೆ ಮೊಳಗಿತು..

Advt_Headding_Middle

 

ಕರೋನಾ ವೈರಸ್ಸಿಗೆ ಇಂಗ್ಲಿಷ್ ಗೊತ್ತಿಲ್ಲವೇ ಅಥವಾ ಕಿವಿ ಕೇಳಿಸುವುದಿಲ್ಲವೋ..

ಹಳ್ಳಿ ಮದ್ದಿನ ಪ್ರಭಾವದಿಂದ ಕರೋನಾ ಆತ್ಮಹತ್ಯೆ ಮಾಡಿಕೊಂಡರೆ ಸರಕಾರವೇ ನೇರ ಹೊಣೆಯಲ್ಲವೇ..?

ವಿಶ್ವದ ಎಲ್ಲೆಡೆ ಕರೋನಾ ಎಂಬ ಮಹಾಮಾರಿ ಹಬ್ಬುತ್ತಿರುವ ಭಾರತ ದೇಶದಲ್ಲಿ ಗೋ ಕರೋನಾ ಗೋ ಎಂಬ ವಿಶ್ವವಿಖ್ಯಾತ ಮಂತ್ರವನ್ನು ಉಚ್ಛರಿಸಿ ಅದನ್ನು ಹೊರದಬ್ಬಲು ಪ್ರಯತ್ನಿಸಿದರು. ದುರಾದೃಷ್ಟವೆಂದರೆ ಚೀನಿ ದೇಶದಲ್ಲಿ ಹುಟ್ಟಿಕೊಂಡ ವೈರಸ್ಸಿಗೆ ಇಂಗ್ಲಿಷ್ ಬಾರದ ಕಾರಣವೋ ಅಥವಾ ಕಿವಿ ಇಲ್ಲದ ಕಾರಣವೂ ಗೊತ್ತಿಲ್ಲ , ಆದ್ರೆ ಏನು ಪ್ರಯೋಜನವಾಗಲಿಲ್ಲ ತದನಂತರ ಕೆಲ ಭಾರತೀಯ ವಾಟ್ಸಪ್ ವಿಜ್ಞಾನಿಗಳು ಕೊರೊನಾಕ್ಕೆ ಬೆಳ್ಳುಳ್ಳಿ ಅಥವಾ ಭಾರತೀಯ ವೈದ್ಯಕೀಯ ಪದ್ಧತಿ ಪ್ರಕಾರದ ಚಿಕಿತ್ಸೆ ಮಾಡಬಹುದೆಂದು ಪ್ರಚಾರ ಮಾಡಿದರು.
ಅಮೂಲ್ಯವಾದ ಎರಡು ವಾರ ಕಾಲ ಕಾಲಹರಣ ಮಾಡಿ ಕೊನೆಗೂ ಗೊತ್ತು ಗುರಿ ಇಲ್ಲದೆ ಸರಕಾರ ಲಾಕ್ಡೌನ್ ಮಾಡಿದರು . ಕೆಲವು ದಿನಗಳ ನಂತರ ನಮ್ಮ ದೇಶದ ಬಡ ಜನರು ಕೆಲಸವಿಲ್ಲದೇ ಆಹಾರವಿಲ್ಲದೆ ತುಂಬಾ ಕಾಲ ಬದುಕಿ ಉಳಿಯಲಾರರು ಎಂದು ಸರಕಾರಕ್ಕೆ ಮನವರಿಕೆಯಾಯಿತು. ದಿನ ದಿನಕ್ಕೆ ಸೋಂಕಿತರ ಸಂಖ್ಯೆ ವಿಪರೀತ ಹೆಚ್ಚುತ್ತಿರುವಾಗ ಅನ್ಲಾಕ್ ಮಾಡಲು ಶುರು ಮಾಡಿದರು ಈ ಮಧ್ಯೆ ವಲಸೆ ಕಾರ್ಮಿಕರು ತಮ್ಮ ತಮ್ಮ ಪ್ರದೇಶಕ್ಕೆ ಹಿಂತಿರುಗಿಸಲು ನಾನಾ ವಿಧದ ಕಸರತ್ತು ಮಾಡಲಾಯಿತು.ಈ ಮೂಲಕ ಕೆಲವು ಮೆಟ್ರೊ ಸಿಟಿ ಮಾತ್ರವಲ್ಲದೆ ಹಳ್ಳಿಹಳ್ಳಿಗೂ ರೋಗ ಹರಡುವಂತಾಯಿತು .
ಆದರೆ ಮಾಧ್ಯಮದವರು ಮಾತ್ರ ಸೂರ್ಯಗ್ರಹಣ ಚಂದ್ರಗ್ರಹಣ ಅಂತ ಹೇಳಿ ದೇಶಕ್ಕೆ ಇದರಿಂದ ಭಯಂಕರ ತೊಂದರೆ ಇದೆ ಎಂದು ದಿನವಿಡೀ ಕೊರೆದು ಮೊದಲೇ ಕಂಗಾಲಾದ ಜನಗಳನ್ನು ದಿಕ್ಕು ಪಾಲಾಗುವಂತೆ ಮಾಡಿದರು .
ಗ್ರಹಣ ವೆಂದರೆ ಏನು ಎಂದು ತಿಳಿಯಲು ಕನಿಷ್ಠ ಪ್ರಾಥಮಿಕ ವಿದ್ಯಾಭ್ಯಾಸ ಇರುವ ಯಾರನ್ನಾದರೂ ಟಿವಿಯಲ್ಲಿ ಚರ್ಚೆಗೆ ಕರೆಯಬಹುದಿತ್ತು .
ಭಾರತೀಯ ವೈದ್ಯಕೀಯ ಪದ್ಧತಿ ಪ್ರಕಾರ ಟ್ರೀಟ್ಮೆಂಟ್ ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಕೂಡ ದಿನಕ್ಕೊಬ್ಬರಂತೆ ಮದ್ದು ಕಂಡು ಹಿಡಿಯುತ್ತಲೇ ಇದ್ದಾರೆ. ಕೊನೆಗೊಮ್ಮೆ ಹಳ್ಳಿ ಮದ್ದು ಕಂಡು ಹಿಡಿದಿದ್ದಾರೆ ಅಂತ ಯಾರಾದರೂ ಹೇಳಿದರೆ ಅಂಥವರಿಗೆ ಪದ್ಮಭೂಷಣ್ ಪ್ರಶಸ್ತಿ ಕೊಟ್ಟರೂ ಅಚ್ಚರಿ ಪಡುವಂತಿಲ್ಲ .
ಇದನ್ನರಿತ ಕರೋನಾ ಎಲ್ಲಿಯಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸರಕಾರವೇ ನೇರ ಹೊಣೆ.
ಒಬ್ಬ ವ್ಯಕ್ತಿಯ ಹುಟ್ಟಿನಿಂದ ಹಿಡಿದು ಸಾವಿನವರೆಗೂ ಎಲ್ಲಾ ವಿಷಯವನ್ನು ಚಾಚೂ ತಪ್ಪದೆ ಹೇಳುವ ಜ್ಯೋತಿಷ್ಯರು ಕೂಡ ಕರೋನಾದ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ . ಸರಕಾರ ಈ ಕೂಡಲೇ ಇವರನ್ನೆಲ್ಲಾ ಬಂಧಿಸಿ ಸಿಬಿಐ ತನಿಖೆ ತನಿಖೆಗೆ ಒಳಪಡಿಸಬೇಕು.
ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತ ಇಡೀ ವಿಶ್ವಕ್ಕೆ ಮಾದರಿ ಅಂತ ಪ್ರಧಾನಿ ತಿಳಿಸಿದ್ದಾರೆ . ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸುಳ್ಯದಲ್ಲಿ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳು ಸೀಲ್ ಡೌನ್ ಮಾಡಿ ಹೊಸ ಸುಳ್ಯ ಮಾಡೆಲ್ ಸರಕಾರ ಪರೀಕ್ಷಿಸಲಿದ್ದಾರೆ . ಕೋರೊನ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಯೋಗಾಸನ ಮಾಡಲು ವಾಟ್ಸಪ್ ವಿಜ್ಞಾನಿಗಳು ತಿಳಿಸಿದ್ದಾರೆ.

ಪ್ರಸನ್ನ ಕುಮಾರ್, ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.